ನವದೆಹಲಿ: ರಾಜಕಾರಣಿಗಳು ಅದರಲ್ಲೂ ಬಿಜೆಪಿಯ ನಾಯಕರುಗಳು ಪ್ರತೀವರ್ಷವು ರಾಮಾಯಣ ಮರುಚಿತ್ರಿಸುವ ರಾಮಲೀಲಾದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಆದರೆ ಈ ಬಾರಿ ಒಂದು ಹೆಜ್ಜೆ ಮುಂದು ಹೋಗಿ ಬಿಜೆಪಿಯ ಹಲವಾರು ಮುಖಂಡರುಗಳು ರಾಮಾಯಣದ ಪಾತ್ರಗಳ ವೇಷಧಾರಿಗಳಾಗಿ ಮಿಂಚಲಿದ್ದಾರೆ.
ಈ ವರ್ಷ ಕೇಂದ್ರದ ಇಬ್ಬರು ಸಚಿವರಗಳು ರಾಜ್ಯ ಸರ್ಕಾರದ ಇಬ್ಬರು ಸಚಿವರುಗಳು ರಾಮಲೀಲಾ ಸಮಾರಂಭದಲ್ಲಿ ರಾಮಾಯಣದ ವೇಷಧಾರಿಗಳಾಗಿ ಕಂಗೊಳಿಸಲಿದ್ದಾರೆ. ಕೇಂದ್ರ ಸಚಿವ ಹರ್ಷವರ್ಧನರವರು ಸೀತೆಯ ತಂದೆ ಜನಕ ಮಹಾರಾಜನ ವೇಷ ಧರಿಸಲಿದ್ದಾರೆ. ಸಚಿವ ವಿಜಯ ಸಾಂಪ್ಲಾ ಅವರು ಪಾರ್ವತಿಯ ತಂದೆ ಹಿಮವಂತ ಆಗಲಿದ್ದಾರೆ. ಆಸ್ಸಾಮನ ರಾಜ್ಯಪಾಲ ಜಗದೀಶ ಮುಖಿಯವರು ನಿಶಾದರಾಜ ಆಗಲಿದ್ದಾರೆ.
ದೆಹಲಿ ಬಿಜೆಪಿ ಮುಖಂಡ ಮನೋಜ ತಿವಾರಿಯವರು ಅಂಗದನ ಪಾತ್ರಧಾರಿಯಾಗಲಿದ್ದಾರೆ. ಬಿಜೆಪಿಯ ಇನ್ನೋರ್ವ ಮುಖಂಡ ವಿಜೇಂದ್ರ ಗುಪ್ತಾಅವರು ಋಷಿ ಅಟ್ಟ್ರಿ ಆಗಲಿದ್ದಾರೆ. ಒಟ್ಟಿನಲ್ಲಿ ಕೇಂದ್ರದ ಸಚಿವರುಗಳನ್ನು ಈ ಬಾರಿಯ ರಾಮಲೀಲಾದಲ್ಲಿ ರಾಮಾಯಣ ಪಾತ್ರಧಾರಿಗಳಾಗಿ ನೋಡುವ ಅವಕಾಶ ಜನರಿಗೆ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.