ನವದೆಹಲಿ: ಭಾರತಕ್ಕೆ ಫ್ರಾನ್ಸ್ನಿಂದ ಏಳನೇ ಬ್ಯಾಚ್ನಲ್ಲಿ ಮೂರು ರಫೇಲ್ ಯುದ್ಧ ವಿಮಾನಗಳು ಜು. 21 ರಂದು ಆಗಮಿಸಿವೆ.
ಇದನ್ನೊಳಗೊಂಡು ಸದ್ಯ ಐಎಎಫ್ನಲ್ಲಿನ ರಫೇಲ್ ಯುದ್ಧ ವಿಮಾನಗಳ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ. ಇದರಿಂದ ವಾಯುಪಡೆಗೆ ಮತ್ತಷ್ಟು ಹೆಚ್ಚಿನ ಬಲ ಬಂದಂತಾಗಿದೆ. ಹೊಸ ಬ್ಯಾಚ್ನ ರಫೇಲ್ ಜೆಟ್ಗಳು ಐಎಎಫ್ನ ರಫೇಲ್ ಜೆಟ್ನ ಎರಡನೇ ಸ್ಕ್ವಾರ್ಡ್ನ ಭಾಗವಾಗಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ಏರ್ಫೋರ್ಸ್ಗಳ ಮೂಲಕ ಮಾರ್ಗ ಮಧ್ಯದಲ್ಲೇ ನಿನ್ನೆ ಆಗಮಿಸಿದ ರಫೇಲ್ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸಲಾಗಿದೆ. ಕೆಲ ಸಮಯದ ಹಿಂದಷ್ಟೇ ಫ್ರಾನ್ಸ್ನ ಇಸ್ಪ್ರೆಸ್ ಏರ್ಬೇಸ್ನಿಂದ ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳು ಬಂದಿದ್ದವು.
Three Rafale aircraft arrived in India a short while ago, after a direct ferry from #IstresAirBase, France.
IAF deeply appreciates the support by UAE Air Force for in-flight refuelling during the non-stop ferry.
— Indian Air Force (@IAF_MCC) July 21, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.