Date : Thursday, 30-08-2018
ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸ್ವಪ್ನ ಬರ್ಮನ್ ಇತಿಹಾಸ ಸೃಷ್ಟಿಸಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪರವಾಗಿ ಚಿನ್ನ ಗೆದ್ದ ಮೊತ್ತ ಮೊದಲ ಹೆಪ್ಟಾಥ್ಲೇಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಮಹಿಳೆಯರ ಹೆಪ್ಟಾಥ್ಲಾನ್ ಇವೆಂಟ್‌ನಲ್ಲಿ ಅವರು ಬಂಗಾರದ...
Date : Wednesday, 29-08-2018
ನವದೆಹಲಿ: ಭಾರತೀಯ ರೈಲ್ವೇ ಹೈಟೆಕ್ ಸ್ಪರ್ಶ ಪಡೆದುಕೊಳ್ಳುತ್ತಿದೆ. ಈಗಾಗಲೇ ದೇಶದ ಮೊತ್ತ ಮೊದಲ ಇಂಟೆಲಿಜೆಂಟ್ ಸ್ಮಾರ್ಟ್ ಕೋಚ್‌ಗಳು ಅನಾವರಣಗೊಂಡಿವೆ. ಇದರಿಂದ ಪ್ರಯಾಣ ಮತ್ತಷ್ಟು ಸುರಕ್ಷಿತ ಮತ್ತು ಆರಾಮದಾಯಕವಾಗುತ್ತಿದೆ. ಇಂಟೆಲಿಜೆಂಟ್ ಸೆನ್ಸಾರ್ ಆಧಾರಿತ ವ್ಯವಸ್ಥೆಯ ಮೂಲಕ ಸ್ಮಾರ್ಟ್ ಕೋಚ್‌ಗಳು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು...
Date : Wednesday, 29-08-2018
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯ ಸುದ್ದಿಗಳಿಗಿಂತ ಹೆಚ್ಚಾಗಿ ಸುಳ್ಳು ಸುದ್ದಿಗಳೇ ಹರಿದಾಡುತ್ತಿವೆ. ಇದರಿಂದಾಗಿ ಜನರಿಗೆ ಸತ್ಯ ಯಾವುದು ಮತ್ತು ಸುಳ್ಳು ಯಾವುದು ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಆವಾಂತರಗಳನ್ನು ಅರ್ಥ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು,...
Date : Wednesday, 29-08-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮಾನವ ಸಹಿತ ಗಗನಯಾನವನ್ನು ಘೋಷಣೆ ಮಾಡಿದ ಬಳಿಕ ದೇಶದೆಲ್ಲೆಡೆ ಅದರ ಬಗೆಗಿನ ಕುತೂಹಲ ಗರಿಗೆದರಿದೆ. ಭಾರತದ ಮೊತ್ತ ಮೊದಲ ಮಾನವ ಗಗನಯಾನದ ಸ್ವರೂಪ ಹೇಗಿರಬಹುದು, ಅದಕ್ಕೆ ಯಾವ ರೀತಿಯ ಸಿದ್ಧತೆಗಳು ನಡೆಯುತ್ತಿವೆ ಎಂಬಿತ್ಯಾದಿ...
Date : Wednesday, 29-08-2018
ನವದೆಹಲಿ: ರಫೆಲ್ ಒಪ್ಪಂದವನ್ನು ಹಿಡಿದುಕೊಂಡು ಕೇಂದ್ರದ ವಿರುದ್ಧ ನಿರಂತರ ಟೀಕಾಪ್ರಹಾರ ಮಾಡುತ್ತಿರುವ ಪ್ರತಿಪಕ್ಷಗಳಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಯುಪಿಎ 2007ರಲ್ಲಿ ಮಾಡಿಕೊಂಡಿದ್ದಕ್ಕಿಂತ ಕಡಿಮೆ ಬೆಲೆಗೆ ಎನ್‌ಡಿಎ ಸರ್ಕಾರ 2016ರಲ್ಲಿ ರಫೆಲ್ ಡೀಲ್ ಕುದುರಿಸಿದೆ ಎಂದು ಜೇಟ್ಲಿ...
Date : Wednesday, 29-08-2018
ನವದೆಹಲಿ: ದೇಶಕ್ಕೆ ಅಪಾಯಕಾರಿಗಳಾಗಿರುವ ಭಯೋತ್ಪಾದಕರು ಮತ್ತು ನಕ್ಸಲರು ಒಂದಾದರೆ ನಮ್ಮ ದೇಶದ ಭದ್ರತೆಯ ಗತಿ ಏನಾಗಬಹುದು? ಹೌದು, ಇಂತಹದ್ದೊಂದು ಭಯ ಎಲ್ಲರನ್ನೂ ಕಾಡುತ್ತಿದೆ. ಈ ಭಯಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಹ ಮಾಹಿತಿಯನ್ನು ಹೊರ ಹಾಕಿದೆ ಗುಪ್ತಚರ ಇಲಾಖೆ. ಹೋರಾಟಗಾರರ ಸೋಗಿನಲ್ಲಿರುವ ನಕ್ಸಲ್...
Date : Wednesday, 29-08-2018
ಅನಂತ್‌ನಾಗ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧರು ಉಗ್ರ ದಮನ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಇಂದು ಕೂಡ ಇಬ್ಬರು ಉಗ್ರರನ್ನು ನೆಲಕ್ಕುರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೇ ಅನಂತ್‌ನಾಗ್ ಜಿಲ್ಲೆಯ ಮುನ್‌ವರ್ಡ್ ಗ್ರಾಮದಲ್ಲಿ ಭಯೋತ್ಪಾದಕರು ಮತ್ತು ಯೋಧರ ಗುಂಡಿನ ಚಕಮಕಿ ಆರಂಭಗೊಂಡಿದೆ....
Date : Wednesday, 29-08-2018
ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಹೋರಾಟಗಾರರನ್ನು ಬಂಧಿಸಿದ್ದನ್ನು ಪ್ರಶ್ನಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯನ್ನು ರಾಜಕೀಯದಿಂದ ದೂರವಿಡುವಂತೆ ರಾಹುಲ್ ಅವರಿಗೆ ರಿಜಿಜು ಸಲಹೆ ನೀಡಿದ್ದಾರೆ....
Date : Wednesday, 29-08-2018
ನವದೆಹಲಿ: ಭಾರತದ ವಿದೇಶಿ ನೇರ ಹೂಡಿಕೆಯು 2018-19ರ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.23ರಷ್ಟು ಯುಎಸ್‌ಡಿ 12.75 ಬಿಲಿಯನ್‌ಗೆ ಏರಿಕೆಯಾಗಿದೆ ಎಂದು ಅಧಿಕೃತ ಅಂಕಿಅಂಶಗಳಿಂದ ತಿಳಿದು ಬಂದಿದೆ. 2017-18ರ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ವಿದೇಶಿ ಹೂಡಿಕೆಯ ಹರಿವು ಯುಎಸ್‌ಡಿ 10.4 ಬಿಲಿಯನ್ ಆಗಿತ್ತು. ಈ ಬಾರಿ...
Date : Wednesday, 29-08-2018
ಮುಂಬಯಿ: ಹಿಂದಿ ಸಿನಿಮಾ ರಂಗದ ದಿಗ್ಗಜ ನಟ ಅಮಿತಾಭ್ ಬಚ್ಚನ್ ಅವರು ರೂ.1 ಕೋಟಿಯನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ಮತ್ತು ರೂ.1.5 ಕೋಟಿಯನ್ನು ರೈತರ ಸಾಲಮನ್ನಾಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಹುತಾತ್ಮ ಯೋಧರ ಕುಟುಂಬಗಳಿಗೆ ತಾನು ಏನಾದರು ಮಾಡಬೇಕೆಂದು ಬಯಸಿದ್ದೇನೆ ಎಂದು...