News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಂಟಿಯಾಗಿ ಬುದ್ಧನ ಪ್ರತಿಮೆ ಅನಾವರಣಗೊಳಿಸಲಿದ್ದಾರೆ ಮೋದಿ, ಮಂಗೋಲಿಯಾ ಅಧ್ಯಕ್ಷರು

ನವದೆಹಲಿ:  ಮಂಗೋಲಿಯಾದ ಉಲಾನ್‌ಬತಾರ್‌ನ ಗಂಡನ್ ಧಾರ್ಮಿಕ್ ಕೇಂದ್ರದಲ್ಲಿ ನಿರ್ಮಾಣವಾಗಿರುವ ಭಗವಾನ್ ಬುದ್ಧನ ಪ್ರತಿಮೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಮಂಗೋಲಿಯಾ ಅಧ್ಯಕ್ಷ ಖಲ್ಟ್‌ಮಾಗಿನ್ ಬಟುಲ್ಗಾ ಅವರು ನವದೆಹಲಿಯಿಂದಲೇ ಇಂದು ಅನಾವರಣಗೊಳಿಸಲಿದ್ದಾರೆ. ಐದು ದಿನಗಳ ಭಾರತ ಪ್ರವಾಸಕ್ಕಾಗಿ ನಿನ್ನೆ ನವದೆಹಲಿಗೆ ಆಗಮಿಸಿದ...

Read More

ಭಾರತದಲ್ಲಿ ಬಯಲು ಶೌಚ ಶೇ. 47 ರಷ್ಟು ಕಡಿಮೆಯಾಗಿದೆ: ವಿಶ್ವ ಆರೋಗ್ಯ ಸಂಸ್ಥೆ ವರದಿ

ನವದೆಹಲಿ: ಶೇ. 43 ರಷ್ಟು ಭಾರತೀಯರು ಮೂಲ ನೈರ್ಮಲ್ಯಕ್ಕೆ ಒಳಪಟ್ಟಿದ್ದಾರೆ. 2000 ಮತ್ತು 2017 ರ ನಡುವೆ ದೇಶದಲ್ಲಿ ಬಯಲು ಶೌಚ  ಶೇ.47ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನೆಸೆಫ್ ಜಂಟಿ ಪರಿಶೀಲನಾ ಕಾರ್ಯ(ಜೆಎಂಪಿ) ವರದಿ ತಿಳಿಸಿದೆ. “2000...

Read More

ನೆತನ್ಯಾಹು ಬಳಿಕ ಟ್ರಂಪ್ ಮೋದಿ ಜನಪ್ರಿಯತೆಯ ಲಾಭ ಗಳಿಸಲು ಪ್ರಯತ್ನಿಸುತ್ತಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳು ಅಮೆರಿಕದ ಟೆಕ್ಸಾಸ್‌ನ ಹೋಸ್ಟನ್‌ಗೆ ಭೇಟಿ ನೀಡಲು ಸಜ್ಜಾಗುತ್ತಿದ್ದಾರೆ, ಅಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು  ಅವರಿಗೆ ಬೃಹತ್ ಸ್ವಾಗತವನ್ನು ನೀಡಲು ಸಿದ್ಧರಾಗುತ್ತಿದ್ದಾರೆ. ಮೋದಿ ಸ್ವಾಗತಕ್ಕಾಗಿ  ‘ಹೌಡಿ ಮೋದಿ’ ಎಂದು ಸಮಾರಂಭವನ್ನು ಹೋಸ್ಟನ್­ನಲ್ಲಿ ಆಯೋಜನೆಗೊಳಿಸುತ್ತಿದ್ದಾರೆ. ‘ಹೌಡಿ’ ಎನ್ನುವುದು...

Read More

ಅಮ್ಮನೊಂದಿಗೆ ಜನ್ಮದಿನದ ಸವಿಯೂಟ ಸವಿದ ಮೋದಿ

ಗಾಂಧೀನಗರ: ಇಂದು 69ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಗಾಂಧೀನಗರಕ್ಕೆ ತೆರಳಿ ತಮ್ಮ ತಾಯಿ ಹೀರಾಬೆನ್ ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಮಧ್ಯಾಹ್ನದ ಭೋಜನವನ್ನು ಅವರೊಂದಿಗೇ ಸವಿದಿದ್ದಾರೆ. 98 ವರ್ಷದ ಹೀರಾಬೆನ್ ಅವರು ರೈಸಿನ್ ಗ್ರಾಮದಲ್ಲಿ ತಮ್ಮ ಕಿರಿಯ...

Read More

5 ವರ್ಷದಲ್ಲಿ ಮೋದಿ 50 ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ: ಅಮಿತ್ ಶಾ

ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಗಳನ್ನು ಶ್ಲಾಘಿಸಿದ್ದು, ಐದು ವರ್ಷಗಳಲ್ಲಿ 50 ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮೋದಿ ದೇಶದ ಅದೃಷ್ಟವನ್ನು ಬದಲಾಯಿಸಿದರು ಎಂದಿದ್ದಾರೆ. ಮಂಗಳವಾರ ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿ...

Read More

ಮೋದಿಯಂತಹ ಪ್ರಧಾನಿಯಿದ್ದರೆ ಸಾವಿರ ಚಂದ್ರಯಾನಗಳಲ್ಲದೆ ಮೇಲೊಂದಿಷ್ಟು ಸೂರ್ಯಯಾನವನ್ನು ಮಾಡಬಹುದು

ನನ್ನ ಭೂಮಿ ನನ್ನ ಕೇಳುತ್ತಿದೆ ಯಾವಾಗ ನನ್ನ ಋಣ ತೀರಿಸುವೆ? ನನ್ನ ಆಗಸ ನನ್ನ ಕೇಳುತ್ತಿದೆ ಯಾವಾಗ ನಿನ್ನ ಜವಾಬ್ದಾರಿ ನಿಭಾಯಿಸುವೆ? ಭಾರತಾಂಬೆಗೆ ನನ್ನ ಪ್ರತಿಜ್ಞೆಯಿದು, ನಿನ್ನ ತಲೆ ತಗ್ಗಿಸಲು ಬಿಡುವುದಿಲ್ಲ ಈ ಮಣ್ಣಿನ ಮೇಲಾಣೆ ಈ ದೇಶ ನಾಶವಾಗಲು ಬಿಡುವುದಿಲ್ಲ...

Read More

ಪಾಕ್­ನ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಮೋದಿ UNನಲ್ಲಿ ಪ್ರಸ್ತಾಪಿಸಬೇಕು: ಸಿಂಧ್ ಹೋರಾಟಗಾರನ ಮನವಿ

ಇಸ್ಲಾಮಾಬಾದ್: ಸಿಂಧ್ ಮತ್ತು ಪಾಕಿಸ್ಥಾನದ ಇತರ ಭಾಗಗಳಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಬೇಕು ಎಂದು ಸಿಂಧಿ ಫೌಂಡೇಶನ್ ಮತ್ತು ಪಾಕಿಸ್ಥಾನದ ಖ್ಯಾತ ಹೋರಾಟಗಾರ ಮುನಾವರ್ ಸೂಫಿ ಲಘರಿ...

Read More

#happybirthdaynarendramodi ಇಂದಿನ ಟಾಪ್ ಟ್ವಿಟರ್ ಟ್ರೆಂಡ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು 69ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಬೆಂಬಲಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಟ್ವಿಟರ್­ನಲ್ಲಿ ವಿವಿಧ ಹ್ಯಾಶ್­ಟ್ಯಾಗ್­ಗಳನ್ನು ಬಳಸಿಕೊಂಡು ಮೋದಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಲಾಗಿದೆ. ಇದು ಮೈಕ್ರೋ ಬ್ಲಾಗಿಂಗ್ ಸೈಟಿನಲ್ಲಿ ಟಾಪ್...

Read More

ಮೋದಿಯನ್ನು ಭೇಟಿಯಾದ ನ್ಯೂಜೆರ್ಸಿ ಗವರ್ನರ್

ನವದೆಹಲಿ: ಅಮೆರಿಕಾದ ನ್ಯೂಜೆರ್ಸಿ ಗವರ್ನರ್ ಫಿಲಿಪ್ ಡಿ. ಮುರ್ಫೆ ಅವರು ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಭಾರತೀಯ ರಾಜ್ಯಗಳೊಂದಿಗೆ ಉತ್ತಮ ಸಹಕಾರವನ್ನು ಹೊಂದುವ ನಿಟ್ಟಿನಲ್ಲಿ ಅವರಿಗೆ ಸಹಾಯ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಮುರ್ಫೆ ಅವರ ಮೊದಲ ಭಾರತ ಭೇಟಿ ಇದಾಗಿದೆ....

Read More

ಮೋದಿ ಜನ್ಮದಿನದ ಹಿನ್ನಲೆಯಲ್ಲಿ ಹೊಸ ವರ್ಶನ್ ‘ನಮೋ ಆ್ಯಪ್’ ಬಿಡುಗಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಾಳೆ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಈ ಹಿನ್ನಲೆಯಲ್ಲಿ  ಹೆಚ್ಚು ಫೀಚರ್ ಅನ್ನು ಒಳಗೊಂಡ ಹೊಸ ವರ್ಶನ್­ನ ನರೇಂದ್ರ ಮೋದಿ ಅಪ್ಲಿಕೇಶನ್ ‘ನಮೋ ಆ್ಯಪ್’ ಅನ್ನು  ಬಿಡುಗಡೆ ಮಾಡಲಾಗಿದೆ. ಹೆಚ್ಚು ಜನರಿಗೆ ಆ್ಯಪ್ ಲಭ್ಯವಾಗಲಿ ಎಂಬ ಕಾರಣಕ್ಕೆ ಹೊಸ ವರ್ಶನ್...

Read More

Recent News

Back To Top