ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಾಳೆ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಈ ಹಿನ್ನಲೆಯಲ್ಲಿ ಹೆಚ್ಚು ಫೀಚರ್ ಅನ್ನು ಒಳಗೊಂಡ ಹೊಸ ವರ್ಶನ್ನ ನರೇಂದ್ರ ಮೋದಿ ಅಪ್ಲಿಕೇಶನ್ ‘ನಮೋ ಆ್ಯಪ್’ ಅನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚು ಜನರಿಗೆ ಆ್ಯಪ್ ಲಭ್ಯವಾಗಲಿ ಎಂಬ ಕಾರಣಕ್ಕೆ ಹೊಸ ವರ್ಶನ್ ಅನ್ನು ಚಾಲನೆಗೊಳಿಸಲಾಗಿದೆ.
“ನಮೋ ಆ್ಯಪ್ ಹೊಸ ಅಪ್ಡೇಟ್ ಅನ್ನು ಪಡೆದುಕೊಂಡಿದೆ! ಇದು ಹೆಚ್ಚು ವೇಗ ಮತ್ತು ಸುಲಲಿತವಾಗಿದೆ. ಎಕ್ಸ್ಕ್ಲೂಸಿವ್ ವಿಷಯಗಳಿಗೆ ಕ್ಷಿಪ್ರ ಪ್ರವೇಶಕ್ಕೆ ಇದು ಅನುವು ಮಾಡಿಕೊಡುತ್ತದೆ. ಆಕರ್ಷಕ ಅನುಭವಕ್ಕಾಗಿ ಹೊಸ ಫೀಚರ್ಗಳನ್ನೂ ಹೊಂದಿದೆ. ನಮ್ಮ ಸಂವಹನವನ್ನು ಇನ್ನಷ್ಟು ವೃದ್ಧಿಸೋಣ, ಆ್ಯಪ್ನ ಹೊಸ ವರ್ಶನ್ ಅನ್ನು ಪಡೆಯೋಣ” ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
NaMo App gets a new update!
It is faster and sleeker, enables easier access to exclusive content and has new features for an immersive experience.
Let us deepen our interaction. Get the new version of the App! https://t.co/TYuxNNJfIf pic.twitter.com/1UAj9ciIas
— Narendra Modi (@narendramodi) September 16, 2019
2019ರ ಲೋಕಸಭೆಯ ಬಳಿಕ ಈ ಆ್ಯಪ್ ಮೊದಲ ಬಾರಿಗೆ ಅಪ್ಡೇಟ್ ಆಗುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಇದನ್ನು ಅಪ್ಡೇಟ್ ಮಾಡಲಾಗಿತ್ತು. ಮೋದಿಯವರ ರಾಜಕೀಯ ಪ್ರಯಾಣದ ವಿವಿಧ ಆಯಾಮಗಳನ್ನು ಈ ಆ್ಯಪ್ ತೋರಿಸುತ್ತದೆ. ಬಿಜೆಪಿ ದೇಶದಾದ್ಯಂತ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿಯನ್ನು ನೀಡುತ್ತದೆ. ಒನ್ ಟಚ್ ನಾವಿಗೇಶನ್ ಮತ್ತು ನಮೋ ಎಕ್ಸ್ಕ್ಲೂಸಿವ್ಗಳು ಹೊಸದಾಗಿ ಸೇರ್ಪಡೆಗೊಂಡಿವೆ.
ಆರಂಭವಾದ ಬಳಿಕ ಈ ಆ್ಯಪ್ 1.5 ಮಿಲಿಯನ್ ಬಳಕೆದಾರರ ಡೌನ್ಲೋಡ್ಗಳನ್ನು ಕಂಡಿದೆ. ವಿಶ್ವದ ಉಳಿದೆಲ್ಲಾ ರಾಜಕೀಯ ನಾಯಕರಿಗಿಂತಲೂ ಇದು ಹೆಚ್ಚು ಜನಪ್ರಿಯ ಆ್ಯಪ್ ಎಂದು ಪರಿಗಣಿಸಲ್ಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.