ನವದೆಹಲಿ: ಉತ್ತರ ಪ್ರದೇಶದ ಕೈರಾನಾ ಪ್ರದೇಶದಲ್ಲಿ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ತಯಾರಿಸಲಾಗಿದೆ ಎನ್ನಲಾದ ೨೦೩ ಪಿಸ್ತೂಲಗಳನ್ನು ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಶಮ್ಲಿ ಜಿಲ್ಲಾ ಎಸ್ಪಿ ಅಜಯ್ ಪಾಲ್, ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದರು.
ಕೈರಾನಾದಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ಕಾರ್ಯನಿರ್ವಹಿಸುತ್ತಿರುವ ಕುರಿತು ಪೊಲೀಸ್ ಮಾಹಿತಿಯಿಂದ ಗುರುವಾರ ತಿಳಿಯಿತು. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದಾಗ ಅಲ್ಲಿನ ಕಾರ್ಯಚಟುವಟಿಕೆ ದೃಶ್ಯ ಗಮನಕ್ಕೆ ಬಂತಲ್ಲದೇ, ಓರ್ವ ವ್ಯಕ್ತಿಯನ್ನು ಅಲ್ಲಿ ಬಂಧಿಸಿದೆವು ಎಂದರು.
120 ಹ್ಯಾಂಡ್ ಗನ್ಗಳು, 80 ದೇಶಿ ಪಿಸ್ತೂಲಗಳು, ಕಚ್ಚಾವಸ್ತು ಹಾಗೂ ಕೆಲವು ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಖಾನೆಯ ಸಮೀಪ ಸ್ವಿಫ್ಟ್ ಡಿಸೈರ್ ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಾಲ್ ತಿಳಿಸಿದರು.
ಬಂಧಿತ ಆರೋಪಿ ಮೋತಿಲಾಲ್ ಪ್ರತಾಪ್ಘಡ್ ಜಿಲ್ಲೆಯ ನಿವಾಸಿ. ಈ ರೀತಿಯ ಶಸ್ತ್ರಾಗಳನ್ನು ತಯಾರಿಸುವ ಕಾರ್ಖಾನೆಗಳು ರಾಜ್ಯದ ವಿವಿಧೆಡೆ ಇವೆ. ತಯಾರಿಸಿದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಪ್ರತ್ಯೇಕ ಗ್ಯಾಂಗ್ ಇವೆ. ಚುನಾವಣೆ ಸಂದರ್ಭದಲ್ಲಿ ಬಳಸುವ ಉದ್ದೇಶದಿಂದಲೇ ಈ ಕೃತ್ಯ ನಡೆಯುತ್ತಿದೆ ಎಂದು ಮೋತಿಲಾಲ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಗಿ ಪಾಲ್ ಹೇಳಿದರು.
ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಪಡೆದು ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಗ್ಯಾಂಗ್ಗಳನ್ನು ಪತ್ತೆ ಹಚ್ಚಲಾಗುವುದು ಎಂದು ಪಾಲ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.