ಇತ್ತೀಚಿಗೆ ಹೆಚ್ಚು ಸುದ್ದಿಗೆ ಗ್ರಾಸವಾದ ವ್ಯಕ್ತಿಗಳಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರಶ್ಮಿ ಸಾಮಂತ್ ಕೂಡ ಒಬ್ಬರು. ಫೆಬ್ರವರಿ 17 ರಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ಇವರು ನಂತರ ಕೆಲವರ ಒತ್ತಡದಿಂದಾಗಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಘಟನೆಯ ಬಳಿಕ ರಶ್ಮಿ ಸಾಮಂತ್ ಅವರ ಪರವಾಗಿ ಒಗ್ಗಟ್ಟಿನ ಧ್ವನಿಗಳು ಕೇಳಿ ಬರುತ್ತಿವೆ.
ಅವರು ಚುನಾವಣೆಯಲ್ಲಿ ಗೆದ್ದ ಎರಡು ದಿನಗಳಲ್ಲೇ, ಅವರ ಹಳೆಯ ಸೋಷಿಯಲ್ ಮೀಡಿಯಾ ಪೋಸ್ಟ್ಗಳನ್ನು ಪ್ರಚಾರಕ್ಕೆ ಒಳಪಡಿಸಲಾಯಿತು, ಇದು ವಿಶ್ವವಿದ್ಯಾಲಯದಲ್ಲಿ ಆಕೆಯ ಘನತೆಗೆ ಧಕ್ಕೆ ತಂದಿತು. ಆಕೆಗೆ ಬೆದರಿಕೆ ಬಂತು, ಅಸಹ್ಯ ಬೆದರಿಕೆಗಳಿಗೆ ಆಕೆ ಬಲಿಯಾಗಿದ್ದಾಳೆ ಮತ್ತು ಹಿಂದೂ ಎಂಬ ಕಾರಣಕ್ಕೆ ಅವಮಾನಿಸಲ್ಪಟ್ಟಿದ್ದಾಳೆ.
ಅವಳ ಮೇಲೆ ಕೆಟ್ಟ ಟೀಕೆಗಳನ್ನು ಮಾಡಲಾಯಿತು ಮತ್ತು ಜನಾಂಗೀಯ ವಾಗ್ದಾಳಿ ನಡೆಸಲಾಯಿತು.
ರಶ್ಮಿ ಸಾಮಂತ್ ಕರ್ನಾಟಕದ ಉಡುಪಿ ಮೂಲದವರು, ಎಂಎಸ್ಸಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿ. ಇತ್ತೀಚೆಗೆ ಆಕ್ಸ್ಫರ್ಡ್ ಯೂನಿವರ್ಸಿಟಿ ಸ್ಟೂಡೆಂಟ್ ಯೂನಿಯನ್ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಆಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾದಳು.
ಈ ವರ್ಷ ಫೆಬ್ರವರಿ 11 ರಂದು ನಡೆದ ಆಕ್ಸ್ಫರ್ಡ್ ಎಸ್ಯು ನಾಯಕತ್ವ ಚುನಾವಣೆಯ ಅಭಿಯಾನದಲ್ಲಿ ಕ್ಯಾಂಪಸ್ನಲ್ಲಿ ಹೆಚ್ಚಿನ ಒಳಗೊಳ್ಳುವಿಕೆಯ ಅಗತ್ಯವನ್ನು ಒತ್ತಿಹೇಳಿದ್ದ ಸಾಮಂತ್ ಅವರು ಈ ಹುದ್ದೆಗೆ 3,708 ಮತಗಳಲ್ಲಿ 1,966 ಮತಗಳನ್ನು ಪಡೆದು ಜಯ ಗಳಿಸಿದ್ದರು.
ಕಳೆದ ತಿಂಗಳು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಟೈಮ್ ಆಫ್ ಇಂಡಿಯಾಗೆ ಸಂದರ್ಶನ ನೀಡಿದ ಆಕೆ, “ಜನಾಂಗೀಯ ನಿಂದನೆ ಎಂದು ಆರೋಪಿಸಲ್ಪಟ್ಟ ನನ್ನ ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಆಧಾರದ ಮೇಲೆ ನನ್ನನ್ನು ನಿರ್ಣಯಿಸುವುದು ಅನ್ಯಾಯವಾಗಿದೆ” ಎಂದು ಹೇಳಿದ್ದಾಳೆ. “ನಾನು ಯಾವುದೇ ಸಮುದಾಯವನ್ನು ದ್ವೇಷಿಸುವುದಿಲ್ಲ. ಎಲ್ಲರೂ ನಾನು ಭಯಂಕರ ವ್ಯಕ್ತಿ ಎಂದು ಭಾವಿಸುತ್ತಾರೆ ಆದರೆ ನಾನು ಹಾಗಿಲ್ಲ. ಎಲ್ಲಾ ಸಮುದಾಯಗಳ ಸ್ನೇಹಿತರು ನನಗಿದ್ದಾರೆ ಮತ್ತು ನಾನು ಅವರನ್ನು ಪ್ರೀತಿಸುತ್ತೇನೆ. ನಾನು ಐದು ವರ್ಷಗಳ ಹಿಂದೆ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿದ್ದೆ” ಎಂದಿದ್ದಾರೆ.
ಬ್ಲಾಗ್ ಪೋಸ್ಟ್ನಲ್ಲಿ ಅವರು ಹೀಗೆ ಬರೆದಿದ್ದಾರೆ: “ನನ್ನ ಹಿಂದಿನ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಉಲ್ಲೇಖಿಸಿ ನನ್ನನ್ನು ಸೂಕ್ಷ್ಮವಲ್ಲದ ಮತ್ತು ವರ್ಣಭೇದ ಮಾಡುವ ವ್ಯಕ್ತಿಯೆಂದು ಕರೆದ ಎಲ್ಲರಿಗೂ ನಾನು ಪ್ರಶ್ನೆ ಕೇಳಲು ಬಯಸುತ್ತೇನೆ. ಸ್ಥಳೀಯರಲ್ಲದ ಇಂಗ್ಲಿಷ್ ಮಾತನಾಡುವ ಹದಿಹರೆಯದವರ ಸಾಮಾಜಿಕ ಮಾಧ್ಯಮ ಶೀರ್ಷಿಕೆಗಳ ಆಧಾರದ ಮೇಲೆ ವ್ಯಕ್ತಿಯ ಮೌಲ್ಯವನ್ನು ನೀವು ನಿರ್ಣಯಿಸಿದಾಗ ನೀವು ಸಂವೇದನಾಶೀಲರಾಗಿದ್ದೀರಾ? ನಾನು ಇದನ್ನು ಪುನರುಚ್ಚರಿಸುತ್ತೇನೆ: ಆ ಪೋಸ್ಟ್ಗಳು ಸಮುದಾಯಗಳ ಬಗೆಗಿನ ನನ್ನ ದ್ವೇಷದ ಪ್ರತಿಬಿಂಬವಲ್ಲ. ಆಗಷ್ಟೇ ಸೋಶಿಯಲ್ ಮೀಡಿಯಾ ಜಗತ್ತಿಗೆ ಪ್ರವೇಶವನ್ನು ಹೊಂದಿದ್ದ ಹದಿಹರೆಯದವರ ಪೋಸ್ಟ್ ಅದಾಗಿತ್ತು. ನನ್ನ ಅಜ್ಞಾನಕ್ಕಾಗಿ ನಿಜವಾಗಿಯೂ ನೋವುಂಡವರಿಗೆ ನಾನು ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ ಆದರೆ ದುರುದ್ದೇಶಪೂರಿತ ಉದ್ದೇಶ ಹೊಂದಿರುವವರು ನನ್ನನ್ನು ‘ಸಂವೇದನಾಶೀಲತೆ’ ಯ ಮೇಲೆ ಗುರಿಯಾಗಿಸಿಕೊಂಡಿಲ್ಲ” ಎಂದಿದ್ದಾರೆ.
ಸಂವೇದನಾಶೀಲತೆಯೇ ಇಲ್ಲದ ಆಕ್ಸ್ಫರ್ಡ್ನ ಅಧ್ಯಾಪಕ ಸದಸ್ಯರಲ್ಲಿ ಒಬ್ಬರಾದ ಡಾ. ಅಭಿಜಿತ್ ಸರ್ಕಾರ್ ಸಾಮಂತ್ ಅವರನ್ನು ಗುರಿಯಾಗಿಸಿಕೊಂಡು ಭಯಂಕರ ಎಂಬಂತಹ ಹಿಂದೂಫೋಬಿಕ್ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ.
ಇನ್ಸ್ಟಾಗ್ರಂನಲ್ಲಿ ಸಾಮಂತ್ ವಿರುದ್ಧ ಸುದೀರ್ಘ ಪೋಸ್ಟ್ ಮಾಡಿರುವ ಆತ, ಸನಾತನ ಧರ್ಮದ ಅನುಯಾಯಿಗಳನ್ನು ವಿದ್ಯಾರ್ಥಿ ಸಂಘದ ನಾಯಕರಾಗಲು ಅನುಮತಿಸಬಾರದು ಎಂದು ತನ್ನ ಕೀಳು ಮಟಗಟದ ಹಿಂದೂಫೋಬಿಕ್ ಸ್ವಭಾವವನ್ನು ಬಹಿರಂಗಪಡಿಸಿದ್ದಾನೆ.
ರಶ್ಮಿ ಅವರು ಕರಾವಳಿ ಕರ್ನಾಟಕದಿಂದ ಬಂದವರು ಎಂದು ಆರೋಪಿಸಿ ಆಕೆ ಇಸ್ಲಾಮೋಫೋಬಿಕ್ ಎಂದು ಸರ್ಕಾರ್ ಆರೋಪಿಸಿದ್ದಾನೆ, ಕರಾವಳಿ ಕರ್ನಾಟಕ ಇಸ್ಲಾಮೋಫೋಬಿಕ್ ಬಲಪಂಥೀಯರ ಭದ್ರಕೋಟೆ ಎಂದು ಅತ ಕರೆದಿದ್ದಾನೆ.
“ಬಲ ದೇಸಿ ಪಡೆಗಳು ಬಿಳಿ ಜನರನ್ನು ಮತ್ತು ಪಾಶ್ಚಿಮಾತ್ಯ ಆಧುನಿಕತೆಯನ್ನು ದ್ವೇಷಿಸುತ್ತವೆ ಏಕೆಂದರೆ ಅವರು ಸನಾತನ ಹಿಂದೂ ಸಂಸ್ಕೃತಿಯನ್ನು ಅದರ ಅಂತರ್ಗತ ಜಾತಿ ಆಧಾರಿತ ಚಿತ್ರಹಿಂಸೆ ಮತ್ತು ಪಿತೃಪ್ರಭುತ್ವದ ಅತ್ಯಂತ ಹಿಂಸಾತ್ಮಕ ಸ್ವರೂಪದೊಂದಿಗೆ ಪುನಃ ಸ್ಥಾಪಿಸಲು ಬಯಸುತ್ತಾರೆ. ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಅಥವಾ ಉದಾರವಾದಿ ಹಿಂದೂಗಳನ್ನು, ಹಿಂದೂವಲ್ಲದ ಜನರ ಪ್ರತಿಮೆಗಳನ್ನು ನಾಶಮಾಡಲು ಅವರು ಯಾವಾಗಲೂ ಸಿದ್ಧರಾಗಿದ್ದಾರೆ ”ಎಂದು ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾನೆ.
ಸರ್ಕಾರ್ನಂತಹ ಹಿಂದೂಫೋಬಿಕ್ ಅಂಶಗಳ ವಿರುದ್ಧ ನೈತಿಕ ಯುದ್ಧ ಮಾಡಲು ನೆಟಿಜನ್ಗಳು ಒಗ್ಗಟ್ಟಿನಿಂದ ಮುಂದೆ ಬಂದಿದ್ದಾರೆ. ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಆಗಿರುವ #DismissAbhijitSarkar ಎಂಬ ಹ್ಯಾಶ್ಟ್ಯಾಗ್ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳಲ್ಪಟ್ಟಿದ್ದು, ಈ ನೀಚ ವ್ಯಕ್ತಿಯನ್ನು ವಜಾ ಮಾಡುವಂತೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯವನ್ನು ಒತ್ತಾಯಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.