ಧಾರವಾಡ: ಡಾ.ಕಲಬುರ್ಗಿ ಅವರ ಹತ್ಯೆಯನ್ನು ಬಲಪಂಥೀಯರು ಮಾಡಿಲ್ಲ, ಅವರ ಕೊಲೆಗೆ ಆಸ್ತಿ ಜಗ ಕಾರಣ ಎಂದು ಸಿಐಡಿ ವರದಿ ಹೇಳಿದೆ..ಯಂತೆ ಎಂದು ಮಾಧ್ಯಮವೊಂದರ ವರದಿಯನ್ನು ಅವರು ಇನ್ನೂ ಪೂರ್ಣ ಹೇಳಿಯೇ ಇರಲಿಲ್ಲ, ಸಂಭ್ರಮದ ಅಂಗಳ ರಣರಂಗವೇ ಆಗಿತ್ತು.
ಅದು ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದಲ್ಲಿನ ಎಡ ಮತ್ತು ಬಲಗಳ ನಡುವೆ ? ನಡೆದ ಗೋಷ್ಠಿ. ಮಂಜುನಾಥ ಅಜ್ಜಂಪುರ ಅವರು ಮೇಲಿನ ಮಾತನ್ನು ಉಸುರಿ, ಕೊನೆಗೆ ಎದ್ದ ಗದ್ದಲಕ್ಕೆ ಗೊಂದಲಗೊಂಡು ತಮ್ಮ ಮಾತನ್ನು ಅನಿವಾರ್ಯವಾಗಿ ಹಿಂತೆಗೆದುಕೊಂಡ ಪ್ರಸಂಗ ನಡೆಯಿತು.
ಅವರಾಗಿಯೇ ಕಲಬುರ್ಗಿ ಅವರ ಹತ್ಯೆಯ ಪ್ರಸ್ತಾಪವನ್ನೇ ಮಾಡಿರಲಿಲ್ಲ. ಸಭಿಕರಿಂದ ಕಲಬುರ್ಗಿ ಅವರನ್ನು ಕೊಂದವರು ಬಲಪಂಥೀಯರೆಂದು ಭಾವಿಸಬೇಕಾಗುತ್ತದೆ ಎಂಬ ಮಾತು ಕೇಳಿಬಂತು. ಅದಕ್ಕೆ ಪ್ರತಿಯಾಗಿ ಅಜ್ಜಂಪುರ ಮಂಜುನಾಥ ಅವರು, ಕಲಬುರ್ಗಿ ಅವರ ಹತ್ಯೆಯನ್ನು ಯಾರೂ ಸಮರ್ಥಿಸಿಕೊಳ್ಳುವುದಿಲ್ಲ ಎಂದೂ ಹೇಳಿದರು. ಆ ಮಾತನ್ನು ಗಣನೆಗೇ ತೆಗೆದುಕೊಳ್ಳದೇ ಅಲ್ಲಿನ ಕೆಲವರು ತಮ್ಮ ರೋಷಾವೇಶ ಪ್ರದರ್ಶಿಸಿದ್ದು ವಿಚಿತ್ರವಾಗಿತ್ತು.
ಕಮ್ಯುನಿಸಂ ಯಶಸ್ವಿಯಾಯಿತೇ ? ಯಾಕೆ ವಿಫಲವಾಯಿತು ? ಕೆಲವೇ ಪದಗಳ ಸುತ್ತ ನಾವು ಗಿರಕಿ ಹೊಡೆಯುತ್ತಿದ್ದೇವೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತು ವಸ್ತುಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಬೇಕು. ಕಮ್ಯನಿಸ್ಟ್ ದೇಶಗಳಾದ ರಷಿಯಾ, ಚೈನಾ ಯಾಕೆ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿವೆ? ಎಂದು ಮಂಜುನಾಥ್ ಅವರು ಗೋಷ್ಠಿಯಲ್ಲಿ ಖಾರವಾಗಿ ಪ್ರಶ್ನಿಸಿದ್ದರು.
ಇಂಗ್ಲಿಷ್ ಶಿಕ್ಷಣ ನಮ್ಮನ್ನು ಈ ಸ್ಥಿತಿಗೆ ತಂದಿದೆ. ಅಲೆಕ್ಸಾಂಡರ್ ಬರುವ ಮೊದಲೂ ನಮ್ಮಲ್ಲಿ ಗುರುಕುಲ ಪದ್ಧತಿ, ಉತ್ತಮ ಶಿಕ್ಷಣ ಪದ್ಧತಿ ಇತ್ತು. ಆಗ ಸಾಮಾಜಿಕ ಅಸಮಾನತೆಯ ಪ್ರಶ್ನೆಯೂ ಇರಲಿಲ್ಲ. ಎಲ್ಲರಿಗೂ ಸಮಾನ ಅವಕಾಶವಿತ್ತು ಹೀಗೆಂದು ಅವರು ಮೆಕಾಲೆ ಪ್ರಣೀತ ಶಿಕ್ಷಣ ಪದ್ಧತಿಯನ್ನು ಕಟುವಾಗಿ ಟೀಕಿಸಿದರು.
ಕೇರಳ ಹಾಗೂ ಪ.ಬಂಗಾಲದಲ್ಲಿ ಪ್ರಸ್ತುತ ಸ್ಥಿತಿ ಎಷ್ಟು ಭೀಕರವಾಗಿದೆ. ಅಸಹಿಷ್ಣುತೆಯ ಕೂಗೆಬ್ಬಿಸಿದವರು ಈಗೆಲ್ಲಿದ್ದಾರೆ ಎಂದು ಪ್ರಶ್ನಿಸಿದ ಅವರು, ತಸ್ಲಿಮಾ ನಸ್ರಿನ್, ಲೇಖಕ ರಶ್ದಿ ಬಗ್ಗೆ ಯಾಕೆ ಮಾತನಾಡಲ್ಲ ಎಂದೂ ಮಂಜುನಾಥ್ ಅವರು ಎಡ ಪಂಥದ ಅನಾವರಣಕ್ಕಿಳಿದರು.
ಆಗಲೇ ಎದ್ದದ್ದು ಗದ್ದಲ. ತಸ್ಲಿಮಾ ಹಾಗೂ ರಶ್ದಿ ನಮ್ಮ ದೇಶದವರಲ್ಲ. ಆದರೆ, ಜೆಎನ್ಯು ವಿವಿಯಲ್ಲಿ ಎಬಿವಿಪಿ ವಿದ್ಯಾರ್ಥಿಗಳ ಜೊತೆ ಜಗಳವಾಗಿತ್ತು. ಮಾಡಿದ ದಿನದಿಂದ ಇತ್ತೀಚೆಗೆ ಓರ್ವ ವಿದ್ಯಾರ್ಥಿ (ರಶೀದ್) ಕಾಣೆಯಾಗಿದ್ದಾನೆ. ಅವನನ್ನು ಹುಡುಕಿಕೊಡಿ ಎಂದು ಹೇಳಿದರು. ಅದಕ್ಕೆ ಉತ್ತರಿಸಿದ ಮಂಜುನಾಥ್ ಅವರು, ಕೇವಲ ರಶೀದ್ ಅಲ್ಲ, ಕೇರಳ, ಕಾಶ್ಮೀರಿ ಪಂಡಿತರ ಸ್ಥಿತಿ ಹೇಗಿದೆ ? ಬಾಂಗ್ಲಾ, ಬಿಹಾರ್ದಲ್ಲಿ ಏನಾಗ್ತಿದೆ ಎಂದು ಯೋಚಿಸಬೇಕೆಂದು ಸಲಹೆಯನ್ನೂ ನೀಡಿದರು.
ಗೋಷ್ಠಿಯ ಆರಂಭದಲ್ಲಿ ಕಾರ್ಲ್ಮಾರ್ಕ್ಸ್ನ ಮಾನವೀಯವಾದ, ಲೆನಿನ್, ರಾಮ ಮನೋಹರ ಲೋಹಿಯಾ, ಗಾಂಧಿ, ಕುವೆಂಪು ಹೀಗೇ ಎಡಪಂಥೀಯರೆಂದು ಗುರುತಿಸಿಕೊಂಡಿದ್ದರೂ, ಪ್ರಸ್ತುತ ಎಡ ಪಂಥೀಯ ನಿಲುವುಗಳಿಗೆ ಭಿನ್ನವಾಗಿದ್ದರು ಎಂದು ಗೋಷ್ಠಿಯಲ್ಲಿ ಹಾಜರಿದ್ದ ಕೆ.ಸತ್ಯನಾರಾಯಣ ಹೇಳಿದರು.
ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಈಗಿನ ಎಡ ಬದಿಯವರು ಧರ್ಮವನ್ನು ಅಫೀಮು ಎಂದು ತಪ್ಪು ತಿಳಿದುಕೊಂಡಿದ್ದಾರೆ. ಕಮ್ಯುನಿಸಂ, ಲೋಹಿಯಾವಾದಗಳು ಬಲಪಂಥದೊಂದಿಗೆ ಭೇದ ಹೊಂದಿದ್ದರೂ ಧರ್ಮದ ಗೊಡವೆಗೆ ಅವರು ಹೋಗಿರಲಿಲ್ಲ. ಅದು ನಿಜವಾದ ಎಡಪಂಥ ಎಂದೂ ಸತ್ಯನಾರಾಯಣ ಅವರು ಅಭಿಪ್ರಾಯಿಸಿದರು.
ಕೊನೆಗೆ ಮಧ್ಯಮ ಮಾರ್ಗವೇ ಶ್ರೇಷ್ಠ ಎಂದು ಕೆಲವರು ಅಭಿಪ್ರಾಯಿಸಿದರು. ಮಧ್ಯಮ ಮಾರ್ಗಿಗಳನ್ನು ವಿಮರ್ಶಕ ಚಂಪಾ ಸಾಹಿತ್ಯದ ಮಂಗಳ ಮುಖಿಯರು ಛೇಡಿಸಿದರು. ಇನ್ನೇನು ನಗೆಯ ಕಡಲೊಂದಿಗೆ ಗೋಷ್ಠಿ ಮುಗಿಯುವ ಹಂತದಲ್ಲಿ, ಎಡ ಮತ್ತು ಬಲ ಪ್ರದರ್ಶನವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.