News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತೀವ್ರಗೊಂಡ ಮಹದಾಯಿ ಹೋರಾಟ: ಜೈಲ್ ಭರೋ ಚಳುವಳಿ

ಹುಬ್ಬಳ್ಳಿ : ನವಲಗುಂದದಲ್ಲಿ ಮಹದಾಯಿ ಹೋರಾಟ ತೀವ್ರಗೊಂಡಿದ್ದು, ರೈತರು ಹಾಗೂ ಹೋರಾಟಗಾರರಿಗೆ ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಇಂದು ಜೈಲ್‌ಭರೋ ಚಳವಳಿ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು ಸ್ವಯಂ ಬಂಧನಕ್ಕೊಳಗಾದರು. ಹುಬ್ಬಳ್ಳಿ ಹಾಗೂ ಇತರೆಡೆಯಿಂದ ನವಲಗುಂದವನ್ನು ರೈತರು...

Read More

ಹೆಣ್ಣು ಶಿಶುವಿನ ಕುರಿತು ಜಾಗೃತಿ ಅಗತ್ಯ: ಕ್ಲೀಫರ್ಡ್

ಹುಬ್ಬಳ್ಳಿ: ನಾಳೆ ರಾಷ್ಟ್ರೀಯ ಹೆಣ್ಣುಮಗುವಿನ ದಿನವಿದ್ದು ಅದರ ನಿಮಿತ್ತ ಸಾಕಷ್ಟು ಜನಜಾಗೃತಿಯ ಅಗತ್ಯವಿದೆ. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ರೆಸ್ಕ್ಯೂ ಸಂಸ್ಥಾಪಕ ಅಭಿಷೇಕ ಕ್ಲೀಫರ್ಡ್ ಹೇಳಿದರು. ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಲಿಂಗಪತ್ತೆ ಕಾನೂನು ಬಾಹಿರವೆಂದರೂ ನಡೆಯುತ್ತದೆ....

Read More

ನೀರಿನ ಖಾಸಗಿಕರಣ ಬೇಡ : ಸಾಹಿತ್ಯ ಸಂಭ್ರಮದಲ್ಲಿ ವ್ಯಕ್ತವಾದ ಆಶಯ

ಧಾರವಾಡ: ಭೂಮಿಯ ಮಾಲಿಕರಿಗೆ ಅಲ್ಲಿನ ನೀರಿನ ಮೇಲಿನ ಸಂಪೂರ್ಣ ಹಕ್ಕು ಬಿಟ್ಟುಕೊಟ್ಟು, ನೀರಿನ ಖಾಸಗಿಕರಣ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಧಾರವಾಡ ಸಾಹಿತ್ಯ ಸಂಭ್ರಮದ ಗೋಷ್ಠಿಯಲ್ಲಿ ಕೇಳಿಬಂತು. ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಸಾಹಿತ್ಯ ಸಂಭ್ರಮದ 2ನೇ ದಿನದ ಮೊದಲ ಗೋಷ್ಠಿ...

Read More

ಸಾಹಿತ್ಯ ಸಂಭ್ರಮದಲ್ಲಿ ಎಡ -ಬಲದ ಗದ್ದಲ

ಧಾರವಾಡ: ಡಾ.ಕಲಬುರ್ಗಿ ಅವರ ಹತ್ಯೆಯನ್ನು ಬಲಪಂಥೀಯರು ಮಾಡಿಲ್ಲ, ಅವರ ಕೊಲೆಗೆ ಆಸ್ತಿ ಜಗ ಕಾರಣ ಎಂದು ಸಿಐಡಿ ವರದಿ ಹೇಳಿದೆ..ಯಂತೆ ಎಂದು ಮಾಧ್ಯಮವೊಂದರ ವರದಿಯನ್ನು ಅವರು ಇನ್ನೂ ಪೂರ್ಣ ಹೇಳಿಯೇ ಇರಲಿಲ್ಲ, ಸಂಭ್ರಮದ ಅಂಗಳ ರಣರಂಗವೇ ಆಗಿತ್ತು. ಅದು ಧಾರವಾಡದಲ್ಲಿ ನಡೆಯುತ್ತಿರುವ...

Read More

ಕಾಗದ ಬಂದದ ಕಮಲನಾಭನದು

ಧಾರವಾಡ: ಕಾಗದ ಬಂದದ ಕಮಲಾಭನದು, ಈ ಕಾಗದವ ಓದಿಕೊಂಡು ಕಾಲ ಕಳೆಯಿರೋ ಎಂದು ದಾಸರು ಪದ್ಯ ಬರೆದಿದ್ದಾರೆ. ಕಾಗದ ಓದುವುದಿರಲಿ, ನಾವೀಗ ಆ ಕಾಲವನ್ನೇ ಕಳೆದುಕೊಂಡಿದ್ದೇವೆ ಎಂದು ಖೇದ ವ್ಯಕ್ತಪಡಿಸಿದವರು ಸಾಹಿತಿ, ಕವಿ ನಾ.ಡಿಸೋಜ. ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದ ’ನನಗೆ...

Read More

ಪರ್ಯಾಯ ಶಿಕ್ಷಣದತ್ತ ಒಲವು ಮೂಡಲಿ : ವಸಂತಕುಮಾರ್

ಧಾರವಾಡ: ಭಾರತದ ಮೌಲ್ಯಗಳನ್ನು ಜಗತ್ತಿಗೆ ಸಾರಿದವರು ಸ್ವಾಮಿ ವಿವೇಕಾನಂದರು ಎಂದು ಮೈಸೂರಿನ ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಬಿ.ವಿ.ವಸಂತಕುಮಾರ್ ಹೇಳಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಡಾ.ಮನ್ಸೂರ ಕಲಾಭವನದಲ್ಲಿ ಆಯೋಜಿಸಿದ್ದ ಸ್ವಾಮಿ...

Read More

ಗಣರಾಜ್ಯೋತ್ಸವಕ್ಕೆ ಧಾರವಾಡದ ಜಗ್ಗಲಗಿ ಮೇಳದ ಕಲಾವಿದರು

ಧಾರವಾಡ: ಜನವರಿ 26 ರಂದು ನವದೆಹಲಿಯ ರಾಜಪಥ್‌ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧಾರವಾಡದ ಕೆಲಗೇರಿಯ ಶ್ರೀ ದುರ್ಗಾದೇವಿ ಜಗ್ಗಲಿಗೆ ಮೇಳದ ಇಬ್ಬರು ಕಲಾವಿದರಿಗೆ ಭಾಗವಹಿಸುವ ಅವಕಾಶ ದೊರಕಿದೆ. ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯದ ಜನಪದ ಕಲೆಗಳನ್ನು...

Read More

ಹುಬ್ಬಳ್ಳಿ – ಅಂಕೋಲಾ ರೈಲ್ವೆ ಮಾರ್ಗಕ್ಕೆ ಕೇಂದ್ರ ಅಸ್ತು

ಹುಬ್ಬಳ್ಳಿ: ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಬಹುದಿನದ ಬೇಡಿಕೆಯಾಗಿದ್ದ ಹುಬ್ಬಳ್ಳಿ-ಅಂಕೋಲಾ ನಡುವಿನ ಹೊಸ ರೈಲ್ವೆ ಮಾರ್ಗಕ್ಕೆ ಕೇಂದ್ರ ಸರ್ಕಾರದ ಸಮ್ಮತಿ ಸಿಕ್ಕಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಅವರು ನಗರದ ಖಾಸಗಿ ಹೊಟೆಲ್‌ವೊಂದರಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬಜೆಟ್ ಪೂರ್ವಭಾವಿ...

Read More

ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಚಿಂತೆ ಬಿಡಿ ಚಿಂತನೆ ನಡೆಸಿ: ಡಿ.ಸಿ.ಪಿ ಖನಗಾವಿ ಹುಬ್ಬಳ್ಳಿ : ಯುವಜನತೆ ವಿದ್ಯುನ್ಮಾನ ಉಪಕರಣಗಳ ದಾಸರಾಗಿ, ಉತ್ಪಾದತೆಕಯ ಉತ್ಕಷ್ಟ ಸಮಯ ಹಾಳು ಮಾಡಿಕೊಂಡು ಚಿಂತೆಗೆ ಈಡಾಗದೇ, ಚಿಂತನೆ ಮಾಡುವುದಕ್ಕೆ ತಮ್ಮ ಅಮೂಲ್ಯ ಸಮಯ ಮೀಸಲಿಡಿ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರದ ಉಪ ಪೋಲಿಸ್ ಆಯುಕ್ತ...

Read More

ಧಾರವಾಡ ಗೃಹ ರಕ್ಷಕ ದಳಕ್ಕೆ ಸಮಗ್ರ ಚಾಂಪಿಯನ್‌ಶಿಪ್

ಧಾರವಾಡ: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಲಯ ಮಟ್ಟದ ಗೃಹರಕ್ಷಕ ದಳದ ಕ್ರೀಡಾಕೂಟದಲ್ಲಿ ಧಾರವಾಡ ಗೃಹರಕ್ಷಕ ದಳವು ಕ್ರೀಡೆ ಮತ್ತು ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಕ್ರೀಡಾಕೂಟದಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ ಹಾಗೂ ಮತ್ತಿತರ ಜಿಲ್ಲೆಗಳ ಗೃಹರಕ್ಷಕ ದಳದ ಸಿಬ್ಬಂದಿ ಭಾಗವಹಿಸಿದ್ದರು....

Read More

Recent News

Back To Top