ನವದೆಹಲಿ: ಪ್ರಸಾರ ಭಾರತಿ ತನ್ನ ಎರಡು ಅವಳಿ ಜಾಲಗಳಾದ ದೂರದರ್ಶನ, ಆಕಾಶವಾಣಿ ಮತ್ತು ಕ್ರೀಡೆಗೆ ಮೀಸಲಾದ ಡಿಡಿ ಸ್ಪೋರ್ಟ್ಸ್ ಚಾನಲ್ ಮೂಲಕ 2020 ರ ಟೊಕಿಯೋ ಒಲಿಂಪಿಕ್ಸ್ ಕುರಿತ ಮಾಹಿತಿ, ಸುದ್ದಿಗಳನ್ನು ವ್ಯಾಪಕವಾಗಿ ಬಿತ್ತರಿಸಲಿದೆ.
ಪ್ರತಿನಿತ್ಯ ಡಿಡಿ ಸ್ಪೋರ್ಟ್ಸ್ ಟೊಕಿಯೋ ಒಲಿಂಪಿಕ್ಸ್ ಅನ್ನು ನೇರ ಪ್ರಸಾರ ಮಾಡಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಇದು ದೂರದರ್ಶನ, ರೇಡಿಯೋ ಮತ್ತು ಡಿಜಿಟಲ್ ಫ್ಲ್ಯಾಟ್ಫಾರ್ಮ್ಗಳಲ್ಲಿಯೂ ಲಭ್ಯವಿರಲಿದೆ ಎಂದು ಸಚಿವಾಲಯ ತಿಳಿಸಿದೆ.
ಡಿಡಿ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಗ್ಗೆ 5 ಗಂಟೆಯಿಂದ ಸಂಜೆ 7 ರ ವರೆಗೆ ಒಲಿಂಪಿಕ್ಸ್ನ ವಿವಿಧ ಕ್ರೀಡಾ ಸ್ಪರ್ಧೆಗಳ ನೇರಪ್ರಸಾರ ಕಾರ್ಯಕ್ರಮ ನಡೆಯಲಿದೆ. ಡಿಡಿ ಸ್ಪೋರ್ಟ್ಸ್ ಮತ್ತು ಎಐಆರ್ಗಳ ಟ್ವಿಟ್ಟರ್ ಖಾತೆಗಳಲ್ಲಿಯೂ ಪ್ರತಿನಿತ್ಯ ಅದರ ವಿವರಣೆಗಳು ಲಭ್ಯವಾಗಲಿವೆ. ಹಾಗೆಯೇ ಒಲಿಂಪಿಕ್ಸ್ಗೆ ಪೂರ್ವಭಾವಿ ಎಂಬಂತೆ ಡಿಡಿ ಸ್ಪೋರ್ಟ್ಸ್ ಕ್ರೀಡಾ ಕ್ಷೇತ್ರದ ಗಣ್ಯರ ಜೊತೆಗೆ ನಾಲ್ಕು ಗಂಟೆಗಳ ಚರ್ಚಾ ಆಧರಿತ ಸೆಗ್ಮೆಂಟ್ಗಳನ್ನು ಸಹ ಪ್ರದರ್ಶಿಸಲಿದೆ. ಇದು ಚಿಯರ್ ಫಾರ್ ಇಂಡಿಯಾ ಅಭಿಯಾನಕ್ಕೆ ಬೆಂಬಲಿಸಲಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಡಿಡಿ ಸ್ಪೋರ್ಟ್ಸ್ನಲ್ಲಿ ರಾತ್ರಿ 8.30 ಕ್ಕೆ ಇಂಡಿಯಾ ಟೋಕಿಯೋ, ರಾತ್ರಿ 9 ಗಂಟೆಗೆ ಒಲಿಂಪಿಕ್ಸ್ ಮುಖ್ಯಾಂಶಗಳು, 9.30 ಕ್ಕೆ ಒಲಿಂಪಿಕ್ಸ್ ಸ್ಟ್ಯಾಟ್ ಝೋನ್ ಹೆಸರಿನಲ್ಲಿ ದಿನದ ಕಾರ್ಯಕ್ರಮಗಳು ನಡೆಯಲಿವೆ. ಡಿಡಿ ನ್ಯೂಸ್ನ ಸೋಮವಾರದಿಂದ ಶುಕ್ರವಾರದ ವರೆಗೆ 7 ಗಂಟೆಗೆ ಪ್ರಸಾರವಾಗುವ ಮತ್ತು ಶನಿವಾರ 5 ಗಂಟೆಗೆ ಪ್ರಸಾರವಾಗುವ ಬ್ರೇಕ್ ಫಾಸ್ಟ್ ನ್ಯೂಸ್, ಮಿಡ್ ಡೇ ಪ್ರೈಮ್, ನ್ಯೂಸ್ ನೈಟ್ ವಿಶೇಷ ವಿಭಾಗಗಳಲ್ಲಿ ಪ್ರಸಾರವಾಗಲಿದೆ. ಹಾಗೆಯೇ ಡಿಡಿ ಇಂಡಿಯಾದ ರಾತ್ರಿ 8.30 ರ ವೇಳೆಗೆ ವಿಶೇಷ ಕಾರ್ಯಕ್ರಮದ ಮೂಲಕವೂ ಒಲಿಂಪಿಕ್ಸ್ ಸಂಬಂಧಿಸಿದಂತೆ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಪ್ರಸಾರ ಭಾರತಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.