News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ವರಾಜ್ಯದ ಚಳವಳಿಗೆ ಜೀವ ತುಂಬಿದ ಸಾಮಾಜಿಕ ಸುಧಾರಣೆ

ಭಾರತದ ಸ್ವರಾಜ್ಯ ಸಂಪಾದನೆಯ ಹೋರಾಟಕ್ಕೆ ನೂರಾರು ಕವಲುಗಳಿವೆ. ಸ್ವಾತಂತ್ರ್ಯದ ಗಂಗೆಗೆ ಸಾವಿರಾರು ತೊರೆಗಳು ಬಂದು ಸೇರಿಕೊಂಡಿದೆ. ಅನೇಕರ ಹೋರಾಟ, ಸತ್ಯಾಗ್ರಹ, ಬಲಿದಾನಗಳಿಂದ ಭಾರತ ಸ್ವಾತಂತ್ರ್ಯವನ್ನು ಪಡೆಯಿತು. ಶತಮಾನಗಳ ಕಾಲ ಬ್ರಿಟಿಷರು ಆಳಿದ್ದ ಭಾರತಕ್ಕೆ ಭಾರತೀಯರಿಂದಲೇ ಆಳಲ್ಪಡುವ ಅವಕಾಶ ಲಭಿಸಿತು.ಆದರೆ ಈ ಕಾಲದಲ್ಲಿ...

Read More

ಚಿಂತನೆಯ ದಾಸ್ಯದಿಂದ ಬಿಡುಗಡೆ ಎಂದು?

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗೆ ಸಿದ್ಧವಾಗುತ್ತಿದೆ. ವಸಾಹತುಶಾಹಿಯು ಹೆಣೆದಿದ್ದ ಸಾಂಸ್ಕೃತಿಕ ಜಾಲದಿಂದ ಬಿಡಿಸಿಕೊಳ್ಳುವಲ್ಲಿ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಭಾರತ ಸಫಲವಾಗಿದೆಯೇ? ಭೌತಿಕವಾಗಿ ಬ್ರಿಟಿಷರು ಭಾರತವನ್ನು ಬಿಟ್ಟುಹೋದರೂ ಬೌದ್ಧಿಕವಾಗಿ ಸಂಪೂರ್ಣ ಬಿಡುಗಡೆಯನ್ನು ಪಡೆದಿದೆಯೇ? ಪಶ್ಚಿಮ ಹುಟ್ಟುಹಾಕಿದ ವಸಾಹತುಶಾಹಿ ಯಜಮಾನಿಕೆ ನಮ್ಮ ಬುದ್ದಿಯನ್ನು...

Read More

ಸ್ಟಾನ್ ಸ್ವಾಮಿ : ನಾಡಿಗೆ ದ್ರೋಹ ಬಗೆದವರ ವೈಭವೀಕರಣ ಬೇಡ

ಮಾವೋವಾದಿ ಪಾದ್ರಿ ಸ್ಟಾನ್ ಸ್ವಾಮಿಯ ಸಾವಿಗೆ ಅನೇಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಸಾವಿಗೆ ಸಂತಾಪ ವ್ಯಕ್ತಪಡಿಸುವುದು ಅಸಹಜವೇನಲ್ಲ. ಆದರೆ ಸಂತಾಪದ ನೆಪದಲ್ಲಿ ಭಾರತ ಭಂಜಕನೊಬ್ಬನನ್ನು ಹುತಾತ್ಮನನ್ನಾಗಿಸುವ ವ್ಯವಸ್ಥಿತ ಪ್ರಯತ್ನವೊಂದು ನಡೆಯುತ್ತಿದೆ. ಅಲ್ಲಲ್ಲಿ ಕಾಣಿಸುತ್ತಿರುವ ಕ್ಯಾಂಡಲ್ ಮಾರ್ಚ್‌ಗಳು, ಪೋಸ್ಟರ್‌ಗಳು, ಶ್ರದ್ಧಾಂಜಲಿ ಸಭೆಗಳ ಮೂಲಕ ಅಮಾಯಕರ...

Read More

ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಎಚ್ಚರ ತಪ್ಪದಿರಲಿ

ಹಲವು ದಶಕಗಳ ಬಳಿಕ ನಮ್ಮ ದೇಶದಲ್ಲಿ ಸಮಗ್ರ ಸ್ವರೂಪದ ರಾಷ್ಟ್ರೀಯ ಶಿಕ್ಷಣ ನೀತಿಯೊಂದು ರೂಪುಗೊಂಡಿದೆ.ಈ ನೀತಿಯು ಭಾರತದ ಬಹುದಿನಗಳ ಬೇಡಿಕೆಯೂ ಆಗಿತ್ತು. ಈ ಹಿಂದೆ ಸರ್ಕಾರಗಳು ಅಂತಹ ಆಸಕ್ತಿಯನ್ನು ತೋರದೇ ಹೋದ ಕಾರಣದಿಂದ ನೀತಿಯನ್ನು ರೂಪಿಸಲಾಗಿರಲಿಲ್ಲ. ಆದರೆ ಪ್ರಸ್ತುತ ಕೇಂದ್ರ ಸರ್ಕಾರ...

Read More

ಧರಂಪಾಲ್ ತೋರಿಸಿದ ಭಾರತೀಯ ಜ್ಞಾನದ ಬೆಳಕು

ಭಾರತವು ಬ್ರಿಟಿಷ್ ಆಳ್ವಿಕೆಗೆ ಒಳಗಾಗುವ ಪೂರ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಏನು? ಎಂಬ ಪ್ರಶ್ನೆ ಕೆಲವರಿಗೆ ಕುತೂಹಲವಾಗಿ ಕಾಣಬಹುದು. ಅಷ್ಟಕ್ಕೂ 18ನೇ ಶತಮಾನದ ಭಾರತದಲ್ಲಿ ವಿಜ್ಞಾನವಾಗಲೀ ತಂತ್ರಜ್ಞಾನವಾಗಲೀ ಇದ್ದಿತೇ? ಎನ್ನುವ ಕುಹಕದ ಪ್ರಶ್ನೆಯೂ ಕೆಲವರಲ್ಲಿ ಹುಟ್ಟಬಹುದು. ಯಾಕೆಂದರೆ...

Read More

ಮುಚ್ಚಿಟ್ಟ ಕಮ್ಯುನಿಸ್ಟರ ಭೀಕರ ನರಮೇಧ -ಬಂಗಾಳದ ಕನಸಿನ ದ್ವೀಪದಲ್ಲಿ ಕಮರಿಹೋದ ಬದುಕು

ಸ್ವಾತಂತ್ರ್ಯೋತ್ತರ ಭಾರತ ಕಂಡ ಅತ್ಯಂತ ಭೀಕರ ಸರ್ಕಾರಿ ಪ್ರಾಯೋಜಿತ ಸಾಮೂಹಿಕ ನರಹತ್ಯೆಯೊಂದು ನಾಡಿನ ಜನರ ಸ್ಮರಣೆಯಿಂದ ಅಳಿದು ಇತಿಹಾಸದ ಕಾಲಗರ್ಭದಲ್ಲಿ ಸೇರಿಹೋಗಿತ್ತು. ಸರ್ಕಾರ ಅಲ್ಲಿ ಕೇವಲ ಹತ್ಯೆಯನ್ನಷ್ಟೇ ಪ್ರಾಯೋಜಿಸಿರಲಿಲ್ಲ, ಹತ್ಯೆಯ ಸುದ್ದಿಯು ಹೊರಜಗತ್ತಿಗೆ ತಿಳಿಯದಂತೆ ಮಾಧ್ಯಮಗಳನ್ನೂ ಕಟ್ಟಿಹಾಕಿತ್ತು. ಯಾವ ಸರ್ಕಾರಿ ದಾಖಲೆಯನ್ನು...

Read More

ಬಂಗಾಳದ ಪ್ರಭುತ್ವ ಪ್ರಾಯೋಜಿತ ಹಿಂಸೆ

ತಮ್ಮ ಪ್ರಾಣ ಮಾನ ಉಳಿಸುವಂತೆ ಕೈ ಮುಗಿದು ನಿಂತಿರುವ ನೂರಾರಾ ಜನ ಮಹಿಳೆಯರು, ಅಳುತ್ತಿರುವ ಎಳೆಯ ಮಕ್ಕಳು, ಗಾಯಗಳನ್ನು ತೋರಿಸುತ್ತಿರುವ ಪುರುಷರು ಇದು ಯಾವುದೋ ಯುದ್ಧ ಪೀಡಿತ ದೇಶದ ದೃಶ್ಯವಲ್ಲ. ನಮ್ಮದೇ ದೇಶದ ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ರಾಜ್ಯಪಾಲರು ಗಲಭೆ ಪೀಡಿತ...

Read More

ಬಂಡಾಯದಿಂದ ಸಾಮರಸ್ಯದ ಯುಗದತ್ತ ಕನ್ನಡ ಸಾಹಿತ್ಯ

ಕನ್ನಡ ಸಾಹಿತ್ಯಕ್ಕೆ ಸಾವಿರ ವರ್ಷಗಳಿಗೂ ಮಿಕ್ಕ ಒಂದು ಪರಂಪರೆ ಇದೆ. ಈ ಪರಂಪರೆಯಲ್ಲಿ ಸಾಹಿತ್ಯದ ರೂಪ, ಭಾಷೆ, ವಸ್ತು ವಿನ್ಯಾಸದಲ್ಲಿ ಹಲವು ನೆಲೆಯ ಪಲ್ಲಟಗಳನ್ನು ಕಂಡಿದ್ದೇವೆ. ಸಾಹಿತ್ಯ ಕೃತಿಗಳು ತನ್ನ ಕಾಲದ ಹಲವು ಬಗೆಯ ವಿಚಾರಗಳಿಂದ ರೂಪ ಪಡೆದಿದ್ದು, ಸಮಗ್ರವಾಗಿ ವಿವೇಚಿಸಿದಾಗ...

Read More

ಮೀಸಲು ವಂಚಿತ ದಲಿತರ ಬಾಳಲ್ಲಿ ಮೂಡಬೇಕಾಗಿದೆ ಹೊಸ ಬೆಳಕು

ಮೀಸಲಾತಿ ಸಾಮಾಜಿಕ ನ್ಯಾಯವಂಚಿತ ಸಮುದಾಯಗಳಿಗೆ ಸಂವಿಧಾನಾತ್ಮಕ ರಕ್ಷಣೆಯೊಂದಿಗೆ ನೀಡಿದ ಅವಕಾಶ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಅವಕಾಶವಂಚಿತ ಸಮುದಾಯಗಳು ಪಡೆದ ಬಿಡುಗಡೆಯ ಬೆಳಕನ್ನು ಕಂಡಾಗ ಮೀಸಲಾತಿಯ ಹರಿಕಾರರ ದೂರದೃಷ್ಟಿಗೆ ಶತ ಶತ ಪ್ರಣಾಮಗಳನ್ನು ಸಲ್ಲಿಸಬೇಕಾಗಿದೆ. ಯಾರ ಪಾಲಿಗೆ...

Read More

ಮಾರ್ಕ್ಸ್‌ವಾದದಿಂದ ಮಾನವತೆಯತ್ತ ಸಾಗಬೇಕಾದ ಕಾಲ

ಮಾರ್ಕ್ಸ್‌ವಾದ ಜಗತ್ತಿನ ಸಮಸ್ಯೆಗಳಿಗೆ ಪರಿಹಾರವೇ? ಅಥವಾ ಮಾರ್ಕ್ಸ್ ವಾದವೇ ಜಗತ್ತಿನ ಸಮಸ್ಯೆಯೇ? ಹೀಗೊಂದು ಪ್ರಶ್ನೆಯನ್ನು ಗಂಭೀರವಾಗಿ ನಮಗೆ ನಾವೇ ಕೇಳಿಕೊಳ್ಳಬೇಕಾದ ಅಗತ್ಯವಿದೆ. ನಮ್ಮ ವೈಚಾರಿಕ ಜಗತ್ತು ಮಾರ್ಕ್ಸ್‌ವಾದದ ದಾಸ್ಯಕ್ಕೆ ಹೇಗೆ ಒಪ್ಪಿಸಿಕೊಂಡಿದೆಯೆಂದರೆ, ಮಾರ್ಕ್ಸ್‌ವಾದ ಎಂದರೇನೆಂದು ಅರಿಯದರವರೂ ಕೂಡ ಲೋಕದ ಖಾಯಿಲೆಗಳಿಗೆಲ್ಲಾ ಇದೇ...

Read More

Recent News

Back To Top