Date : Monday, 25-05-2015
ಮುಂಬಯಿ: ಮುಂಬಯಿ ವಿಮಾನನಿಲ್ದಾಣದ ವ್ಯಾಪ್ತಿಯಲ್ಲಿ ಶನಿವಾರ ಮಾನವ ರಹಿತ ಪ್ಯಾರಚೂಟ್ಗಳು ಹಾರಾಡುತ್ತಿರುವುದು ಪತ್ತೆಯಾಗಿದ್ದು, ಕೆಲಕಾಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದ್ದು, ವಿಮಾನನಿಲ್ದಾಣದಲ್ಲಿ ಹೈಅಲರ್ಟ್ ಈಗ ಘೋಷಿಸಲಾಗಿದೆ. ಈ ಪ್ಯಾರಚೂಟ್ಗಳು ರಿಮೋಟ್ ಕಂಟ್ರೋಲ್ಡ್...
Date : Monday, 25-05-2015
ನ್ಯೂಜೆರ್ಸಿ: ಗಣಿತಜ್ಞ ಹಾಗೂ ಆಸ್ಕರ್ ಪ್ರಶಸ್ತಿ ಗೆದ್ದ ಜಾನ್ ಫೋರ್ಬ್ಸ್ ನ್ಯಾಶ್ (86)ಅವರು ಕಾರು ಅಪಘಾತದಲ್ಲಿ ಪತ್ನಿ ಸಹಿತರಾಗಿ ಅಸುನೀಗಿದ್ದಾರೆ. ನ್ಯೂಜೆರ್ಸಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರೂ ಇಹಲೋಕ ತ್ಯಜಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಬ್ಯೂಟಿಫುಲ್ ಮೈಂಡ್’ ಚಿತ್ರದ ಸ್ಫೂರ್ತಿ...
Date : Monday, 25-05-2015
ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್(ಸಿಬಿಎಸ್ಇ) ಸೋಮವಾರ 12ನೇ ತರಗತಿಯ ಫಲಿತಾಂಶವನ್ನು ಪ್ರಕಟಗೊಳಿಸಿದೆ. ಇಲ್ಲೂ ಬಾಲಕಿಯರು ಶೇ.87ರಷ್ಟು ಫಲಿತಾಂಶವನ್ನು ದಾಖಲಿಸಿ ಮೇಲುಗೈ ಸಾಧಿಸಿದರೆ. www.results.nic.in, www.cbseresults.nic.in, www.cbse.nic.in.ಮುಂತಾದ ಹಲವಾರು ವೆಬ್ಸೈಟ್ಗಳಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಮೊಬೈಲ್ ಆಪ್ ಮೂಲಕವೂ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ....
Date : Monday, 25-05-2015
ಜೈಪುರ: ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಗುಜ್ಜರ್ ಸಮುದಾಯ ರಾಜಸ್ತಾನದಲ್ಲಿ ನಡೆಸುತ್ತಿರುವ ಹೋರಾಟ ಸೋಮವಾರವೂ ಮುಂದುವರೆದಿದೆ. ಸರ್ಕಾರಿ ಹುದ್ದೆಯಲ್ಲಿ ಶೇ.5ರಷ್ಟು ಮೀಸಲಾತಿ ನೀಡಬೇಕೆಂಬುದು ಗುಜ್ಜರ್ ಸಮುದಾಯದ ಬೇಡಿಕೆಯಾಗಿದೆ. ಹಲವು ವರ್ಷಗಳಿಂದ ಅವರು ಇದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ರೈಲು ಮತ್ತು...
Date : Monday, 25-05-2015
ಸೋಪೋರ್: ಜಮ್ಮು ಕಾಶ್ಮೀರದ ಸೋಪೋರ್ ಜಿಲ್ಲೆಯಲ್ಲಿನ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಶೋ ರೂಮ್ ಮೇಲೆ ಸೋಮವಾರ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಒಬ್ಬ ಸಿಬ್ಬಂದಿ ಬಲಿಯಾಗಿದ್ದು, 3 ಮಂದಿಗೆ ಗಾಯಗಳಾಗಿವೆ. ಜನಜಂಗುಳಿಯಿಂದ ತುಂಬಿರುವ ಇಕ್ಬಾಲ್ ರಸ್ತೆಯಲ್ಲಿ ಈ ಶೋ ರೂಮ್ ಇದ್ದು,...
Date : Monday, 25-05-2015
ಬೆಂಗಳೂರು: ಒಂದಂಕಿ ಲಾಟರಿ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ನೀಡಬೇಕು ಎಂದು ರಾಜ್ಯವಾಲ ವಜುಭಾಯ್ ವಾಲಾ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸೋಮವಾರ ರಾಜ್ಯ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿಯವರಿಗೆ ಪತ್ರ ಬರೆದಿರುವ ಅವರು, ಒಂದಂಕಿ ದಂಧೆ ಮತ್ತು ಅದರ ವಿರುದ್ಧ...
Date : Monday, 25-05-2015
ಮುಂಬಯಿ: ಏಳು ಪ್ರಮುಖ ನದಿಗಳನ್ನು ಹೊಂದಿರುವ ಭಾರತದ 2025ರ ವೇಳೆಗೆ ನೀರಿನ ಕೊರತೆಯನ್ನು ಎದುರಿಸಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಭಾರತದಲ್ಲಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ, ಆದರೆ ಬೇಡಿಕೆಗೆ ತಕ್ಕಷ್ಟು ನೀರು ಪೂರೈಕೆಯಾಗುತ್ತಿಲ್ಲ, ವರ್ಷದಿಂದ ವರ್ಷಕ್ಕೆ ಭಾರತದ ನೀರಿನ ಸಮಸ್ಯೆ ಹೆಚ್ಚುತ್ತಿದೆ, 2025ರ...
Date : Monday, 25-05-2015
ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ದೆಹಲಿಯಲ್ಲಿ ಆಡಳಿತಕ್ಕೆ ಬಂದು 100 ದಿನಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯ ಸೆಂಟ್ರಲ್ ಪಾರ್ಕ್ನಲ್ಲಿ ಸೋಮವಾರ ಸಾರ್ವಜನಿಕ ಸಭೆ ನಡೆಸಲು ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಈ ವೇಳೆ ಅವರು ದೆಹಲಿ ಜನತೆಯೊಂದಿಗೆ ಸಂವಾದವನ್ನೂ...
Date : Monday, 25-05-2015
ಕರಾಚಿ: ಪಾಕಿಸ್ಥಾನದ ರಾಷ್ಟ್ರಪತಿ ಮಮ್ನೂನ್ ಹುಸೇನ್ ಅವರ ಮಗ ಸಲ್ಮಾನ್ ಮಮ್ನೂನ್ ಅವರನ್ನು ಗುರಿಯಾಗಿರಿಸಿಕೊಂಡು ಸೋಮವಾರ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರಿಮೋಟ್ ಕಂಟ್ರೋಲ್ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಸಲ್ಮಾನ್ ಸುರಕ್ಷಿತವಾಗಿ ಪಾರಾಗಿದ್ದಾರೆ. ಇತರ 3 ಮಂದಿ ಹತರಾಗಿದ್ದು, 13 ಮಂದಿಗೆ ಗಾಯಗಳಾಗಿವೆ....
Date : Monday, 25-05-2015
ಹೈದರಾಬಾದ್: ಬಿಸಿಲ ಪ್ರತಾಪಕ್ಕೆ ಅಕ್ಷರಶಃ ಬೆಂದು ಹೋಗಿರುವ ಆಂಧ್ರ ಮತ್ತು ತೆಲಂಗಾಣದಲ್ಲಿ ಇದುವರೆಗೆ 432 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಸಾಕಷ್ಟು ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೇ 18ರಿಂದ ಇಲ್ಲಿ ಬಿಸಿಲಿಗೆ ಪ್ರತಾಪ ಹೆಚ್ಚಾಗಿದ್ದು, ಜನ ಸಾಯುತ್ತಿರುವ...