
ನವದೆಹಲಿ: ಇಂದಿನಿಂದ ತೊಡಗಿದಂತೆ ಜಪಾನ್ನ ಟೊಕಿಯೋದಲ್ಲಿ ಒಲಿಂಪಿಕ್ಸ್ 2020 ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಗಣ್ಯರು ಶುಭ ಹಾರೈಸಿದ್ದಾರೆ.
ಪ್ರಧಾನಿ ಮೋದಿ ಅವರು, ಟೊಕಿಯೋ ಒಲಿಂಪಿಕ್ಸ್ 2020 ಹಿನ್ನೆಲೆಯಲ್ಲಿ ಜಪಾನ್ಗೆ ಅಭಿನಂದನೆಗಳು. ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳ ಅದ್ಭುತ ಪ್ರದರ್ಶನಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
Wishing PM @sugawitter and 🇯🇵 the very best for #Tokyo2020 @Olympics and @Paralympics. We look forward to a season of incredible performances by the world's best sportspersons! @Tokyo2020
— Narendra Modi (@narendramodi) July 23, 2021
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಭಹಾರೈಸಿದ್ದು, ಟೊಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಕ್ರೀಡಾಪಟುಗಳ ಜೊತೆಗೆ ಇಡೀ ದೇಶವೇ ಇದೆ. ಎಲ್ಲಾ ಭಾರತೀಯರ ಪರ ಸ್ಪರ್ಧಾಳುಗಳಿಗೆ ಶುಭಾಶಯಗಳನ್ನು ತಿಳಿಸುತ್ತೇನೆ. ನೀವೆಲ್ಲರೂ ಶ್ರೇಷ್ಠರಾಗುವಿರಿ, ಪ್ರಶಸ್ತಿ ಗಳಿಸುವಿರಿ, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡುವಿರಿ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
An entire nation’s hopes and prayers are with the Indian contingent at the #TokyoOlympics. I convey best wishes to you all on behalf of all Indians. I am confident that you all will excel, win laurels and make our country proud. #Cheer4India
— President of India (@rashtrapatibhvn) July 23, 2021
ಕೇಂದ್ರ ಸಚಿವ ಅನುರಾಗ್ ಠಾಕೂರ್ ಶುಭಹಾರೈಸಿದ್ದು, ಭಾರತೀಯ ಕ್ರೀಡಾಪಟುಗಳನ್ನು ಪ್ರೇರೇಪಿಸಲು, ಹುರಿದುಂಬಿಸಲು ಭಾರತದ ವಿವಿಧ ಸ್ಥಳಗಳಲ್ಲಿ ಸೆಲ್ಫಿ ಪಾಯಿಂಟ್ಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ನಿಮ್ಮ ಫೋಟೋಗಳನ್ನು ಕ್ಲಿಕ್ಕಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಎಂದು ಹೇಳಿದ್ದಾರೆ.
ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲು ದೇಶದ ಹಲವಾರು ಕ್ರೀಡಾಪಟುಗಳು ಟೊಕಿಯೋಗೆ ತೆರಳಿದ್ದು, ಅವರೆಲ್ಲರನ್ನೂ ಪ್ರೀತಿ, ಬೆಂಬಲ ತೋರಿಸೋಣ ಎಂದು ಠಾಕೂರ್ ಹೇಳಿದ್ದಾರೆ.
https://twitter.com/ianuragthakur/status/1418444859287818242
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


