ಲಕ್ನೋ: ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳುಸುದ್ದಿಗಳ ವಿರುದ್ಧ ಉತ್ತರ ಪ್ರದೇಶ ಪೋಲಿಸರು ಹೋರಾಟ ಆರಂಭಿಸಿದ್ದಾರೆ. ಅದಕ್ಕಾಗಿ ಸುಮಾರು 3 ಲಕ್ಷ 67 ಸಾವಿರ ಡಿಜಿಟಲ್ ಸ್ವಯಂಸೇವಕರ ಪಡೆಯನ್ನು ಸಿದ್ಧಗೊಳಿಸಲು ಮುಂದಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳುಸುದ್ದಿಗಳು ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ತಂದೊಡ್ಡುತ್ತಿವೆ, ಕೋಮು ಭಾವನೆಯನ್ನು ಕೆರಳಿಸುತ್ತಿದೆ. ಈ ಹಿನ್ನಲೆಯಲ್ಲಿ ಇವುಗಳ ವಿರುದ್ಧ ಹೋರಾಡಲು ಸಮರ್ಥ ಪಡೆಯನ್ನು ರಚಿಸಲು ನಿರ್ಧರಿಸಿದ್ದೇವೆ ಎಂದು ಅಲ್ಲಿನ ಡಿಜಿಪಿ ಓ.ಪಿ ಸಿಂಗ್ ಹೇಳಿದ್ದಾರೆ.
ಡಿಜಿಟಲ್ ಆರ್ಮಿ ಸುಮಾರು 1469 ಪೋಲಿಸ್ ಠಾಣೆ ವ್ಯಾಪ್ತಿಯ 250 ಸ್ವಯಂಸೇವಕರನ್ನು ಹೊಂದಲಿದೆ. ಈ ಸ್ವಯಂಸೇವಕರು ಟ್ವಿಟರ್, ಫೇಸಬುಕ್ ಹಾಗೂ ವಾಟ್ಸ್ಯಾಪ್ಗಳಲ್ಲಿ ಹರಿದಾಡುತ್ತಿರುವ ಸುಳ್ಳುಸುದ್ದಿಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳುಸುದ್ದಿಗಳಿಂದ ಗುಂಪು ಹತ್ಯೆ, ಗುಂಪು ಹಲ್ಲೆಗಳಂತಹ ಅಪರಾಧಗಳು ಜರುಗುತ್ತಿವೆ. ಹೀಗಾಗಿ ಇಂತಹವುಗಳ ವಿರುದ್ಧ ಹೋರಾಡಲು ಕಠಿಣ ಕಾರ್ಯಪಡೆಯನ್ನು ಸಿದ್ಧಪಡಿಸುವ ಅನಿವಾರ್ಯ ಉಂಟಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.