Date : Monday, 29-04-2019
ನವದೆಹಲಿ: ದೇಶದ ರೈತರಿಗೆ ಸಹಾಯ ಮಾಡುವ ಸಲುವಾಗಿ, ಭಾರತವು ಗೋಧಿ ಮೇಲಿನ ಆಮದು ಸುಂಕವನ್ನು ಶೇ.40ಕ್ಕೆ ಏರಿಕೆ ಮಾಡಿದೆ. ಹಿಂದೆ ಶೇ.30ರಷ್ಟು ಸುಂಕ ಇತ್ತು. ಕಳೆದ ವರ್ಷ ಅಧಿಕ ಇಳುವರಿ ಬಂದ ಪರಿಣಾಮವಾಗಿ ಗೋಧಿಯ ಬೆಲೆ ಶೇ.11ರಷ್ಟು ಕುಂಠಿತವಾಗಿದೆ. ಹೀಗಾಗಿ ಆಮದಿನ...
Date : Monday, 29-04-2019
ಮುಂಬಯಿ: ಸಚಿವ ಪಿಯೂಶ್ ಗೋಯಲ್ ಅವರ ನೇತೃತ್ವದಲ್ಲಿ ಭಾರತೀಯ ರೈಲ್ವೇಯು ಮಹತ್ವದ ಸುಧಾರಣೆಗಳನ್ನು ಕಾಣುತ್ತಿದೆ. ಮಾನವ ರಹಿತ ಕ್ರಾಸಿಂಗ್ ನಿರ್ಮೂಲನೆಯಿಂದ ಹಿಡಿದು, ಶೇ. 100 ವಿದ್ಯುದೀಕರಣವನ್ನು ರೈಲ್ವೇ ಕಂಡಿದೆ. ಇದೀಗ ರೈಲುಗಳಲ್ಲಿ ಜನಜಂಗುಳಿಯನ್ನು ಕುಗ್ಗಿಸಲು ಪರಿಣಾಮಕಾರಿಯಾದ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಇದಕ್ಕಾಗಿ ಬಯೋಮೆಟ್ರಿಕ್...
Date : Monday, 29-04-2019
ಚೆನ್ನೈ: ಭಾರತದ 7 ಭಾಷೆಗಳಿಗಾಗಿ ಐಐಟಿ-ಮದ್ರಾಸ್ ಏಕೀಕೃತ ಬರಹ (unified script) ಅನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಭಾರತಿ ಸ್ಕ್ರಿಪ್ಟ್ ಎಂದು ಹೆಸರಿಟ್ಟಿದೆ. ಮಾತ್ರವಲ್ಲದೇ, ಬಹು-ಭಾಷಾ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR) ಯೋಜನೆಯನ್ನು ಬಳಸಿ ಭಾರತಿ ಸ್ಕ್ರಿಪ್ಟ್ನಲ್ಲಿನ ದಾಖಲೆಗಳನ್ನು ಓದುವ ವಿಧಾನವನ್ನೂ ಅಭಿವೃದ್ಧಿಪಡಿಸಿದೆ. ದೇವನಾಗರಿ,...
Date : Monday, 29-04-2019
ನವದೆಹಲಿ: ಪರ್ಯಾಯ ಉತ್ಪಾದನಾ ನೆಲೆಯನ್ನು ಹುಡುಕುತ್ತಿರುವ ಸುಮಾರು 200 ಅಮೆರಿಕನ್ ಕಂಪನಿಗಳು, ಲೋಕಸಭಾ ಚುನಾವಣೆಯ ಬಳಿಕ ಚೀನಾದಿಂದ ಭಾರತಕ್ಕೆ ತಮ್ಮ ಉತ್ಪಾದನಾ ಸೌಲಭ್ಯವನ್ನು ವರ್ಗಾವಣೆ ಮಾಡಲು ಸಜ್ಜಾಗುತ್ತಿದೆ ಎಂದು ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಸ್ಟ್ರ್ಯಾಟಜಿಕ್ ಆಂಡ್ ಪಾಟ್ನರ್ಶಿಪ್ ಫೋರಂ(USISPF) ಅಧ್ಯಕ್ಷ ಮುಕೇಶ್ ಅಘಿ...
Date : Monday, 29-04-2019
ನವದೆಹಲಿ: ಮುಂಬರುವ ಸೆಪ್ಟಂಬರ್ 30 ರ ವೇಳೆಗೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗದ ಪಾನ್ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸುವ ಬಗ್ಗೆ ಆದಾಯ ತೆರಿಗೆ ಇಲಾಖೆಯು ಚಿಂತನೆ ಆರಂಭಿಸಿದೆ. 44 ಕೋಟಿ ಪಾನ್ಕಾರ್ಡ್ ಬಳಕೆದಾರರ ಪೈಕಿ ಕೇವಲ 20 ಕೋಟಿ ಮಂದಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿದ್ದಾರೆ....
Date : Monday, 29-04-2019
ತಿರುವನಂತಪುರಂ: ಮೂವರು ಮಹಿಳೆಯರು ನಕಲಿ ಮತದಾನ ಮಾಡುವ ಸಿಸಿಟಿವಿ ದೃಶ್ಯಾವಳಿಗಳನ್ನು ಮಲಯಾಳಂ ಟಿವಿ ಚಾನೆಲ್ಗಳು ಬಿತ್ತರಿಸಿವೆ. ಸಿಪಿಎಂ ಪಕ್ಷಕ್ಕೆ ಸೇರಿದವರು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಣ್ಣೂರು ಮತ್ತು ಕಾಸರಗೋಡು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ದೂರನ್ನೂ ನೀಡಿದ್ದಾರೆ....
Date : Monday, 29-04-2019
ನವದೆಹಲಿ: ಇಂದಿನ ಗೂಗಲ್ ಡೂಡಲ್ ಅನ್ನು ನಾಲ್ಕನೇ ಹಂತದ ಲೋಕಸಭಾ ಚುನಾವಣೆಗೆ ಸಮರ್ಪಣೆ ಮಾಡಲಾಗಿದೆ. ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅದರಲ್ಲಿ ಮೂರು ಈಗಾಗಲೇ ಸಂಪೂರ್ಣಗೊಂಡಿದೆ. ನಾಲ್ಕನೇ ಹಂತದ ಚುನಾವಣೆ ಇಂದು ನಡೆಯುತ್ತಿದೆ. ಒಟ್ಟು 72 ಕ್ಷೇತ್ರಗಳ 972 ಅಬ್ಯರ್ಥಿಗಳ...
Date : Monday, 29-04-2019
ನವದೆಹಲಿ: ದೇಶದಾದ್ಯಂತ ಇಂದು ನಾಲ್ಕನೆ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಬೆಳಗ್ಗಿನಿಂದಲೇ ಜನರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಅತ್ಯಧಿಕ ಪ್ರಮಾಣದಲ್ಲಿ ಮತದಾನ ಮಾಡಿ ಹಿಂದಿನ ದಾಖಲೆಯನ್ನು ಮುರಿಯುವಂತೆ ಕರೆ ನೀಡಿರುವ ಮೋದಿ, ‘ಹಿಂದಿನ ಮೂರು ಹಂತಗಳ ದಾಖಲೆಯನ್ನು ಇಂದು...
Date : Saturday, 27-04-2019
ನವದೆಹಲಿ : ಇಂದು ಸೇನಾಪಡೆಯ ಏಳು ಮಂದಿ ಮಾಜಿ ಯೋಧರು ದೆಹಲಿಯ ಕೇಂದ್ರ ಕಛೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆತ್ಮೀಯವಾಗಿ ಬರಮಾಡಿಕೊಂಡರು. ಮಾಜಿ ಲೆಫ್ಟಿನೆಂಟ್ ಜನರಲ್ ಜೆಬಿಎಸ್ ಯಾದವ್, ಲೆಫ್ಟಿನೆಂಟ್ ಜನರಲ್ ಆರ್ ಎನ್ ಸಿಂಗ್, ಲೆಫ್ಟಿನೆಂಟ್...
Date : Saturday, 27-04-2019
ನವದೆಹಲಿ : ಭಾರತದ ಖ್ಯಾತ ಕುಸ್ತಿಪಟು ಬಜರಂಗ್ ಪುನಿಯಾ ಅವರು ನ್ಯೂಯಾರ್ಕ್ನ ಐಕಾನಿಕ್ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಸೆಣಸಾಡಲಿರುವ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 25 ವರ್ಷದ ಪೂನಿಯಾ ಅವರು, ಪ್ರಸ್ತುತ ನಡೆಯುತ್ತಿರುವ ಏಷ್ಯನ್ ರಸ್ಲಿಂಗ್ ಚಾಂಪಿಯನ್ ಶಿಪ್ನಲ್ಲಿ...