ವಾಯ ಮಾಲಿನ್ಯ ನಿಯಂತ್ರಿಸುವ ಸಲುವಾಗಿ 2020ರ ಎಪ್ರಿಲ್ 1ರಿಂದ ದೇಶದಲ್ಲಿ ಭಾರತ್ ಸ್ಟೇಜ್ IV ವೆಹಿಕಲ್ನ್ನು ಮಾರಾಟ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ
ನವದೆಹಲಿ: 2020ರ ಎಪ್ರಿಲ್ 1ರಿಂದ ದೇಶದಲ್ಲಿ ಭಾರತ್ ಸ್ಟೇಜ್ IV ವೆಹಿಕಲ್ನ್ನು ಮಾರಾಟ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಮೋಟಾರು ವಾಹನಗಳ ಮಾಲಿನ್ಯಕಾರಕಗಳನ್ನು ತಡೆಗಟ್ಟುವ ಸಲುವಾಗಿ ಭಾರತ್ ಸ್ಟೇಜ್ ಹೊರಸೂಸುವಿಕೆ ಮಾನದಂಡವನ್ನು ಸರ್ಕಾರ ರಚಿಸಿದೆ. ದೇಶದಾದ್ಯಂತ 2020ರ ಎಪ್ರಿಲ್ 1ರಿಂದ ಭಾರತ್ ಸ್ಟೇಜ್ VI (ಅಥವಾ ಬಿಎಸ್ VI) ಎಮಿಶನ್ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ.
ನ್ಯಾ. ಮದನ್ ಬಿ ಲೊಕುರ್ ಅವರ ನೇತೃತ್ವದ ಮೂವರು ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠ ತೀರ್ಪನ್ನು ನೀಡಿದ್ದು, ಕೇವಲ ಬಿಎಸ್ VI ಕಾಂಪ್ಲಿಯಂಟ್ ವೆಹ್ಹಿಕಲ್ಗಳನ್ನು ಮಾತ್ರ 2020ರ ಎಪ್ರಿಲ್ 1 ರಿಂದ ಮಾರಾಟ ಮಾಡಬಹುದು ಎಂದಿದೆ.
ಅಲ್ಲದೇ ವಾಯು ಮಾಲಿನ್ಯಕಾರಕಗಳನ್ನು ತಡೆಗಟ್ಟುವುದು ಪ್ರಸ್ತುತ ಕಾಲಘಟ್ಟದ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದೆ.
Source: news18
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.