ನವದೆಹಲಿ: ಫೆಬ್ರವರಿ ಕೊನೆಯ ದಿನದ ಬದಲು ಮೊದಲ ದಿನವೇ ಬಜೆಟ್ ಮಂಡಿಸಲು ಕೇಂದ್ರ ನಿರ್ಧರಿಸಿದ್ದು, ಈ ಹಿಂದೂಡಿಕೆ ಸಂವಿಧಾನ ವಿರೋಧಿ ಎನ್ನಲು ಸಾಧ್ಯವಿಲ್ಲ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲ ಎಂ.ಎಲ್.ಶರ್ಮ ಅವರಿಗೆ, ಹಿಂದೂಡಿಕೆಗೆ ತಡೆ ನೀಡಲು ಕಾನೂನಿನಲ್ಲಿ ಎಲ್ಲಿಯಾದರೂ ನಿಯಮಗಳಿದ್ದರೆ ನೀವೇ ತಿಳಿಸಿ, ಪರಿಶೀಲಿಸೋಣ ಎಂದು ಸಲಹೆ ನೀಡಿದೆ.
ಮುಖ್ಯ ನ್ಯಾ. ಜೆ.ಎಸ್.ಖೇಹರ್ ಮತ್ತು ನ್ಯಾ. ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಈ ಕುರಿತು ವಿಚಾರಣೆ ನಡೆಸಿದ್ದು, ಬಜೆಟ್ ಹಿಂದೂಡಿಕೆ ಕುರಿತು ಇರಬಹುದಾದ ನಿಬಂಧನೆಗಳ ಕುರಿತೂ ನಾವು ಸಾಕಷ್ಟು ಹುಡುಕಿದೆವು, ಆದರೆ ಎಲ್ಲಿಯೂ ಅದಕ್ಕೆ ಸಂಬಂಧಿಸಿದಂತೆ ಪ್ರಸ್ತಾಪವಿಲ್ಲ ಎಂದು ತಿಳಿಸಿದ್ದಾರೆ.
2017 ರ ಫೆಬ್ರವರಿ 1 ರಂದು ಬಜೆಟ್ ಮಂಡಿಸಲು ಕೇಂದ್ರ ನಿರ್ಣಯಿಸಿದ್ದು, ಈ ನಿರ್ಣಯವು ಯಾವ ನಿಯಮವನ್ನು ಉಲ್ಲಂಘಿಸುವುದು ಎಂದು ತಿಳಿಸಲು ಜನವರಿ 20 ವರೆಗೆ ಅರ್ಜಿದಾರರಿಗೆ ಸುಪ್ರೀಂ ಸಮಯ ನೀಡಿದೆ.
ಫೆಬ್ರವರಿ 4 ರಂದು ಕೆಲ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ನಿಮಿತ್ತ, ಬಜೆಟ್ನ್ನು ಮುಂದೂಡಬೇಕೆಂದು ವಿರೋಧ ಪಕ್ಷಗಳೂ ಅಭಿಪ್ರಾಯಪಟ್ಟಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.