ನವದೆಹಲಿ: ಅಮೇರಿಕದ ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆಗೊಳಿಸಿರುವ ಭಾರತದ ಟಾಪ್ 100 ಶ್ರೀಮಂತರ ಪಟ್ಟಿಯಲ್ಲಿ ಕರ್ನಾಟಕದ 10 ಪ್ರಮುಖರು ಸೇರಿದ್ದಾರೆ.
ಟಾಪ್ 100ರ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ, ಸನ್ ಫಾರ್ಮಾಸ್ಯೂಟಿಕಲ್ಸ್ನ ದಿಲೀಪ್ ಸ್ಯಾಂ ಹಾಗೂ ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಮ್ ಪ್ರೇಮ್ಜಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ರಂಜನ್ ಪೈ ಸೇರಿದಂತೆ ಕರ್ನಾಟಕದ 10 ಮಂದಿ ಉದ್ಯಮಿಗಳ ಹೆಸರು ಈ ಪಟ್ಟಿಯಲ್ಲಿ ಸೇರಿವೆ. ವಿಪ್ರೋ ಸಂಸ್ಥೆಯ ಅಜೀಮ್ ಪ್ರೇಮ್ಜಿ ರಾಜ್ಯದ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದು, ಟಾಪ್ 100ರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ಕರ್ನಾಟಕದ 10 ಪ್ರಮುಖರಲ್ಲಿ ಇನ್ಫೋಸಿಸ್ನ ಎಸ್. ನಾರಾಯಣಮೂರ್ತಿ 53ನೇ ಸ್ಥಾನ, ಮಣಿಪಾಲ್ ಗ್ರೂಪ್ನ ರಂಜನ್ ಪೈ 64ನೇ ಸ್ಥಾನ, ರಾಜೇಶ್ ಮೆಹ್ತಾ 65ನೇಸ್ಥಾನ, ಬಿ.ಆರ್. ಶೆಟ್ಟಿ 66ನೇ ಸ್ಥಾನ, ಕ್ರಿಸ್ ಗೋಪಾಲಕೃಷ್ಣನ್ 67ನೇ ಸ್ಥಾನ, ಎಂಬಸ್ಸಿ ಗ್ರೂಪ್ನ ಜಿತೇಂದ್ರ ವೀರಾನಿ 68ಸ್ಥಾನ ಹಾಗೂ ನಂದನ್ ನಿಲೇಕಣಿ 69ನೇ ಸ್ಥಾನದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.