ಚೆನ್ನೈ: ಭಾರತದ 7 ಭಾಷೆಗಳಿಗಾಗಿ ಐಐಟಿ-ಮದ್ರಾಸ್ ಏಕೀಕೃತ ಬರಹ (unified script) ಅನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಭಾರತಿ ಸ್ಕ್ರಿಪ್ಟ್ ಎಂದು ಹೆಸರಿಟ್ಟಿದೆ. ಮಾತ್ರವಲ್ಲದೇ, ಬಹು-ಭಾಷಾ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR) ಯೋಜನೆಯನ್ನು ಬಳಸಿ ಭಾರತಿ ಸ್ಕ್ರಿಪ್ಟ್ನಲ್ಲಿನ ದಾಖಲೆಗಳನ್ನು ಓದುವ ವಿಧಾನವನ್ನೂ ಅಭಿವೃದ್ಧಿಪಡಿಸಿದೆ.
ದೇವನಾಗರಿ, ಬಂಗಾಳಿ, ಗುರುಮುಖಿ, ಒರಿಯ, ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳನ್ನು ಏಕೀಕೃತಗೊಳಿಸಿ ಭಾರತಿ ಸ್ಕ್ರಿಪ್ಟ್ ಅಭಿವೃದ್ಧಿಪಡಿಸಲಾಗಿದೆ. ಉರ್ದು ಮತ್ತು ಇಂಗ್ಲೀಷ್ ಭಾಷೆಗಳ ಅಕ್ಷರ ವ್ಯವಸ್ಥೆ ವಿಭಿನ್ನವಾಗಿರುವ ಕಾರಣ ಇದುವರೆಗೆ ಅದನ್ನು ಸ್ಕ್ರಿಪ್ಟ್ನೊಳಗೆ ಏಕೀಕೃತಗೊಳಿಸಲಾಗಿಲ್ಲ. ಆದರೆ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
ಡಾ.ಶ್ರೀನಿವಾಸ್ ಚಕ್ರವರ್ತಿ ಅವರ ತಂಡ ಈ ಸಾಧನೆಯನ್ನು ಮಾಡಿದ್ದು, ಶ್ರವಣದೋಷವುಳ್ಳ ವ್ಯಕ್ತಿಗಳು ಬಳಸಬಹುದಾದ ಸಂಜ್ಞಾ ಭಾಷೆಯನ್ನು ರಚಿಸಬಲ್ಲ ಫಿಂಗರ್ ಸ್ಪೆಲ್ಲಿಂಗ್ ವಿಧಾನವನ್ನೂ ಈ ತಂಡ ರಚನೆ ಮಾಡಿದೆ.
ಸಾಮಾನ್ಯವಾಗಿ, ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಸ್ಕೀಮ್ಗಳು, ಮೊದಲು ಡಾಕ್ಯುಮೆಂಟ್ ಅನ್ನು ಪಠ್ಯ ಮತ್ತು ಪಠ್ಯ ರಹಿತವಾಗಿ ಪ್ರತ್ಯೇಕಿಸುತ್ತದೆ. ಪಠ್ಯವನ್ನು ನಂತರ ಪ್ಯಾರಾಗಳು, ವಾಕ್ಯ ಪದಗಳು ಮತ್ತು ಅಕ್ಷರಗಳಾಗಿ ವಿಭಜಿಸಲಾಗುತ್ತದೆ. ASCII ಅಥವಾ ಯೂನಿಕೋಡ್ನಂತಹ ಕೆಲವು ಗುರುತಿಸಬಹುದಾದ ಸ್ವರೂಪದಲ್ಲಿ ಪ್ರತಿ ಅಕ್ಷರವು ಪಾತ್ರವಾಗಿ ಗುರುತಿಸಲ್ಪಡುತ್ತದೆ. ಅಕ್ಷರವು ಮೂಲಭೂತ ವ್ಯಂಜನ, ವ್ಯಂಜನ ಮಾರ್ಪಾಡುಗಳು, ಸ್ವರಗಳು ಮುಂತಾದ ವಿವಿಧ ಘಟಕಗಳನ್ನು ಹೊಂದುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.