News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಅಫ್ಘಾನಿಸ್ಥಾನದ ಸರ್ಕಾರ, ಜನರಿಗೆ ಭಾರತ ಬೆಂಬಲಿಸುತ್ತದೆ: ವಿದೇಶಾಂಗ ಸಚಿವಾಲಯ

ನವದೆಹಲಿ: ಪ್ರಜಾಪ್ರಭುತ್ವ, ಶಾಂತಿ, ಭದ್ರ ಭವಿಷ್ಯದ ನಿರೀಕ್ಷೆ ಹೊತ್ತಿರುವ ಅಫ್ಘಾನಿಸ್ಥಾನದ ಸರ್ಕಾರ ಮತ್ತು ಜನರಿಗೆ ಭಾರತ ಬೆಂಬಲ ನೀಡುವುದಾಗಿ ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಸಂಬಂಧ ವಕ್ತಾರ ಅರಿಂದಮ್ ಬಗ್ಚಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2011 ರ ಅಕ್ಟೋಬರ್‌ನಲ್ಲಿ ಮಾಡಿಕೊಂಡಿರುವ ಒಪ್ಪಂದವು...

Read More

ಟೊಕಿಯೋ ಒಲಿಂಪಿಕ್ಸ್: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಶುಭಹಾರೈಕೆ

ನವದೆಹಲಿ: ಇಂದಿನಿಂದ ತೊಡಗಿದಂತೆ ಜಪಾನ್‌ನ ಟೊಕಿಯೋದಲ್ಲಿ ಒಲಿಂಪಿಕ್ಸ್ 2020 ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಗಣ್ಯರು ಶುಭ ಹಾರೈಸಿದ್ದಾರೆ. ಪ್ರಧಾನಿ ಮೋದಿ ಅವರು, ಟೊಕಿಯೋ ಒಲಿಂಪಿಕ್ಸ್ 2020...

Read More

ಇಂದಿನಿಂದ ಟೋಕಿಯೋ ಒಲಿಂಪಿಕ್ಸ್ 2020

ಜಪಾನ್‌ : ಟೋಕಿಯೋ ಒಲಿಂಪಿಕ್ಸ್ 2020ರ ಬಹು ನಿರೀಕ್ಷಿತ ಉದ್ಘಾಟನಾ ಸಮಾರಂಭ ಇಂದು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ನಡೆಯಲಿದೆ. ಆದರೆ ಜಪಾನಿನ ರಾಜಧಾನಿಯಲ್ಲಿ ಹೊಸದಾಗಿ ನಿರ್ಮಿಸಿರುವ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಸಮಾರಂಭ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯಾವುದೇ ಅದ್ಧೂರಿ...

Read More

ಟೊಕಿಯೋ ಒಲಿಂಪಿಕ್ಸ್: ಭಾರತದ ಕ್ರೀಡಾಳುಗಳಿಗೆ ಉತ್ತೇಜಿಸುವಂತೆ ಡಾ. ಅಶ್ವತ್ಥ್ ನಾರಾಯಣ್ ಮನವಿ

ಬೆಂಗಳೂರು: ಜಪಾನ್‌ನ ಟೊಕಿಯೋದಲ್ಲಿ ನಾಳೆಯಿಂದ ಟೊಕಿಯೋ ಒಲಿಂಪಿಕ್ಸ್ 2020 ಆರಂಭವಾಗಲಿದ್ದು, ದೇಶದ ಪ್ರತಿನಿಧಿಗಳಾಗಿ ಹಲವು ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಟೊಕಿಯೋಗೆ ತೆರಳಿದ್ದಾರೆ. ಈ ಸಂಬಂಧ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಅವರು, ನಾಳೆಯಿಂದ ಆರಂಭವಾಗಲಿರುವ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ‌ದಲ್ಲಿ ಭಾರತವನ್ನು ಪ್ರತಿನಿಧಿಸುವ...

Read More

ಟೊಕಿಯೋ‌ ಒಲಿಂಪಿಕ್ಸ್ ಕ್ಷಣ ಕ್ಷಣದ ಮಾಹಿತಿಯನ್ನು ನೀಡಲಿದೆ ದೂರದರ್ಶನ, ಆಕಾಶವಾಣಿ, ಡಿಡಿ ಸ್ಪೋರ್ಟ್ಸ್

ನವದೆಹಲಿ: ಪ್ರಸಾರ ಭಾರತಿ ತನ್ನ ಎರಡು ಅವಳಿ ಜಾಲಗಳಾದ ದೂರದರ್ಶನ, ಆಕಾಶವಾಣಿ ಮತ್ತು ಕ್ರೀಡೆಗೆ ಮೀಸಲಾದ ಡಿಡಿ ಸ್ಪೋರ್ಟ್ಸ್ ಚಾನಲ್ ಮೂಲಕ 2020 ರ ಟೊಕಿಯೋ‌ ಒಲಿಂಪಿಕ್ಸ್ ಕುರಿತ ಮಾಹಿತಿ, ಸುದ್ದಿಗಳನ್ನು ವ್ಯಾಪಕವಾಗಿ ಬಿತ್ತರಿಸಲಿದೆ. ಪ್ರತಿನಿತ್ಯ ಡಿಡಿ ಸ್ಪೋರ್ಟ್ಸ್ ಟೊಕಿಯೋ‌ ಒಲಿಂಪಿಕ್ಸ್...

Read More

ಭಾರತದ ವಾಯುಸೇನೆಗೆ ಮತ್ತೆ 3 ರಫೇಲ್ ಯುದ್ಧ ವಿಮಾನ‌ ಸೇರ್ಪಡೆ

ನವದೆಹಲಿ: ಭಾರತಕ್ಕೆ ಫ್ರಾನ್ಸ್‌ನಿಂದ ಏಳನೇ ಬ್ಯಾಚ್‌ನಲ್ಲಿ ಮೂರು ರಫೇಲ್ ಯುದ್ಧ ವಿಮಾನ‌ಗಳು ಜು. 21 ರಂದು ಆಗಮಿಸಿವೆ. ಇದನ್ನೊಳಗೊಂಡು ಸದ್ಯ ಐಎಎಫ್‌ನಲ್ಲಿನ ರಫೇಲ್ ಯುದ್ಧ ವಿಮಾನ‌ಗಳ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ. ಇದರಿಂದ ವಾಯುಪಡೆಗೆ ಮತ್ತಷ್ಟು ಹೆಚ್ಚಿನ ಬಲ ಬಂದಂತಾಗಿದೆ. ಹೊಸ...

Read More

ಟೊಕಿಯೋ‌ ಒಲಿಂಪಿಕ್ಸ್ ಜಗತ್ತಿಗೆ ಆಶಾವಾದದ ಸಂದೇಶವಾಗಲಿ: ಟೆಡ್ರೋಸ್ ಅಧಾನಮ್

ಟೊಕಿಯೋ‌: ಕೊರೋನಾ ಸೋಂಕು ನಿಯಂತ್ರಣ ಮಾಡುವಲ್ಲಿ ಜಗತ್ತು ಸಂಕಷ್ಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ 2020 ರ ಸಂದರ್ಭದಲ್ಲಿ ಟೊಕಿಯೋ ಒಲಿಂಪಿಕ್ಸ್ ಅನ್ನು ಮುಂದೂಡಲಾಗಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧ್ಯಕ್ಷ ಟೆಡ್ರೋಸ್ ಅಧಾನಮ್ ತಿಳಿಸಿದ್ದಾರೆ. ಟೊಕಿಯೋ‌ದಲ್ಲಿ ನಡೆದ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನ‌ದಲ್ಲಿ...

Read More

ಡಬ್ಲ್ಯೂ‌ಎಚ್‌ಒ ದಿಂದ ಭಾರತಕ್ಕೆ ಸಿಗಲಿದೆ 7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆ

ಜಿನಿವಾ: ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತಕ್ಕೆ ಕೋವ್ಯಾಕ್ಸ್ ಲಸಿಕೆ ಅಭಿಯಾನದಡಿ ವಿಶ್ವ ಆರೋಗ್ಯ ಸಂಸ್ಥೆ 7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆ ಅನುದಾನ ನೀಡಲಿದೆ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ...

Read More

ವಿಶ್ವಾಸ ಮತ ಗಳಿಕೆಯಲ್ಲಿ ಯಶಸ್ವಿಯಾದ ನೇಪಾಳದ ಪ್ರಧಾನಿ ಡಿಯುಬಾ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ನವದೆಹಲಿ: ನೇಪಾಳದ ನೂತನ ಪ್ರಧಾನಿ ಶೇರ್ ಬಹದ್ದೂರ್ ಡಿಯುಬಾ ಅವರು ಕೆಳಮನೆಯಲ್ಲಿ ವಿಶ್ವಾಸ ಮತ ಪಡೆಯುವಲ್ಲಿ ಸಫಲರಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಡಿಯುಬಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಸಂಬಂಧ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ನೇಪಾಳ‌ದ ಪ್ರಧಾನಿ...

Read More

ಭಾರತೀಯ ನೌಕಾಪಡೆ‌ಗೆ 2 ಎಂ‌ಆರ್‌ಎಚ್ – 60 ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್‌ ಹಸ್ತಾಂತರಿಸಿದ ಅಮೆರಿಕ

ನವದೆಹಲಿ: ಭಾರತೀಯ ನೌಕಾಪಡೆಗೆ ಎರಡು ಎಂ‌ಆರ್‌ಎಚ್ – 60 ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳನ್ನು ಅಮೆರಿಕ ನೌಕಾಪಡೆಯು ಹಸ್ತಾಂತರ ಮಾಡಿದೆ. ಸ್ಯಾನ್ ಡಿಯಾಗೋದ ನಾರ್ತ್ ಐಲ್ಯಾಂಡ್ ನೌಕಾ ವಾಯು ನಿಲ್ದಾಣ‌ದಲ್ಲಿ ಈ ಹೆಲಿಕಾಪ್ಟರ್‌ಗಳನ್ನು ಅಮೆರಿಕ ನೌಕಾಪಡೆ ಭಾರತಕ್ಕೆ ಹಸ್ತಾಂತರ ಮಾಡಿದೆ. ಈ...

Read More

Recent News

Back To Top