ಜಪಾನ್ : ಟೋಕಿಯೋ ಒಲಿಂಪಿಕ್ಸ್ 2020ರ ಬಹು ನಿರೀಕ್ಷಿತ ಉದ್ಘಾಟನಾ ಸಮಾರಂಭ ಇಂದು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ನಡೆಯಲಿದೆ. ಆದರೆ ಜಪಾನಿನ ರಾಜಧಾನಿಯಲ್ಲಿ ಹೊಸದಾಗಿ ನಿರ್ಮಿಸಿರುವ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಸಮಾರಂಭ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯಾವುದೇ ಅದ್ಧೂರಿ ಇಲ್ಲದೆ ಸರಳ ರೀತಿಯಲ್ಲಿ ನಡೆಯಲಿದೆ.
ಜಪಾನ್ ಕೋವಿಡ್-19 ಹಿನ್ನೆಲೆಯಲ್ಲಿ ಆರೋಗ್ಯ ಅಪಾಯಗಳನ್ನು ತಗ್ಗಿಸಲು ಖಾಲಿ ಕ್ರೀಡಾಂಗಣಗಳಲ್ಲಿ ಸ್ಪರ್ಧಾಳುಗಳು ಸೆಣಸಲಿದ್ದಾರೆ ಎಂದು ಪ್ರಕಟಿಸಿದೆ. ಉದ್ಘಾಟನಾ ಸಮಾರಂಭಕ್ಕೆ ಪ್ರತಿ ದೇಶದಿಂದ ಕೇವಲ ಆರು ಅಧಿಕಾರಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಆದರೆ ಅಥ್ಲೀಟ್ಗಳ ಪಾಲ್ಗೊಳ್ಳುವಿಕೆಗೆ ಯಾವುದೇ ಮಿತಿ ಇಲ್ಲ. ಆದರೆ ಕ್ರೀಡಾಭಿಮಾನಿಗಳು ಈ ಬಾರಿ ಅತಿ ಸಣ್ಣ ಪಥಸಂಚಲನ ತಂಡಗಳನ್ನು ಕಾಣಬಹುದಾಗಿದೆ.
ಜಪಾನಿನ ವರ್ಣಮಾಲೆಯ ಪ್ರಕಾರ ಭಾರತ ಪಥ ಸಂಚಲನದಲ್ಲಿ 21ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದೆ. ಈ ಬಾರಿ ಒಲಿಂಪಿಕ್ಸ್ಗೆ ಭಾರತ ಅತಿದೊಡ್ಡ ತಂಡವನ್ನು ಕಳುಹಿಸಿದೆ. 22 ರಾಜ್ಯಗಳ 127 ಅಥ್ಲೀಟ್ಗಳನ್ನೊಳಗೊಂಡ 228 ಮಂದಿಯ ಬಲಿಷ್ಠ ತಂಡ ಪಾಲ್ಗೊಳ್ಳುತ್ತಿದ್ದು, 18 ಕ್ರೀಡಾ ವಿಭಾಗಗಳಲ್ಲಿ ಅಂದರೆ ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಈಕ್ವೆಸ್ಟ್ರಿಯನ್, ಫೆನ್ಸಿಂಗ್, ರೋಯಿಂಗ್, ಶೂಟಿಂಗ್, ಸೈಲಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್, ಟೆನಿಸ್, ವೇಯ್ಟ್ ಲಿಫ್ಟಿಂಗ್ ಮತ್ತು ಕುಸ್ತಿಯಲ್ಲಿ ಸೆಣಸುವರು. ಭಾರತೀಯ ನಿಯೋಗದಲ್ಲಿ 68 ಪುರುಷ ಹಾಗೂ 52 ಮಹಿಳಾ ಅಥ್ಲಿಟ್ಗಳು, 58 ಅಧಿಕಾರಿಗಳು, 43 ಪರ್ಯಾಯ ಅಥ್ಲೀಟ್ಗಳು ಮತ್ತು 8 ತುರ್ತು ಸೇವಾ ಸಿಬ್ಬಂದಿ, ಕೋಚ್ಗಳು, ತಂಡದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ಅಥ್ಲೀಟ್ಗಳು 85 ಸಂಭವನೀಯ ಪದಕಗಳಿಗಾಗಿ ಸೆಣಸುವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.