ಬೆಂಗಳೂರು: ಜಪಾನ್ನ ಟೊಕಿಯೋದಲ್ಲಿ ನಾಳೆಯಿಂದ ಟೊಕಿಯೋ ಒಲಿಂಪಿಕ್ಸ್ 2020 ಆರಂಭವಾಗಲಿದ್ದು, ದೇಶದ ಪ್ರತಿನಿಧಿಗಳಾಗಿ ಹಲವು ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಟೊಕಿಯೋಗೆ ತೆರಳಿದ್ದಾರೆ.
ಈ ಸಂಬಂಧ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಅವರು, ನಾಳೆಯಿಂದ ಆರಂಭವಾಗಲಿರುವ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಆಟಗಾರರನ್ನು ಉತ್ತೇಜಿಸಲು Cheer4India ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಯುವಜನರಲ್ಲಿ ಮನವಿ ಮಾಡಿದ್ದಾರೆ.
ಕಳೆದ ಬಾರಿ ಅಂದರೆ 2020 ರಲ್ಲಿ ಈ ಅಂತರರಾಷ್ಟ್ರೀಯ ಕ್ರೀಡಾಕೂಟ ನಡೆಯಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಈ ಕ್ರೀಡಾಕೂಟ ನಡೆದಿರಲಿಲ್ಲ. ಇದೀಗ ನಾಳೆಯಿಂದ ತೊಡಗಿದಂತೆ ಟೊಕಿಯೋ ಒಲಿಂಪಿಕ್ಸ್ 2020 ಆರಂಭವಾಗಲಿದ್ದು, ಇದರಲ್ಲಿ ದೇಶವನ್ನು ಪ್ರತಿನಿಧಿಸುವ ಸ್ಪರ್ಧಾಳುಗಳನ್ನು ಹುರಿದುಂಬಿಸುವ ನಿಟ್ಟಿನಲ್ಲಿ #cheer4India ಅಭಿಯಾನ ನಡೆಯುತ್ತಿದೆ.
"Come-on-India" we stand united.#Cheer4India at #Tokyo2020 an event organised by #PEFI to encourage Indian Contingent. I appreciate the Ministry of Youth Affairs & Sports for holding this webinar to evoke sportsmanship & encourage our participants. #GoIndiaGoforGold pic.twitter.com/9hXkDnp84g
— Dr. Ashwathnarayan C. N. (@drashwathcn) July 21, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.