Date : Thursday, 11-03-2021
ನಾಗೇಂದ್ರಹಾರಾಯ ತ್ರಿಲೋಚನಾಯ ಭಸ್ಮಾಂಗರಾಗಾಯ ಮಹೇಶ್ವರಾಯ | ನಿತ್ಯಾಯ ಶುದ್ಧಾಯ ದಿಗಂಬರಾಯ ತಸ್ಮೈ ನ ಕಾರಾಯ ನಮಃ ಶಿವಾಯ || ಇದು ಶಿವ ಪಂಚಾಕ್ಷರಿ ಸ್ತೋತ್ರದ ಮೊದಲ ಶ್ಲೋಕ …. ಶಿವನನ್ನು ಆದಿಯೋಗಿ ಎಂದೂ ಕರೆಯಲಾಗುತ್ತದೆ, ಅಂದರೆ ಯೋಗದ ಮೊದಲ ಗುರು. ಶಿವನ...
Date : Wednesday, 10-03-2021
ಸಾಂಕ್ರಾಮಿಕ ರೋಗ ಕೊರೋನಾವೈರಸ್ ಭಾರತವನ್ನು ಅಪ್ಪಳಿಸಿದ ಸಂದರ್ಭದಲ್ಲಿ ನಾಗರಿಕರನ್ನು ಕಾಪಾಡುವ ಸಲುವಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಅಖಾಡಕ್ಕೆ ಧುಮುಕಿ ಜನಸೇವೆಯಲ್ಲಿ ನಿರತರಾದವರು ಆರೋಗ್ಯ ಕಾರ್ಯಕರ್ತರು. ಕಳೆದ ಒಂದು ವರ್ಷಗಳಿಂದ ಆರೋಗ್ಯ ಕಾರ್ಯಕರ್ತರ ಮೇಲಿನ ನಮ್ಮ ಗೌರವ ಇಮ್ಮಡಿಗೊಂಡಿರುವುದಕ್ಕೆ ಅವರ ನಿಸ್ವಾರ್ಥ ಸೇವೆಯೇ...
Date : Tuesday, 09-03-2021
ವಾಜಪೇಯಿ ಸರಕಾರದ ಕಾಲದಲ್ಲಿ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫೆರ್ನಾಂಡೀಸ್ ಅವರು ಚೀನಾ ಭಾರತದ ನಂಬರ್ ವನ್ ಶತ್ರು ಎಂದು ಹೇಳಿದ್ದಾಗ ಎಲ್ಲರೂ ಒಮ್ಮೆ ಹುಬ್ಬೇರಿಸಿದ್ದರು. ಆದರೆ ಚೀನಾ ದೇಶವು ಜಾರ್ಜ್ ಫೆರ್ನಾಂಡೀಸ್ ಅವರ ಹೇಳಿಕೆ ನಿಜ ಎಂಬುದನ್ನು ಕಾಲಕಾಲಕ್ಕೆ ಸಾಬೀತುಪಡಿಸುತ್ತಲೇ ಬಂದಿದೆ....
Date : Tuesday, 09-03-2021
ಹದಿನಾಲ್ಕು ವರ್ಷ ವಯಸ್ಸನ್ನು ನಾವು ಹದಿಹರೆಯ ಎನ್ನುತ್ತೇವೆ. ಇಂದಿನ ಕಾಲಘಟ್ಟದಲ್ಲಿ ಹದಿಹರೆಯದ ಮಕ್ಕಳನ್ನು ನಾವು ಮುಗ್ಧರು ಎನ್ನುತ್ತೇವೆ. ಕೆಳಗಿಳಿಸಿದರೆ ಇರುವೆ ಕಚ್ಚಬಹುದು, ತಲೆಯ ಮೇಲೆ ಹೊರಿಸಿದರೆ ಕಾಗೆಯು ಕಚ್ಚಿ ಒಯ್ಯಬಹುದು ಎಂಬ ಭಯದಿಂದ ಇಂದಿನ ದಿನಗಳಲ್ಲಿ ಮಕ್ಕಳನ್ನು ಜತನದಿಂದಲೂ ಮುದ್ದಿನಿಂದಲೂ ಬೆಳೆಸುತ್ತೇವೆ....
Date : Monday, 08-03-2021
ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳೆಯ ಕೊಡುಗೆ, ಸಾಮರ್ಥ್ಯವನ್ನು ಪ್ರಶಂಸಿ ಪುರಸ್ಕರಿಸುವ ಜೊತೆ ಜೊತೆಗೆ ಆಕೆಯನ್ನು ಸ್ವಾವಲಂಬಿಯನ್ನಾಗಿ ಮಾಡಬೇಕಾದ ಮಹತ್ತರ ಜವಾಬ್ದಾರಿಯು ಸರ್ಕಾರದ ಮೇಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ...
Date : Saturday, 06-03-2021
ಮೀಸಲಾತಿ ಸಾಮಾಜಿಕ ನ್ಯಾಯವಂಚಿತ ಸಮುದಾಯಗಳಿಗೆ ಸಂವಿಧಾನಾತ್ಮಕ ರಕ್ಷಣೆಯೊಂದಿಗೆ ನೀಡಿದ ಅವಕಾಶ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಅವಕಾಶವಂಚಿತ ಸಮುದಾಯಗಳು ಪಡೆದ ಬಿಡುಗಡೆಯ ಬೆಳಕನ್ನು ಕಂಡಾಗ ಮೀಸಲಾತಿಯ ಹರಿಕಾರರ ದೂರದೃಷ್ಟಿಗೆ ಶತ ಶತ ಪ್ರಣಾಮಗಳನ್ನು ಸಲ್ಲಿಸಬೇಕಾಗಿದೆ. ಯಾರ ಪಾಲಿಗೆ...
Date : Saturday, 06-03-2021
ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಮಹಾ ಸಂಘಟನೆ ಸೇವೆ ಎಂಬ ಪದಕ್ಕೆ ಅನ್ವರ್ಥಕನಾಮವಾಗಿ ಕಳೆದ 95 ವರ್ಷಗಳಿಂದ ದೇಶದ ಯಾವುದೇ ಮೂಲೆಯಾಗಿರಲಿ ಅದು ಪ್ರವಾಹ, ಸುನಾಮಿ, ಭೂಕಂಪ, ಅತಿವೃಷ್ಠಿಯಂತಹ ಯಾವುದೇ ನೈಸರ್ಗಿಕ ವಿಕೋಪಗಳಿರಲಿ ಅಲ್ಲಿ ಪ್ರತಿಫಲಾಪೇಕ್ಷೆ ಬಯಸಿದೆ ಸರ್ಕಾರದ ಪ್ರತಿನಿಧಿಗಳಿಗಿಂತ ಮೊದಲು...
Date : Saturday, 06-03-2021
ಒಂದು ಔಪಚಾರಿಕವಾದ ಚರ್ಚೆಯಲ್ಲೂ, ಅಥವಾ ಅನೌಪಚಾರಿಕ ಮಾತುಕತೆಗಳಲ್ಲೋ ಎದುರು ಕುಟಿಲ ವ್ಯಕ್ತಿಯ ಬಳಿಯಲ್ಲಿ ಸ್ವಾತಂತ್ರ್ಯ ಯಾವಾಗ ದೊರಕಿತು ಎಂದು ಕೇಳಿ. ಪ್ರಶೆಯನ್ನು ಮುಗಿಸುವುದಕ್ಕೂ ಮುನ್ನವೇ ಆ ವ್ಯಕ್ತಿ ಉತ್ತರವನ್ನು ನೀಡುತ್ತಾರೆ, ಎರಡನೆಯದಾಗಿ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮ ಯಾವಾಗ ನಡೆಯಿತು ಎಂದು ಕೇಳಿ....
Date : Friday, 05-03-2021
ಅನ್ನವನ್ನು ಪವಿತ್ರ ಎಂದು ಭಾವಿಸುವ ಭಾರತದಲ್ಲಿ ನಿತ್ಯ ಸಾಕಷ್ಟು ಪ್ರಮಾಣದ ಆಹಾರಗಳು ವ್ಯರ್ಥವಾಗುತ್ತಿದೆ. ಹಸಿದವರ ಹೊಟ್ಟೆ ಸೇರಬೇಕಾದ ಆಹಾರ ಮಣ್ಣಿಗೆ ಬಿದ್ದು ಕೊಳೆಯುತ್ತಿದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2021 ರ ಪ್ರಕಾರ, ಭಾರತೀಯ ಕುಟುಂಬಗಳು ವರ್ಷಕ್ಕೆ...
Date : Thursday, 04-03-2021
ಇತ್ತೀಚಿಗೆ ಹೆಚ್ಚು ಸುದ್ದಿಗೆ ಗ್ರಾಸವಾದ ವ್ಯಕ್ತಿಗಳಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರಶ್ಮಿ ಸಾಮಂತ್ ಕೂಡ ಒಬ್ಬರು. ಫೆಬ್ರವರಿ 17 ರಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ಇವರು ನಂತರ ಕೆಲವರ ಒತ್ತಡದಿಂದಾಗಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಘಟನೆಯ...