ಅಜ್ಮೇರ್: ಭಾರತೀಯ ವಾಯುಸೇನೆ ತನ್ನ ಹೆಮ್ಮೆಯ ಯುದ್ಧ ವಿಮಾನ ಮಿರಾಜ್-2000 ಮೂಲಕ ಪಾಕಿಸ್ಥಾನದೊಳಕ್ಕೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಐತಿಹಾಸಿಕ ಸನ್ನಿವೇಶ ನಡೆದ ಸಂದರ್ಭದಲ್ಲೇ ಜನಿಸಿದ ರಾಜಸ್ಥಾನದ ನವಜಾತ ಮಗುವಿಗೆ ’ಮಿರಾಜ್ ಸಿಂಗ್ ರಾಥೋಡ್’ ಎಂದು ನಾಮಕರಣ ಮಾಡಲಾಗಿದೆ.
12 ಮಿರಾಜ್-2000 ಮೂಲಕ ಗಡಿರೇಖೆಯ ಸುಮಾರು 80 ಕಿಲೋಮೀಟರ್ನಷ್ಟು ದೂರ ನುಗ್ಗಿದ ವಾಯು ಸೈನಿಕರು 1000 ಕೆಜಿಯಷ್ಟು ಬಾಂಬ್ನ್ನು ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ಶಿಬಿರದ ಮೇಲೆ ಹಾಕಿದ್ದರು. ಈ ಘಟನೆಯಲ್ಲಿ ಸುಮಾರು 300 ಉಗ್ರರು ಸತ್ತಿರುವ ನಿರೀಕ್ಷೆ ಇದೆ.
ಮಂಗಳವಾರ ಮುಸುಕಿನ ಜಾವ 3 ಗಂಟೆಯ ಸುಮಾರಿಗೆ ಭಾರತ ಈ ವೈಮಾನಿಕ ದಾಳಿಯನ್ನು ನಡೆಸಿದೆ ಎನ್ನಲಾಗಿದೆ. 20 ನಿಮಿಷದಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿ ಯುದ್ಧ ವಿಮಾನಗಳು ವಾಪಾಸ್ ಆಗಿವೆ.
ವಾಯುಸೇನೆಯ ಈ ದಿಟ್ಟ ಕಾರ್ಯಾಚರಣೆ ಸದಾ ಕಾಲ ಸ್ಮರಣೆಯಲ್ಲಿ ಇರಲಿ ಎಂಬ ಕಾರಣಕ್ಕೆ ತಮ್ಮ ಮಗುವಿಗೆ ‘ಮಿರಾಜ್’ ಎಂದು ನಾಮಕರಣ ಮಾಡಿರುವುದಾಗಿ ರಾಜಸ್ಥಾನದ ಎಸ್ಎಸ್ ರಾಥೋಡ್ ದಂಪತಿ ಹೇಳಿಕೊಂಡಿದ್ದಾರೆ.
ಮಗ ದೊಡ್ಡವನಾದ ಬಳಿಕ ಸೇನೆಗೆ ಸೇರಲಿದ್ದಾನೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.