ನವದೆಹಲಿ: ಪ್ರಜಾಪ್ರಭುತ್ವ, ಶಾಂತಿ, ಭದ್ರ ಭವಿಷ್ಯದ ನಿರೀಕ್ಷೆ ಹೊತ್ತಿರುವ ಅಫ್ಘಾನಿಸ್ಥಾನದ ಸರ್ಕಾರ ಮತ್ತು ಜನರಿಗೆ ಭಾರತ ಬೆಂಬಲ ನೀಡುವುದಾಗಿ ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಸಂಬಂಧ ವಕ್ತಾರ ಅರಿಂದಮ್ ಬಗ್ಚಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2011 ರ ಅಕ್ಟೋಬರ್ನಲ್ಲಿ ಮಾಡಿಕೊಂಡಿರುವ ಒಪ್ಪಂದವು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಮುನ್ನಡೆಸುತ್ತದೆ ಎಂದೂ ಬಗ್ಜಿ ತಿಳಿಸಿದ್ದಾರೆ.
ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಪ್ರೇರಿತ ಉಗ್ರ ಸಂಘಟನೆಗಳಿಂದ ನಡೆಯುತ್ತಿರುವ ಆಕ್ರಮಣದ ಬಗೆಗೂ ಮಾತನಾಡಿದ ಅವರು, ನೆರೆ ರಾಷ್ಟ್ರ ಅಫ್ಘನ್ನ ಎಲ್ಲಾ ವರ್ಗದ ಹಿತಾಸಕ್ತಿಯನ್ನು ಒಳಗೊಂಡ ಶಾಂತಿಯುತ ಪ್ರಜಾಪ್ರಭುತ್ವ ಮತ್ತು ಸಮೃದ್ಧ ಭವಿಷ್ಯದ ಆಶಯವನ್ನು ಸಾಕಾರಗೊಳಿಸುವುದಕ್ಕಾಗಿ ಭಾರತ ಸರ್ಕಾರ ಅಫ್ಘಾನಿಸ್ಥಾನ ಮತ್ತು ಅಲ್ಲಿನ ಜನರಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.