ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ರೂ.೯೯೯ ಆರಂಭಿಕ ಸ್ಥಿರ ದರದೊಂದಿಗೆ ಜಾಗತಿಕವಾಗಿ ೪೪ ಮಿಲಿಯನ್ ವೈ-ಫೈ ಹಾಟ್ರ್ಸ್ಪಟ್ ಒದಗಿಸಲು ಟಾಟಾ ಕಮ್ಯೂನಿಕೇಶನ್ಸ್ ಜೊತೆ ಸಹಭಾಗಿತ್ವ ವಹಿಸಿದೆ.
ಬಿಎಸ್ಎನ್ಎಲ್ ಮೊಬೈಲ್ ಬಳಜೆದಾರರು ವಿದೇಶಗಳಲ್ಲೂ ಮೊಬೈಲ್ ವೈ-ಫೈ ಬಳಸುವ ಬಗ್ಗೆ ದೊಡ್ಡ ಹೆಜ್ಜೆಯನ್ನಿಟ್ಟಿರುವ ಭಾರತದ ಮೊದಲ ಮೊಬೈಲ್ ನಿರ್ವಾಹಕ ಕಂಪೆನಿ ಆಗಿದೆ.
ವಿದೇಶ ಪ್ರವಾಸದ ಸಂದರ್ಭ ಬಿಎಸ್ಎನ್ಎಲ್ ಗ್ರಾಹಕರು ಹೈ-ಸ್ಪೀಡ್ ಡಾಟಾ ಸೇವೆ ಪಡೆಯಲು ಅನುಕೂಲ ಆಗುವಂತೆ ನಾವು ಟಾಟಾ ಕಮ್ಯೂನಿಕೇಶನ್ಸ್ ಜೊತೆ ಸಹಭಾಗಿತ್ವ ವಹಿಸಿದ್ದೇವೆ. ಗ್ರಾಹಕರಿಗೆ ಹಾಟ್ಸ್ಪಾಟ್ ಮೂಲಕ ಸ್ಥಿರ ದರಗಳಲ್ಲಿ ಅನಿಯಮಿತ ಡಾಟಾ ಸೇವೆ ಪಡೆಯಲು ಸಾಧ್ಯವಾಗಲಿದೆ ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುಪ್ ಶ್ರಿವಾಸ್ತವ ಹೇಳಿದ್ದಾರೆ.
ಗ್ರಾಹಕರು ಬಿಎಸ್ಎನ್ಎಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ವೈ-ಫೈ ಪ್ಲಾನ್ ಸಕ್ರಿಯಗೊಳಿಸಬಹುದು. ಇದು ಇತರ ದರಗಳೊಂದಿಗೆ ರೂ.999 ದರದ 3 ದಿನಗಳ ಯೋಜನೆ, ರೂ.1,599ರ 15 ದಿನಗಳ ಯೋಜನೆ ಮತ್ತು ರೂ. 1,999ರ 30 ದಿನಗಳ ಯೋಜನೆಗಳಲ್ಲಿ ಲಭ್ಯವಿರಲಿವೆ.
ಮೊಬೈಲ್ ಅಪ್ಲಿಕೇಶನ್ ವೈ-ಫೈ ಹಾಟ್ಸ್ಪಾಟ್ಗಳ ಸ್ಥಳಗಳನ್ನೂ ಗುರುತಿಸಲಿದೆ.
ಗ್ರಾಹಕರು ಜಗತ್ತಿನಾದ್ಯಂತ ಯಾವುದೇ ಭಾಗಗಳಲ್ಲಿ ವೈ-ಫೈ ಪ್ರವೇಶಿಸಬಹುದಾಗಿದ್ದು, ತಮ್ಮ ಯೋಜನೆ ಸಕ್ರಿಯಗೊಂಡ ಬಳಿಕ ಪ್ರತಿ ಬಾರಿ ಒನ್ ಟೈಮ್ ಪಾಸ್ವರ್ಡ್ ಹಾಕುವ ಅಗತ್ಯವಿರುವುದಿಲ್ಲ ಎಂದು ಶ್ರಿವಾಸ್ತವ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.