ನವದೆಹಲಿ: ಇಂಟರ್ನೆಟ್ ದಿಗ್ಗಜ ಗೂಗಲ್ ಗುರುವಾರ ಸ್ವಾತಂತ್ರ್ಯ ಹೋರಾಟಗಾರ್ತಿ, ವಿದ್ವಾಂಸಕಿ ಅನಿಬೆಸೆಂಟ್ ಅವರ 168ನೇ ಜನ್ಮದಿನವನ್ನು ವಿಶೇಷ ಗೂಗಲ್ ಡೂಡಲ್ ಮೂಲಕ ಆಚರಿಸಿದೆ.
ಅನಿಬೆಸೆಂಟ್ ಅವರು ’ನ್ಯೂ ಇಂಡಿಯಾ’ ಎಂದು ಬರೆದಿರುವ ಪುಸ್ತಕವನ್ನು ಹಿಡಿದು ತನ್ನ ಕುರ್ಚಿಯಲ್ಲಿ ಕುಳಿತಿರುವ ರೀತಿಯಲ್ಲಿ ಆಕರ್ಷಕ ಡೂಡಲ್ನ್ನು ವಿನ್ಯಾಸಗೊಳಿಸಲಾಗಿದೆ.
1847 ಅಕ್ಟೋಬರ್ 1ರಂದು ಜನಿಸಿದ ಅನಿಬೆಸೆಂಟ್, ಖ್ಯಾತ ಬ್ರಿಟಿಷ್ ಸಮಾಜವಾದಿ, ಥಿಯೋಸಾಫಿಸ್ಟ್, ಮಹಿಳಾ ಹೋರಾಟಗಾರ್ತಿ, ಲೇಖಕಿ, ವಾಗ್ಮಿ, ಭಾರತ ಮತ್ತು ಐರಿಶ್ ದೇಶದ ಸ್ವಾತಂತ್ರ್ಯಕ್ಕೆ ಬೆಂಬಲ ನೀಡಿದವರು.
ತಮ್ಮ ಥಿಯೋಸಾಫಿ ಸಂಬಂಧಿತ ಕಾರ್ಯಕ್ಕಾಗಿ ಭಾರತಕ್ಕೆ ಪ್ರಯಾಣಿಸಿದ ಇವರು, 1898ರಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಲು ಸಹಾಯ ಮಾಡಿದರು, 1922ರಲ್ಲಿ ಹೈದರಾಬಾದ್ ನ್ಯಾಷನಲ್ ಕಾಲೇಜಿಯೇಟ್ ಬೋರ್ಡ್ನ್ನು ಸ್ಥಾಪಿಸಿದರು.
1907ರಲ್ಲಿ ಇವರು ಥಿಯೋಸಾಫಿಕಲ್ ಸೊಸೈಟಿಯ ಅಧ್ಯಕ್ಷೆಯಾದರು. ಇದರ ಪ್ರಮುಖ ಕಛೇರಿ ಚೆನ್ನೈನ ಅಡ್ಯಾರ್ನಲ್ಲಿದೆ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುವ ಮೂಲಕ ಭಾರತದ ರಾಜಕೀಯ ರಂಗಕ್ಕೂ ಪ್ರವೇಶಿಸಿದರು.
1914ರಲ್ಲಿ ಮೊದಲ ಮಹಾಯುದ್ಧದ ವೇಳೆ ಹೋಂ ರೂಲ್ ಲೀಗ್ ಆರಂಭಿಸಿದ ಇವರು ಭಾರತದ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದರು. 1917ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನ ಅಧ್ಯಕ್ಷರಾದರು.
1933ರಲ್ಲಿ ಕೊನೆಯುಸಿರು ಎಳೆಯುವವರೆಗೂ ಇವರು ಭಾರತದ ಸ್ವಾತಂತ್ರ್ಯಕ್ಕಾಗಿ, ಥಿಯೋಸಾಫಿಕಲ್ ಸೊಸೈಟಿಗಾಗಿ ನಿರಂತರ ಹೋರಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.