ನವದೆಹಲಿ: ನೂತನ ಟೆಲಿಕಾಂ ನಿರ್ವಾಹಕ ರಿಲಯನ್ಸ್ ಜಿಯೋ ಇನ್ಫೋಕಾಂ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಹಾಗೂ ನೆಟ್ವರ್ಕ್ ಜಾಲ ಸಾಮರ್ಥ್ಯವನ್ನು ಹೆಚ್ಚಿಸಲು 30,000 ಕೋಟಿ ರೂ. ಹೆಚ್ಚುವರಿಯಾಗಿ ಹೂಡಿಕೆ ಮಾಡಲು ಚಿಂತಿಸಿದೆ.
ಇದರೊಂದಿಗೆ ರಿಲಯನ್ಸ್ ಜಿಯೋ ನೆಟ್ವರ್ಕ್ಗಾಗಿ ಅದರ ಒಟ್ಟು ಹೂಡಿಕೆ ಸುಮಾರು 1.9 ಲಕ್ಷ ಕೋಟಿ ತಲುಪಲಿದೆ.
ಆರ್ಜೆಐಎಲ್ ಸೇವೆಗಳಿಗೆ ಗ್ರಾಹಕರ ಅಭೂತಪೂರ್ವ ಪ್ರತಿಕ್ರಿಯೆ ದೃಷ್ಟಿಯಿಂದ ಹಾಗೂ ಡಿಜಿಟಲ್ ಸೇವೆಗಳಿಗೆ ನಿರೀಕ್ಷಿತ ಬೇಡಿಕೆ ಬೆಳವಣಿಗೆಗಳ ದೃಷ್ಟಿಯಿಂದ ವ್ಯಾಪ್ತಿ ಮತ್ತು ನೆಟ್ವರ್ಕ್ ಜಾಲ ವಿಸ್ತರಿಸಲು ಹೆಚ್ಚುವರಿ ಹೂಡಿಕೆ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿzದೆ ಎಂದು ರಿಲಯನ್ಸ್ ಜಿಯೋ ತನ್ನ ಶೇರುದಾರರಿಗೆ ಹಕ್ಕು ಸ್ವಾಮ್ಯ ಪ್ರಕಟಣೆಯಲ್ಲಿ ತಿಳಿಸಿದೆ.
ತನ್ನ ಆಯವ್ಯಯ ಪಟ್ಟಿ ಬಲಪಡಿಸಲು ಹಣಕಾಸು ಇಕ್ವಿಟಿ ಮೂಲಕ ಹೂಡಿಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಂಪೆನಿ ಜ.13, 2017ರಂದು ನಡೆದ ತನ್ನ ಮಂಡಳಿ ಅಧ್ಯಕ್ಷರ ಸಭೆಯಲ್ಲಿ 6 ಬಿಲಿಯನ್ ಹಕ್ಕುಗಳನ್ನು ನೀಡಲು ನಿರ್ಧರಿಸಿದೆ. ಅದರಲ್ಲಿ ರೂ. 10ರ ಶೇ.9ರಷ್ಟು ಸಂಚಿತವಲ್ಲದ ಪರಿವರ್ತಿಸಬಲ್ಲ ಐಚ್ಛಿಕ ಆದ್ಯತಾ ಶೇರುಗಳು, ಪ್ರತಿ ಒಸಿಪಿಎಸ್ನ ರೂ. 40ರಷ್ಟು ಪ್ರೀಮಿಯಂ ಹೀಗೆ ಒಟ್ಟು 30,000 ಕೋಟಿ ರೂ. ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಡಿಸೆಂಬರ್ 31ರಂತೆ, ಜಿಯೋ ಬಿಡುಗಡೆಯಾದ 4 ತಿಂಗಳಲ್ಲಿ ಕಂಪೆನಿ 72.4 ಮಿಲಿಯನ್ ಗ್ರಾಹಕರನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.