ನವದೆಹಲಿ: ಶೇ. 43 ರಷ್ಟು ಭಾರತೀಯರು ಮೂಲ ನೈರ್ಮಲ್ಯಕ್ಕೆ ಒಳಪಟ್ಟಿದ್ದಾರೆ. 2000 ಮತ್ತು 2017 ರ ನಡುವೆ ದೇಶದಲ್ಲಿ ಬಯಲು ಶೌಚ ಶೇ.47ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನೆಸೆಫ್ ಜಂಟಿ ಪರಿಶೀಲನಾ ಕಾರ್ಯ(ಜೆಎಂಪಿ) ವರದಿ ತಿಳಿಸಿದೆ.
“2000 ರಿಂದ, ನೇಪಾಳ ಮತ್ತು ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಜನಸಂಖ್ಯೆಯ ಮೂರನೇ ಒಂದು ಭಾಗ, ಕಾಂಬೋಡಿಯಾ ಮತ್ತು ಇಥಿಯೋಪಿಯಾದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಮತ್ತು ಭಾರತದ ಅರ್ಧದಷ್ಟು ಜನಸಂಖ್ಯೆಯು ಬಯಲು ಶೌಚ ಮಾಡುವುದನ್ನು ನಿಲ್ಲಿಸಿದೆ” ಎಂದು ವರದಿ ಹೇಳುತ್ತದೆ.
2014 ರಲ್ಲಿ ಸ್ವಚ್ಛ ಭಾರತ್ ಮಿಷನ್ ಪ್ರಾರಂಭಿಸುವ ಮೂಲಕ ದೇಶವನ್ನು ಬಯಲು ಶೌಚ ಮುಕ್ತ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿತು. 2019 ರ ಅಕ್ಟೋಬರ್ 2 ರೊಳಗೆ ಸ್ವಚ್ಛ ಮತ್ತು ಬಯಲು ಶೌಚ ಮುಕ್ತ ಭಾರತವನ್ನು ನಿರ್ಮಿಸುವುದು, ಜನರಿಗೆ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಜನರಲ್ಲಿ ಉತ್ತಮ ನೈರ್ಮಲ್ಯ ನಡವಳಿಕೆಯನ್ನು ಉತ್ತೇಜಿಸುವ ಮೂಲಕ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಯೋಜನೆಗಳನ್ನು ಪ್ರಾರಂಭಿಸುವ ಮೂಲಕ ಈ ಅಭಿಯಾನವು ಸ್ವಚ್ಛತೆಯನ್ನು ಸುಧಾರಿಸುತ್ತಾ ಬಂದಿದೆ.
ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಹಣಕಾಸು ಹಂಚಿಕೆ 2014-15ರಲ್ಲಿ 2850 ಕೋಟಿ ರೂ.ಗಳಿಂದ 2015-16ರಲ್ಲಿ 6525 ಕೋಟಿ ರೂ.ಗೆ, 2016-17ರಲ್ಲಿ ರೂ. 10,500 ಕೋಟಿಗೆ, ರೂ. 2017-18 ರಲ್ಲಿ 14000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ 3 ವರ್ಷಗಳಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 48,264,304 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಬಯಲು ಮಲವಿಸರ್ಜನೆ ಮುಕ್ತ ಗ್ರಾಮಗಳ ಸಂಖ್ಯೆ 2,38,966 ತಲುಪಿದೆ.
ವೈಯಕ್ತಿಕ ಶೌಚಾಲಯ ವ್ಯಾಪ್ತಿಯು 2014 ರಲ್ಲಿ 42% ರಿಂದ 2017 ರಲ್ಲಿ 64% ಕ್ಕೆ ಏರಿದೆ. ಈ ವರ್ಷದ ಫೆಬ್ರವರಿಯಲ್ಲಿ 4,000 ಕ್ಕೂ ಹೆಚ್ಚು ನಗರ ನಗರಗಳನ್ನು ಸ್ವಚ್ಛ ಮಿಷನ್ ಅಡಿಯಲ್ಲಿ ಬಯಲು ಶೌಚ ಮುಕ್ತವೆಂದು ಘೋಷಿಸಲಾಗಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ತನ್ನ ಜಾಗತಿಕ ಗೇಟ್ಕೀಪರ್ಸ್ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿಗೆ ನೀಡುತ್ತಿರುವುದು ಸ್ವಚ್ಛ ಭಾರತ್ ಮಿಷನ್ಗೆ ಜಾಗತಿಕ ಮನ್ನಣೆ ದೊರೆತಿರುವುದರ ದ್ಯೋತಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.