Date : Tuesday, 24-07-2018
ಕಿಗಲಿ: ರುವಾಂಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಅಧ್ಯಕ್ಷ ಪವಲ್ ಕಗಮೆ ಅವರೊಂದಿಗೆ ಹಲವಾರು ವಿಷಯಗಳ ಬಗ್ಗೆ ಮಾತುಕತೆಯನ್ನು ನಡೆಸಿದ್ದಾರೆ. ಬಳಿಕ ಆ ರಾಷ್ಟ್ರಕ್ಕೆ 200 ಮಿಲಿಯನ್ ಡಾಲರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ. ರಕ್ಷಣೆ, ವ್ಯಾಪಾರ, ಕೃಷಿ ವಲಯದಲ್ಲಿ ಸಹಕಾರವನ್ನು ಬಲಿಷ್ಠಗೊಳಿಸುವ...
Date : Tuesday, 24-07-2018
ನವದೆಹಲಿ: ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಇರಾನ್ ಭಾರತದ ಎರಡನೇ ಅತೀದೊಡ್ಡ ಇಂಧನ ಪೂರೈಕಾ ರಾಷ್ಟ್ರವಾಗಿ ಹೊರಹೊಮ್ಮಿದೆ. ಇರಾಕ್ ನಂ.1 ಸ್ಥಾನದಲ್ಲಿದೆ. ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತ 5.22 ಮಿಲಿಯನ್ ಟನ್ ತೈಲವನ್ನು ಸೌದಿ ಅರೇಬಿಯಾದಿಂದ ಖರೀದಿ ಮಾಡಿದೆ, ಇರಾನ್ನಿಂದ 5.6...
Date : Tuesday, 24-07-2018
ನವದೆಹಲಿ: ದೇಶದಲ್ಲಿ ಅಪಾರ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲು ಹೈಡ್ರೋಕಾರ್ಬನ್ ಸೆಕ್ಟರ್ಗೆ ಹೆಚ್ಚು ಸಾಮರ್ಥ್ಯವಿದೆ ಎಂದು ಕೇಂದ್ರ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ನವದೆಹಲಿಯಲ್ಲಿ ಹೈಡ್ರೋಕಾರ್ಬನ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ನ ನೂತನ ಕಛೇರಿ ಮತ್ತು ವೆಬ್ಸೈಟ್ನ್ನು ಉದ್ಘಾಟಿಸಿ ಅವರು ಮಾತನಾಡಿದರು....
Date : Tuesday, 24-07-2018
ನವದೆಹಲಿ: ‘GiftsOnAir’ 2018ರ ಅತ್ಯುತ್ತಮ ಸ್ಟಾರ್ಟ್ಅಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಫ್ಲೈನ್ ಮತ್ತು ಆನ್ಲೈನ್ ವ್ಯಾಪಾರದ ನಡುವಣ ಅಂತರವನ್ನು ಕುಗ್ಗಿಸುವ ಮಹತ್ವಾಕಾಂಕ್ಷೆ ಹೊಂದಿರುವ ಇದು ಅತ್ಯಂದ ನಾವೀಣ್ಯಪೂರ್ಣ ಸ್ಟಾರ್ಟ್ಅಪ್ ಎಂದೆನಿಸಿಕೊಂಡಿದೆ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ 2018ರ ಜನವರಿಯಲ್ಲಿ, ಸಾರ್ಥಕ್ ಖಂಡೇಲ್ವಾಲ, ಶೋಭಿತ್...
Date : Tuesday, 24-07-2018
ರಾವಂಡ: ಭಾರತೀಯ ಸಮುದಾಯ ವಿಶ್ವವ್ಯಾಪಿಯಾಗಿ ತನ್ನ ಹೆಗ್ಗರುತನ್ನು ಮೂಡಿಸಿದೆ, ಅನಿವಾಸಿ ಭಾರತೀಯರು ದೇಶದ ‘ರಾಷ್ಟ್ರದೂತರು’ ಎಂದು ರುವಾಂಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರುವಾಂಡಾದಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಲ್ಲಿರುವ ಭಾರತೀಯರು ರುವಾಂಡಾದ ಪ್ರಗತಿಗೆ ಸಾಕಷ್ಟು ಕೊಡುಗೆಗಳನ್ನು...
Date : Monday, 23-07-2018
ಲಕ್ನೋ: ಇಂದು ಹತ್ರಾಸ್ಗೆ ಭೇಟಿ ನೀಡುವ ಮೂಲಕ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ದಾಖಲೆ ಸೃಷ್ಟಿಸಿದ್ದಾರೆ. ಆಡಳಿತಾವಧಿಯಲ್ಲಿ 16 ತಿಂಗಳಲ್ಲಿ ಎಲ್ಲಾ 75 ಜಿಲ್ಲೆಗಳಿಗೆ ಭೇಟಿ ನೀಡಿ ಅವರು ದಾಖಲೆ ಮಾಡಿದ್ದಾರೆ. ಕಳೆದ ವರ್ಷ ಮಾರ್ಚ್ 19ರಂದು ಸಿಎಂ ಆಗಿ...
Date : Monday, 23-07-2018
ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಯ ಧೀಮಂತ ನಾಯಕರು ಎನಿಸಿರುವ ಚಂದ್ರಶೇಖರ್ ಆಜಾದ್ ಮತ್ತು ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಇಬ್ಬರು ರಾಷ್ಟ್ರ ನಾಯಕರಿಗೂ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ನಮನಗಳನ್ನು ಸಲ್ಲಿಸಿದ್ದಾರೆ. ‘ಲೋಕಮಾನ್ಯ ತಿಲಕ್ ಅವರಿಗೆ...
Date : Monday, 23-07-2018
ನವದೆಹಲಿ: ದೆಹಲಿಯ ‘ಜಂತರ್ ಮಂತರ್’ನಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಸಂಪೂರ್ಣ ನಿಷೇಧವನ್ನು ಹೇರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಅಲ್ಲದೇ ಪ್ರತಿಭಟನೆ ನಡೆಸುವುದಕ್ಕೆ ನಿಯಮಗಳನ್ನು ರೂಪಿಸುವುದಕ್ಕೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಜನರ ಪ್ರತಿಭಟನೆಯ ಹಕ್ಕು ಮತ್ತು ಶಾಂತಿಯುತವಾಗಿ ಬದುಕುವ ಹಕ್ಕಿನ...
Date : Monday, 23-07-2018
ನವದೆಹಲಿ: ಭಾರತದ ಬಾರ್ಡರ್ ರೋಡ್ಸ್ ಆರ್ಗನೈಝೇಶನ್(ಬಿಆರ್ಓ) ಭೂತಾನ್ನ ಪ್ರಮುಖ ರಸ್ತೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. ಈ ರಸ್ತೆ ಆ ದೇಶದ ಗಡಿ ನಗರವಾದ ಫುವೆಂಟ್ಹೋಲಿಂಗ್ನ್ನು ರಾಜಧಾನಿ ಥಿಂಫುವಿನೊಂದಿಗೆ ಸಂಪರ್ಕಿಸುತ್ತದೆ. ಸುಮಾರು 30 ಕಿಲೋಮೀಟರ್ ಉದ್ದ ದಾಮ್ಚು -ಚುಖಾ ರಸ್ತೆ ಇದಾಗಿದ್ದು, ಹಿಮಾಲಯದ...
Date : Monday, 23-07-2018
ನವದೆಹಲಿ: ಭಾರತ ಸರ್ಕಾರ ಆರಂಭಿಸಿರುವ ‘ಸ್ಟಡಿ ಇನ್ ಇಂಡಿಯಾ’ ಯೋಜನೆಯಡಿ, ಯುದ್ಧ ಪೀಡಿತ ಸಿರಿಯಾ ರಾಷ್ಟ್ರದ ಸುಮಾರು 500 ವಿದ್ಯಾರ್ಥಿಗಳು ಭಾರತದ ವಿವಿಧ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗುತ್ತಿದ್ದಾರೆ. ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮಧ್ಯ ಪೂರ್ವ ಮತ್ತು ಆಫ್ರಿಕಾ...