News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿಯಾಚಿನ್­ಗೆ ತೆರಳಿ ಯೋಧರಿಗೆ ರಾಖಿ ಕಟ್ಟಿ ಸ್ವಾತಂತ್ರ್ಯೋತ್ಸವ ಆಚರಿಸಲಿರುವ ಸ್ಮೃತಿ

ನವದೆಹಲಿ: 70 ನೇ ಸ್ವಾತಂತ್ರ್ಯೊತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸಲು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿಯವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್­ಗೆ ತೆರಳಿ ಅಲ್ಲಿ ಯೋಧರಿಗೆ ರಾಖಿ ಕಟ್ಟುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದ್ದಾರೆ.  ದೇಶದ ಎಲ್ಲಾ ಜನರ ಪರವಾಗಿ ಯೋಧರಿಗೆ ಕೃತಜ್ಞತೆ ಸಲ್ಲಿಸುವ...

Read More

ಮೋದಿ, ಪುಟಿನ್, ಜಯಾರಿಂದ ನ್ಯೂಕ್ಲಿಯರ್ ಘಟಕ ಲೋಕಾರ್ಪಣೆ

ಚೆನ್ನೈ : ತಮಿಳುನಾಡಿನಲ್ಲಿ ಸ್ಥಾಪಿತಗೊಂಡಿರುವ ಕೂಡಂಕುಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ನ ಘಟಕವನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಸಿಎಂ ಜಯಲಲಿತಾ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಕೂಡಂಕುಲಂ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್‌ನಲ್ಲಿ...

Read More

ಸ್ವಾತಂತ್ರ್ಯೋತ್ಸವ ವಾರದಲ್ಲಿ ರಾಷ್ಟ್ರೀಯ ಸ್ಮಾರಕಗಳಲ್ಲಿ ಸೆಲ್ಫಿಗೆ ನಿರ್ಬಂಧ

ನವದೆಹಲಿ: ಸ್ವಾತಂತ್ರ್ಯೋತ್ಸವ ವಾರದಲ್ಲಿ ರಾಷ್ಟ್ರೀಯ ಸ್ಮಾರಕಗಳಲ್ಲಿ ಸೆಲ್ಫಿಗಳನ್ನು ಕ್ಲಿಕ್ಕಿಸುವುದಕ್ಕೆ ಪ್ರವಾಸೋದ್ಯಮ ಸಚಿವಾಲಯ ನಿರ್ಬಂಧ ಹೇರಿದೆ. ಆಗಸ್ಟ್ 12-18ರ ವರೆಗೆ ದೇಶದ ಎಲ್ಲ ಪ್ರಮುಖ ಸ್ಮಾರಕಗಳ ಮುಂದೆ ಪ್ರವಾಸಿಗರು ಸೆಲ್ಫೀ ತೆಗೆಯದಂತೆ ನಿರ್ಬಂಧ ಹೇರಲು ಪ್ರವಾಸೋದ್ಯಮ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿದೆ. ಸ್ವಾತಂತ್ರ್ಯೋತ್ಸವ...

Read More

ಮಂಗಳೂರು – ದೆಹಲಿ ವಿಮಾನ ಸೇವೆಗೆ ನಳಿನ್ ಮನವಿ

ನವದೆಹಲಿ : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು-ದೆಹಲಿಗೆ ಬೆಂಗಳೂರು ಮೂಲಕ ವಿಮಾನ ಸೇವೆ ಮತ್ತು ಮಂಗಳೂರು-ಪುಣೆ ಮತ್ತು ಮಂಗಳೂರು-ಬೆಂಗಳೂರಿಗೆ ನೂತನ ವಿಮಾನ ಸೇವೆಯನ್ನು ಆರಂಭಿಸುವಂತೆ ಕೋರಿ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ...

Read More

ವಿಗ್ ಧರಿಸುವುದು, ಇತರರ ಗಡ್ಡ ಬೋಳಿಸುವುದು ಇಸ್ಲಾಂ ವಿರೋಧಿಯಂತೆ

ನವದೆಹಲಿ : ನಮಾಝ್ ಮಾಡುವ ವೇಳೆ ವಿಗ್ ಧರಿಸುವುದು ಮತ್ತು ಇತರರ ಗಡ್ಡವನ್ನು ಬೋಳಿಸುವುದು ಹಾಗೂ ಟ್ರಿಮ್ ಮಾಡುವುದು ಇಸ್ಲಾಂಗೆ ವಿರುದ್ಧವಾದುದು, ಇದನ್ನು ಯಾರೂ ಮಾಡಕೂಡದು ಎಂದು ಮುಸ್ಲಿಂ ಸೆಮಿನಾರಿ ದಾರುಲ್ ಊಲುಮ್ ದಿಯೋಬಂದ್ ಫತ್ವಾ ಹೊರಡಿಸಿದೆ. ವಿಗ್ ಅಥವಾ ಕೃತಕ...

Read More

ರಿಯಾಯಿತಿ ದರಗಳನ್ನು ಪ್ರಕಟಿಸಿದ ಏರ್ ಇಂಡಿಯಾ, ಸ್ಪೈಸ್‌ಜೆಟ್, ಇಂಡಿಗೋ

ನವದೆಹಲಿ: ಹಲವು ವಿಮಾನಯಾನಗಳು ಮಂಗಳವಾರ ಪ್ರಯಾಣಿಕರಿಗಾಗಿ ರಿಯಾಯಿತಿ ದರಗಳನ್ನು ಘೋಷಿಸಿವೆ. ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಲಯಗಳ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ರಿಯಾಯಿತಿ ದರಗಳನ್ನು ಘೋಷಿಸಿದೆ. ಈ ರಿಯಾಯಿತಿ ದರಗಳು ಆಗಸ್ಟ್ 9ರಿಂದ 15ರ ವರೆಗೆ ಲಭ್ಯವಿರಲಿದ್ದು, ಪ್ರಯಾಣಿಕರು...

Read More

ಡ್ರಗ್ಸ್ ಕಳ್ಳಸಾಗಾಣಿಕೆಯ ಕೇಂದ್ರವಾಗುತ್ತಿದೆ ದೆಹಲಿ ಏರ್‌ಪೋರ್ಟ್

ನವದೆಹಲಿ : ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡ್ರಗ್ಸ್ ಕಳ್ಳಸಾಗಾಣಿಕೆಯ ಕೇಂದ್ರವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲಿ ವಶಕ್ಕೆ ಪಡೆಯಲಾಗುತ್ತಿರುವ ಅಪಾರ ಪ್ರಮಾಣದ ಕೊಕೈನ್, ಹೆರಾಯಿನ್‌ಗಳೇ ಇದಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಕಳವಳ ವ್ಯಕ್ತಪಡಿಸಿದ್ದಾರೆ. ಡ್ರಗ್ಸ್...

Read More

ಗೋವಾ ಪ್ರಾಥಮಿಕ ಶಾಲೆಗಳಲ್ಲಿ ಇನ್ನು ಮುಂದೆ ಯೋಗ

ಪಣಜಿ : ಇನ್ನು ಮುಂದೆ ಗೋವಾ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲೂ ಯೋಗವನ್ನು ಕಲಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಅಲ್ಲಿನ ಸಿಎಂ ಲಕ್ಷ್ಮೀಕಾಂತ್ ಪರ್‍ಸೇಕರ್ ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ‘ಪ್ರಾಥಮಿಕ ಶಾಲೆಗಳಲ್ಲಿ ಯೋಗವನ್ನು ಕಲಿಸಲು ನಿರ್ಧರಿಸಲಾಗಿದ್ದು, ಇದಕ್ಕೆ...

Read More

130 ಕೋಟಿ ರೂ. ಆಸ್ತಿ ಮುಚ್ಚಿಟ್ಟ ಎಎಪಿ ಶಾಸಕ ಕರ್ತಾರ್ ಸಿಂಗ್

ನವದೆಹಲಿ : ಎಎಪಿ ಪಕ್ಷದ ಶಾಸಕ ಕರ್ತಾರ್ ಸಿಂಗ್ ಅವರು ತಮ್ಮ ಬಳಿಯಿರುವ 130 ಕೋಟಿ ರೂ. ಮೌಲ್ಯದ ಆಸ್ತಿಯ ಲೆಕ್ಕ ನೀಡದೆ ಬಚ್ಚಿಟ್ಟಿದ್ದಾರೆ ಎಂದು ತೆರಿಗೆ ಅಧಿಕಾರಿಗಳು ಆರೋಪಿಸಿದ್ದಾರೆ. 54 ವರ್ಷದ ದಕ್ಷಿಣ ದೆಹಲಿಯ ಮೆಹರೌಲಿ ಕ್ಷೇತ್ರದ ಶಾಸಕರಾಗಿರುವ ಕರ್ತಾರ್ ಮೂಲತಃ...

Read More

ಗೋವುಗಳ ಹೆಸರಲ್ಲಿ ಹಿಂಸೆ ಮಾಡುವವರ ವಿರುದ್ಧ ಕಟು ಧೋರಣೆ ತಳೆದ ಕೇಂದ್ರ

ನವದೆಹಲಿ : ಗೋವುಗಳನ್ನು ರಕ್ಷಣೆ ಮಾಡುತ್ತೇವೆ ಎನ್ನುತ್ತಾ ಹಲ್ಲೆಗಳನ್ನು, ಹಿಂಸಾಚಾರಗಳನ್ನು ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ನಕಲಿ ಗೋರಕ್ಷಕರ ವಿರುದ್ಧ ಕ್ರಮ...

Read More

Recent News

Back To Top