ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳೆಯ ಕೊಡುಗೆ, ಸಾಮರ್ಥ್ಯವನ್ನು ಪ್ರಶಂಸಿ ಪುರಸ್ಕರಿಸುವ ಜೊತೆ ಜೊತೆಗೆ ಆಕೆಯನ್ನು ಸ್ವಾವಲಂಬಿಯನ್ನಾಗಿ ಮಾಡಬೇಕಾದ ಮಹತ್ತರ ಜವಾಬ್ದಾರಿಯು ಸರ್ಕಾರದ ಮೇಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮುದ್ರಾ ಯೋಜನೆ, ಜನ ಧನ ಯೋಜನೆಯಂತಹ ಹಲವು ಕಲ್ಯಾಣ ಯೋಜನೆಗಳ ಫಲಾನುಭವಿಗಳಲ್ಲಿ ಬಹುತೇಕರು ಮಹಿಳೆಯರು ಎಂಬುದು ಹೆಮ್ಮೆಯ ವಿಚಾರವಾಗಿದೆ.
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿಯ ಶೇಕಡಾ 81 ಕ್ಕಿಂತ ಹೆಚ್ಚು ಖಾತೆಗಳು ಮತ್ತು ಮುದ್ರಾ ಯೋಜನೆಯಡಿಯ ಸುಮಾರು ಶೇ.68 ಪ್ರತಿಶತ ಸಾಲದ ಖಾತೆಗಳು ಮಹಿಳಾ ಉದ್ಯಮಿಗಳಿಗೆ ಸೇರಿವೆ. ಪ್ರಧಾನ್ ಮಂತ್ರಿ ಜನ-ಧನ್ ಯೋಜನೆ ಅಡಿಯಲ್ಲಿ ತೆರೆಯಲಾದ ಒಟ್ಟು 41 ಕೋಟಿ ಖಾತೆಗಳಲ್ಲಿ 23 ಕೋಟಿ ಖಾತೆಗಳು ಮಹಿಳೆಯರಿಗೆ ಸೇರಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಈ ಎಲ್ಲಾ ಯೋಜನೆಗಳು ಮಹಿಳೆಯರಿಗೆ ಉತ್ತಮ ಜೀವನವನ್ನು ನಡೆಸಲು ಆರ್ಥಿಕವಾಗಿ ಅಧಿಕಾರ ನೀಡಿದೆ ಮತ್ತು ಉದ್ಯಮಿಯಾಗುವ ಅವರ ಕನಸುಗಳನ್ನು ಬೆನ್ನಟ್ಟಲು ಅವರಿಗೆ ಸಹಾಯ ಮಾಡಿದೆ .
ನಯಿ ರೋಶ್ನಿ ಯೋಜನೆಯಡಿ, ಸುಮಾರು 5.5 ಲಕ್ಷ ಕರಕುಶಲಕರ್ಮಿಗಳಿಗೆ ಮತ್ತು ಕಲಾವಿದರಿಗೆ ಹುನಾರ್ ಹಾತ್ ಮತ್ತು ಉಸ್ತಾದ್ ಯೋಜನೆ ಮೂಲಕ ಕಳೆದ ಆರು ವರ್ಷಗಳಲ್ಲಿ ಉದ್ಯೋಗ ಒದಗಿಸಲಾಗಿದೆ, ಇದರಲ್ಲಿ 50% ಮಹಿಳೆಯರು ಎಂದು ಕೇಂದ್ರ ತಿಳಿಸಿದೆ.
ಮಹಾತ್ಮ ಗಾಂಧಿ NREGA ಅಡಿ ಸೃಷ್ಟಿಸಲಾದ 259.20 ಮಾನವ ದಿನಗಳ ಉದ್ಯೋಗದ ಪೈಕಿ, 136.45 ಕೋಟಿ ಮಹಿಳೆಯರು, ಇದು ಒಟ್ಟು ಮಾನವ ದಿನಗಳ ಪೈಕಿ 52.64% ಆಗಿದೆ.
ಪಿಎಂಎವೈಜಿ ಅಡಿಯಲ್ಲಿ ಮಂಜೂರಾದ 67.61% ಒಟ್ಟು ಮನೆಗಳು ಮತ್ತು 65.03% ಸಂಪೂರ್ಣಗೊಂಡ ಮನೆಗಳು ಮಹಿಳೆಯರು ಅಥವಾ ಮಹಿಳೆಯರ ಜಂಟಿ ಹೆಸರಿನಲ್ಲಿದೆ.
ನಾರಿಶಕ್ತಿಗಾಗಿ ಸುರಕ್ಷಿತ ಭಾರತದ ನಿರ್ಮಾಣವನ್ನು ಮಾಡಲು ಮುಂದಡಿ ಇಟ್ಟಿದೆ ಕೇಂದ್ರ ಸರ್ಕಾರ. ಮಹಿಳಾ ಸುರಕ್ಷತೆಗಾಗಿ ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿದೆ. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧ ತಡೆಗಟ್ಟುವಿಕೆಗೆ ಬಲಿಷ್ಠ ಕಾನೂನು ತಂದಿದೆ. ಪ್ರಸ್ತುತ, 14 ರಾಜ್ಯಗಳು ಸೈಬರ್ ಫೋರೆನ್ಸಿಕ್ ಟ್ರೈನಿಂಗ್ ಲ್ಯಾಬೋರೇಟರಿಯನ್ನು ಸ್ಥಾಪನೆ ಮಾಡಿವೆ. ಗೃಹ ಸಚಿವಾಲಯವು www.cybercrime.gov.in ಅನ್ನು ಆರಂಭಿಸಿದೆ. ಇಲ್ಲಿ ನಾಗರಿಕರು ಅಶ್ಲೀಲ ವಿಷಯಗಳ ಬಗ್ಗೆ ವರದಿ ಸಲ್ಲಿಸಬಹುದು ಮತ್ತು ಅದನ್ನು ಬ್ಲಾಕ್ ಆಗುವಂತೆ ಮಾಡಬಹುದು. ಮಹಿಳಾ ಮತ್ತು ಮಕ್ಕಳ ವಿಶೇಷ ಘಟಕಗಳಿಗೆ ಆಧುನಿಕ ಸೌಲಭ್ಯ ಒದಗಿಸಲಾಗಿದೆ ಮತ್ತು ದೆಹಲಿ ಪೊಲೀಸರಿಂದ ಈಶಾನ್ಯ ಪ್ರದೇಶ ವಿಶೇಷ ಘಟಕವನ್ನು ಸ್ಥಾಪನೆ ಮಾಡಲಾಗಿದೆ.
8 ನಗರಗಳಲ್ಲಿನ ಸುರಕ್ಷಿತ ನಗರ ಯೋಜನೆಯು ಮಹಿಳಾ ಸುರಕ್ಷತೆಯನ್ನು ಸುಧಾರಿಸಲು ತಂತ್ರಜ್ಞಾನದ ಬಳಕೆ ಮತ್ತು ಸಮುದಾಯ ಪಾಲ್ಗೊಳ್ಳುವಿಕೆಯನ್ನು ಒಳಗೊಂಡಿದೆ.ಅಪರಾಧ ತನಿಖೆಯನ್ನು ಮತ್ತಷ್ಟು ಸುಧಾರಿಸಲು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಫೋರೆನ್ಸಿಕ್ ಸೈನ್ಸ್ ಸೌಲಭ್ಯವನ್ನು ಬಲಪಡಿಸಲು ಸರಕಾರವು 189.45 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಪೊಲೀಸ್ ಸ್ಟೇಷನ್ಗಳಲ್ಲಿ ಮಹಿಳಾ ಹೆಲ್ಪ್ ಡೆಸ್ಕ್ ಸ್ಥಾಪಿಸಲು ಮತ್ತು ಮಾನವ ಕಳ್ಳಸಾಗಾಣೆ ವಿರೋಧಿ ಘಟಕವನ್ನು ಬಲಪಡಿಸಲು ಸರ್ಕಾರವು 190 ಕೋಟಿ ರೂಪಾಯಿಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಂಜೂರು ಮಾಡಿದೆ.
ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆ ತರಲಾಗಿದ್ದು, ಹೆಣ್ಣು ಮಗುವಿನ ಶಿಕ್ಷಣದ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದೆ. ಇನ್ನು ಸುಕನ್ಯಾ ಯೋಜನೆ ಕೂಡ ಹೆಣ್ಣು ಮಗುವಿನ ಹೆಸರಲ್ಲಿ ಒಂದಿಷ್ಟು ಹಣವನ್ನು ಉಳಿತಾಯ ಮಾಡಲು ಪಾಲಕರನ್ನು ಪ್ರೋತ್ಸಾಹಿಸುತ್ತಿದೆ.
ಒಟ್ಟಿನಲ್ಲಿ ಮಹಿಳಾ ಸಬಲೀಕರಣ, ಹೆಣ್ಣು ಮಕ್ಕಳ ಸಂರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ತಂದಿರುವ ಯೋಜನೆಗಳು ಉತ್ತಮ ರೀತಿಯಲ್ಲಿ ಕಾರ್ಯಗತಗೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.