News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 28th December 2024


×
Home About Us Advertise With s Contact Us

ರಾಷ್ಟ್ರಪತಿ ಭವನದಲ್ಲಿ ಕುಸಿದುಬಿದ್ದ ಗಾರ್ಡ್: ಆರೋಗ್ಯ ವಿಚಾರಿಸಿದ ಪ್ರಧಾನಿ

ನವದೆಹಲಿ: ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಜನ ಸಾಮಾನ್ಯನಿಗೆ ಬಲು ಹತ್ತಿರ ಇರುವ ಜನ ನಾಯಕ ಎಂಬುದು ಎಲ್ಲರಿಗೂ ತಿಳಿದ ಸುದ್ದಿ. ಅತಿ ಸಾಮಾನ್ಯರ ಬಗ್ಗೆಯೂ ಕಾಳಜಿ ವಹಿಸುವುದು ಅವರ ಹುಟ್ಟುಗುಣ. ಅದು ಮತ್ತೊಮ್ಮೆ ಸಾಬೀತಾಗಿದೆ. ಭಾರತಕ್ಕೆ ಆಗಮಿಸಿರುವ ಸಿಷೆಲ್ಸ್ ಅಧ್ಯಕ್ಷ...

Read More

ಸಾವಿರ ಗಿಡಗಳನ್ನು ವರದಕ್ಷಿಣೆಯಾಗಿ ಪಡೆದ ಒರಿಸ್ಸಾ ಶಿಕ್ಷಕ

ಭುವನೇಶ್ವರ: ವರದಕ್ಷಿಣೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ ಮಾವನ ಬಳಿಯಿಂದ 1000 ಗಿಡಗಳನ್ನು ವರದಕ್ಷಿಣೆಯಾಗಿ ಪಡೆದು ಮಾದರಿ ಎನಿಸಿದ್ದಾರೆ ಒರಿಸ್ಸಾದ ಶಾಲಾ ಶಿಕ್ಷಕ ಸರೋಜ್‌ಕಾಂತ್ ಬಿಸ್ವಾಲ್. ಬಿಸ್ವಾಲ್ ಅವರು ಚೌದಕುಲತ ಗ್ರಾಮದ ಜಗ್ನನಾಥ್ ವಿದ್ಯಾಪೀಠದಲ್ಲಿ ವಿಜ್ಞಾನ ಕಲಿಸುತ್ತಿದ್ದಾರೆ. ಇವರಿಗೆ ಮದುವೆ ನಿಶ್ಚಯವಾಗಿದ್ದು, ವರದಕ್ಷಿಣೆ ಪಡೆಯಬಾರದು ಎಂದು...

Read More

16 ಸಾವಿರ ಮರಗಳ ಉಳಿವಿಗಾಗಿ ದೆಹಲಿಗರ ತೀವ್ರ ಸ್ವರೂಪದ ಪ್ರತಿಭಟನೆ

ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಮರು ಅಭಿವೃದ್ಧಿ ಕಾಮಗಾರಿಗಾಗಿ ಸುಮಾರು 16 ಸಾವಿರ ಮರಗಳನ್ನು ಬಲಿಕೊಡಲು ಎನ್‌ಬಿಸಿಸಿ ಮುಂದಾಗಿದೆ. ಇದರ ವಿರುದ್ಧ ಅಲ್ಲಿನ ನಾಗರಿಕರು ತೀವ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮರಗಳನ್ನು ಉರುಳಿಸಲು ಬಿಡುವುದಿಲ್ಲ ಎಂದು ಪಣತೊಟ್ಟಿದ್ದಾರೆ. ಸರೋಜಿನಿ ನಗರದಲ್ಲಿ ಶನಿವಾರದಿಂದ...

Read More

ಚೆನ್ನೈನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಪ್ರತಿಮೆ ಅನಾವರಣ

ಚೆನ್ನೈ: ಚೆನ್ನೈನ ಸೇನಾಧಿಕಾರಿಗಳ ತರಬೇತಿ ಅಕಾಡಮಿಯಲ್ಲಿ ಭಾನುವಾರ ಭಾರತೀಯ ಸೇನೆಯ ಪ್ರಥಮ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪನವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಕೆ.ಎಂ ಕಾರ್ಯಪ್ಪನವರ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ ಕಾರ್ಯಪ್ಪನವರು ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ವೇಳೆ ನಿವೃತ್ತ ಮೇಝರ್...

Read More

ಖಾದಿಯನ್ನು ‘ಭಾರತದ ಬ್ರ್ಯಾಂಡ್’ ಆಗಿಸಲು ಕೇಂದ್ರ ಚಿಂತನೆ

ನವದೆಹಲಿ: ಖಾದಿ ಭಾರತೀಯರ ನೆಚ್ಚಿನ ಉಡುಪು. ಸ್ವದೇಶಿ ಚಳುವಳಿಯಲ್ಲಿ ಇದು ಮಹತ್ತರವಾದ ಪಾತ್ರವನ್ನು ವಹಿಸಿದೆ. ಇಂತಹ ಖಾದಿಯನ್ನು ಭಾರತ ಬಿಟ್ಟು ಉಳಿದ ದೇಶಗಳ ಕಂಪನಿಗಳು ತಮ್ಮ ಬ್ರ್ಯಾಂಡ್‌ನ್ನಾಗಿಸಲು ಮುಂದಾಗಿವೆ. ಇಂತಹ ಪರಿಸ್ಥಿತಿಯಲ್ಲಿ ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಭಾರತ ಖಾದಿಯನ್ನು ‘ಭಾರತದ ಬ್ರ್ಯಾಂಡ್’ನ್ನಾಗಿಸಲು ಚಿಂತನೆ...

Read More

ಫೈಟರ್ ಪೈಲೆಟ್ ಆಗುತ್ತಿದ್ದಾಳೆ ಮಧ್ಯಪ್ರದೇಶದ ಚಹಾ ಮಾರಾಟಗಾರನ ಮಗಳು

ಭೋಪಾಲ್: ಆಕೆ ಚಹಾ ಮಾರಾಟಗಾರನ ಮಗಳು. ಆದರೆ ತಂದೆಯ ಕಡಿಮೆ ಆದಾಯದ ವೃತ್ತಿ ಆಗಸದಲ್ಲಿ ಹಾರುವ ಆಕೆಯ ಕನಸನ್ನು ತಡೆಯಲಿಲ್ಲ. ಕಠಿಣ ಪರಿಶ್ರಮ, ಕನಸಿನ ದಾರಿಯಲ್ಲೇ ಸಾಗುವ ಅಚಲ ನಿರ್ಧಾರ ಇಂದು ಮಧ್ಯಪ್ರದೇಶದ 24 ವರ್ಷದ ಆಂಚಲ್ ಗಂಗ್ವಾಲ್‌ನ್ನು ಭಾರತೀಯ ವಾಯುಪಡೆಯ...

Read More

12ನೇ ವಯಸ್ಸಿಗೆ ಗ್ರ್ಯಾಂಡ್ ಮಾಸ್ಟರ್ ಆದ ತಮಿಳುನಾಡಿನ ಆರ್.ಪ್ರಗ್ನಾನಂದ್

ಚೆನ್ನೈ: ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಹಲವಾರು ಸಾಧಕರು ತೋರಿಸಿಕೊಟ್ಟಿದ್ದಾರೆ. ಅವರ ಸಾಲಿಗೆ ಹೊಸ ಸೇರ್ಪಡೆ ತಮಿಳುನಾಡಿನ ಆರ್.ಪ್ರಗ್ನಾನಂದ. 12 ವರ್ಷ 10 ತಿಂಗಳು ವಯಸ್ಸಿನ ಈತ ಜಗತ್ತಿನ ಎರಡನೇ ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ಬಿರುದು ಪಡೆದುಕೊಂಡಿದ್ದಾರೆ. ಚೆಸ್ ಕ್ರೀಡಾಪಟುವಾದ ಈತ ಶನಿವಾರ...

Read More

ನಿಷೇಧ ಹಿನ್ನಲೆ: ಮುಂಬಯಿಯಲ್ಲಿ 591 ಕೆಜಿ ಪ್ಲಾಸ್ಟಿಕ್ ಸಂಗ್ರಹ

ಮುಂಬಯಿ: ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಪ್ಲಾಸ್ಟಿಕ್ ನಿಷೇಧ ಜಾರಿಗೊಂಡಿದೆ. ಈ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ಇಳಿದಿರುವ ಬೃಹನ್‌ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ), ಕೇವಲ ಎರಡನೇ ದಿನದಲ್ಲಿ ಸುಮಾರು 591.67 ಕೆಜಿಗಳ ನಿಷೇಧಿತ ಪ್ಲಾಸ್ಟಿಕ್ ಮತ್ತು ರೂ.3,35,000 ದಂಡದ ಮೊತ್ತವನ್ನು ಸಂಗ್ರಹಿಸಿದೆ. ಶನಿವಾರದಿಂದ ಬಿಎಂಸಿ ಪ್ಲಾಸ್ಟಿಕ್ ನಿಷೇಧವನ್ನು...

Read More

ಮಹಾರಾಷ್ಟ್ರ: ಹುತಾತ್ಮ ಯೋಧರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ 2 ಎಕರೆ ಭೂಮಿ

ಮುಂಬಯಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ವೀರ ಯೋಧರ ಕುಟುಂಬಗಳು ಹಣಕಾಸು ಮುಗ್ಗಟ್ಟಿಗೆ ಒಳಗಾಗಬಾರದು ಎಂಬ ಸದುದ್ದೇಶದೊಂದಿಗೆ ಮಹಾರಾಷ್ಟ್ರ ಸರ್ಕಾರ ಮಹತ್ವದ ಯೋಜನೆಯೊಂದನ್ನು ಘೋಷಿಸಿದೆ. ಹುತಾತ್ಮರ ಪತ್ನಿಗೆ 2 ಎಕರೆ ಭೂಮಿಯನ್ನು ನೀಡಲಿದೆ. ಒಂದು ವೇಳೆ ಆಕೆ ಬದುಕಿಲ್ಲದ ಪಕ್ಷದಲ್ಲಿ ಹುತಾತ್ಮನ ಕಾನೂನುಬದ್ಧ ಉತ್ತರಾಧಿಕಾರಿಗಳು...

Read More

3 ದಿನಗಳ ಇಂಡೋನೇಷ್ಯಾ ಭೇಟಿಯಲ್ಲಿ ಐಎನ್‌ಎಸ್ ಶಕ್ತಿ, ಕರ್ಮೋಟ

ನವದೆಹಲಿ: ಭಾರತದ ನೌಕಾ ಹಡಗುಗಳಾದ ಐಎನ್‌ಎಸ್ ಶಕ್ತಿ ಮತ್ತು ಕರ್ಮೋಟ ಮೂರು ದಿನಗಳ ಮಕಸ್ಸರ್, ಇಂಡೋನೇಷ್ಯಾ ಭೇಟಿಯಲ್ಲಿದ್ದು, ಭಾನುವಾರ ವೀಕ್ಷಕರಿಗಾಗಿ ತೆರೆದುಕೊಂಡಿದೆ. ಮಕಸ್ಸರ್‌ನ ಬಂದರಿನಲ್ಲಿ ಇದು ಇದ್ದು, ಇದುವರೆಗೆ ಒಟ್ಟು 100 ಜನರು ಹಡಗನ್ನು ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಅವರಿಗೆ ಹಡಗಿನ...

Read More

Recent News

Back To Top