ನವದೆಹಲಿ: ಅಮೆರಿಕಾದ ನ್ಯೂಜೆರ್ಸಿ ಗವರ್ನರ್ ಫಿಲಿಪ್ ಡಿ. ಮುರ್ಫೆ ಅವರು ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಭಾರತೀಯ ರಾಜ್ಯಗಳೊಂದಿಗೆ ಉತ್ತಮ ಸಹಕಾರವನ್ನು ಹೊಂದುವ ನಿಟ್ಟಿನಲ್ಲಿ ಅವರಿಗೆ ಸಹಾಯ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಮುರ್ಫೆ ಅವರ ಮೊದಲ ಭಾರತ ಭೇಟಿ ಇದಾಗಿದೆ.
ದೆಹಲಿ ಮಾತ್ರವಲ್ಲದೇ ಅವರು, ಆಗ್ರಾ, ಮುಂಬಯಿ, ಹೈದರಾಬಾದ್ ಮತ್ತು ಅಹ್ಮದಾಬಾದ್ ನಗರಗಳಿಗೂ ಭೇಟಿ ನೀಡಲಿದ್ದಾರೆ.
ನ್ಯೂಜೆರ್ಸಿ ಮತ್ತು ಭಾರತದ ನಡುವೆ ಹೆಚ್ಚು ವಾಣಿಜ್ಯ ಮತ್ತು ಜನರಿಂದ ಜನರ ನಡುವಣ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿನ ಮುರ್ಫೆ ಅವರ ಆಶಯವನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ. ನ್ಯೂಜೆರ್ಸಿಯು ಭಾರತೀಯ ರಾಜ್ಯಗಳೊಂದಿಗೆ ಅರ್ಥಪೂರ್ಣ ಸಹಕಾರವನ್ನು ಹೊಂದಲು ನಡೆಸುತ್ತಿರುವ ಪ್ರಯತ್ನಕ್ಕೆ ಭಾರತ ಸರ್ಕಾರದ ಬೆಂಬಲವನ್ನು ನೀಡಲಿದೆ ಎಂದು ಮೋದಿ ಅವರಿಗೆ ಭರವಸೆಯನ್ನು ನೀಡಿದ್ದಾರೆ.
ಗವರ್ನರ್ ಮರ್ಫಿ ಅವರು ಪ್ರಧಾನಿ ಮೋದಿಯವರಿಗೆ, ಭಾರತದೊಂದಿಗೆ ತಮ್ಮ ರಾಜ್ಯದ ಸಂಬಂಧವನ್ನು ಬೆಳೆಸುವ ಆದ್ಯತೆಗಳ ಬಗ್ಗೆ ವಿವರಿಸಿದರು. ಭಾರತ ಮತ್ತು ಅಮೆರಿಕಾದ ನಡುವೆ ದೃಢವಾದ ಸಹಭಾಗಿತ್ವವನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಬದ್ಧರಾಗಿರುವುದಾಗಿ ತಿಳಿಸಿದರು.
ಭಾರತ ಮತ್ತು ನ್ಯೂಜೆರ್ಸಿಯ ನಡುವಿನ ಸಾಮ್ಯತೆಗಳನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿ ವೈವಿಧ್ಯಮಯ ಆಚರಣೆಗೆ ಮಾರು ಹೋಗಿರುವುದಾಗಿ ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.