ಉತ್ತರಾಖಂಡ ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ827 ಅಶ್ಲೀಲ, ಅಸಭ್ಯ ವೆಬ್ಸೈಟ್ಗಳನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಇಂಟರ್ನೆಟ್ ಪ್ರೊವೈಡರ್ಗಳಿಗೆ ಸೂಚನೆ ನೀಡಿದೆ.
ನವದೆಹಲಿ: ಅತ್ಯಂತ ಅಶ್ಲೀಲ ಹಾಗೂ ಕೆಟ್ಟ ವಿಷಯಗಳನ್ನೊಳಗೊಂಡ 827 ವೆಬ್ಸೈಟ್ಗಳನ್ನು ಸ್ಥಗಿತಗೊಳಿಸುವಂತೆ ಇಂಟರ್ನೆಟ್ ಪ್ರೊವೈಡರ್ಗಳಿಗೆ ಕೇಂದ್ರ ಸರ್ಕಾರ ಆದೇಶ ನೀಡಿದೆ. ಉತ್ತರಾಖಂಡ ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಈ ಆದೇಶ ನೀಡಲಾಗಿದೆ.
ಉತ್ತರಾಖಂಡ ಹೈಕೋರ್ಟ್ 857 ವೆಬ್ಸೈಟ್ಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿತ್ತು, ಆದರೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ 30 ಪೋರ್ಟಲ್ಗಳಲ್ಲಿ ಅಸಭ್ಯತನ ಇಲ್ಲ ಎಂಬುದನ್ನು ಗಮನಿಸಿ ಅವುಗಳನ್ನು ಮುಂದುವರೆಸಲು ಅನುಮತಿ ನೀಡಿದೆ.
ಪ್ರಸ್ತುತ ಸಚಿವಾಲಯ ಟೆಲಿಕಾಂ ಇಲಾಖೆಗೆ 827 ವೆಬ್ಸೈಟ್ಗಳ ಸ್ಥಗಿತಕ್ಕೆ ಆದೇಶಿಸಿದೆ. ಟೆಲಿಕಾಂ ಇಲಾಖೆ, ಎಲ್ಲಾ ಪರವಾನಗಿ ಹೊಂದಿ ಇಂಟರ್ನೆಟ್ ಪ್ರೊವೈಡರ್ಗಳಿಗೆ ಅಶ್ಲೀಲ ವೆಬ್ಸೈಟ್ಗಳ ಸ್ಥಗಿತಕ್ಕೆ ಕ್ರಮ ಜರುಗಿಸುವಂತೆ ಸೂಚನೆ ನೀಡಿದೆ.
source: NEWS18
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.