Date : Monday, 22-07-2019
ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಬಲೂಚಿಸ್ತಾನ ಹೋರಾಟಗಾರರಿಂದ ತೀವ್ರ ಸ್ವರೂಪದ ಪ್ರತಿಭಟನೆ ವ್ಯಕ್ತವಾಗಿದೆ. ‘ನಯಾ ಪಾಕಿಸ್ಥಾನ್’ ಬಗ್ಗೆ ವಾಷ್ಟಿಂಗ್ಟನ್ ಅರೆನಾದಲ್ಲಿ ಬಗ್ಗೆ ಅವರು ಮಾಡುತ್ತಿದ್ದ ಭಾಷಣಕ್ಕೆ ಬಲೂಚ್ ಹೋರಾಟಗಾರರು ಅಡ್ಡಿಯುಂಟು ಮಾಡಿದ್ದಾರೆ. ಪಾಕಿಸ್ಥಾನದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ....
Date : Monday, 22-07-2019
ನವದೆಹಲಿ: ಸೇನಾ ತರಬೇತಿಯನ್ನು ಪಡೆಯುವ ಮಹೇಂದ್ರ ಸಿಂಗ್ ಧೋನಿ ಅವರ ಆಶಯಕ್ಕೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಅಸ್ತು ಎಂದಿದ್ದಾರೆ. ಧೋನಿ ಭಾರತೀಯ ಸೇನೆಯ ಪ್ಯಾರಚೂಟ್ ರೆಜಿಮೆಂಟ್ ಬೆಟಾಲಿಯನ್ನಲ್ಲಿ ಎರಡು ತಿಂಗಳುಗಳ ಕಾಲ ತರಬೇತಿಯನ್ನು ಪಡೆದುಕೊಳ್ಳಲಿದ್ದಾರೆ. ಗೌರವ ಲೆಫ್ಟಿನೆಂಟ್ ಕರ್ನಲ್...
Date : Monday, 22-07-2019
ನವದೆಹಲಿ: ಐಐಟಿ ದೆಹಲಿ ಆವರಣದಲ್ಲಿ ಇನ್ನು ಮುಂದೆ ಸೋಲಾರ್ ಚಾಲಿತ ಸೈಕಲ್ ರಿಕ್ಷಾಗಳು ಓಡಾಡಲಿವೆ. ಕೇಂದ್ರ ಸರ್ಕಾರದಡಿಯಲ್ಲಿರುವ ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಸಿಇಎಲ್) ತನ್ನ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮದಡಿಯಲ್ಲಿ 10 ಸೋಲಾರ್ ಚಾಲಿತ ರಿಕ್ಷಾಗಳನ್ನು ಸೈಕಲ್ ರಿಕ್ಷಾ ಚಾಲಕರಿಗೆ ಹಸ್ತಾಂತರ ಮಾಡಿದೆ. ರಿಕ್ಷಾಗಳ ಮೇಲೆ 300-ವ್ಯಾಟ್ ಸಾಮರ್ಥ್ಯದ ಸೌರ...
Date : Monday, 22-07-2019
ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೆಪ್ಟೆಂಬರ್ 9 ರಂದು ಭಾರತಕ್ಕೆ ಒಂದು ದಿನದ ಭೇಟಿ ನೀಡಲಿದ್ದು, ತಮ್ಮ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆಯನ್ನು ನಡೆಸಲಿದ್ದಾರೆ. “ಇಸ್ರೇಲಿ ಪ್ರಧಾನಿ ಸೆಪ್ಟೆಂಬರ್ 9 ರಂದು ಕೆಲವೇ ಗಂಟೆಗಳ ಭೇಟಿಗಾಗಿ ಭಾರತಕ್ಕೆ...
Date : Monday, 22-07-2019
ಹೈದರಾಬಾದ್: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇಂದು ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಅನ್ನು ಉಡಾವಣೆಗೊಳಿಸಲಿದೆ. ಮಧ್ಯಾಹ್ನ 2.51 ರ ಸುಮಾರಿಗೆ ಆಂಧ್ರದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ. “ಚಂದ್ರಯಾನ-2 ಸೋಮವಾರ ಅತ್ಯಂತ ಯಶಸ್ವಿಯಾಗಿ...
Date : Monday, 22-07-2019
ನವದೆಹಲಿ: ಕೇವಲ 19 ದಿನಗಳಲ್ಲಿ 5 ಅಂತಾರಾಷ್ಟ್ರೀಯ ಬಂಗಾರದ ಪದಕಗಳನ್ನು ಗೆದ್ದು ಭಾರತದ ಗೌರವವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿರುವ ಹೆಮ್ಮೆಯ ಓಟಗಾರ್ತಿ ಹಿಮಾ ದಾಸ್ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಯುರೋಪಿನಲ್ಲಿ ಜರುಗಿದ ವಿವಿಧ...
Date : Saturday, 20-07-2019
ವಾರಣಾಸಿ: ತಮಿಳೇತರರಿಗೆ ತಮಿಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಕಲಿಸಲು ಸಹಾಯಕವಾಗುವಂತೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಭಾಷಾ ಪ್ರಯೋಗಾಲಯ (ಲ್ಯಾಂಗ್ವೇಜ್ ಲ್ಯಾಬ್) ಅನ್ನು ಸ್ಥಾಪನೆ ಮಾಡುತ್ತಿದೆ ತಮಿಳುನಾಡು. ತಮಿಳುನಾಡಿನ ಸಂಸ್ಕೃತಿ ಮತ್ತು ತಮಿಳು ಅಧಿಕೃತ ಭಾಷಾ ಸಚಿವ ಕೆ ಪಾಂಡಿಯರಾಜನ್ ಈ ಬಗ್ಗೆ ಘೋಷಣೆ...
Date : Saturday, 20-07-2019
ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಹೃದಯ ಸ್ತಂಭನದ ಕಾರಣದಿಂದ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಸುದೀರ್ಘ ಅವಧಿಯವರೆಗೆ ಆಡಳಿತ...
Date : Saturday, 20-07-2019
ನವದೆಹಲಿ: 2019 ರ ಡಿಸೆಂಬರ್‌ನಿಂದ ಎಲ್ಲಾ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಬಳಕೆ ಮಾಡುವುದು ಕಡ್ಡಾಯಗೊಂಡಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಫಾಸ್ಟ್‌ಟ್ಯಾಗ್ ಬಳಕೆಯನ್ನು ಕಡ್ಡಾಯಗೊಳಿಸುವಂತೆ ಸುತ್ತೋಲೆ ಹೊರಡಿಸಿದೆ. ಇದಕ್ಕಾಗಿ ಟೋಲ್ ಪ್ಲಾಜಾದಲ್ಲಿನ ಎಲ್ಲಾ ಲೇನ್ಗಳನ್ನು...
Date : Saturday, 20-07-2019
ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಜಯವನ್ನು ಪ್ರಾಪ್ತಿಸಿದ ವೀರ ಯೋಧರ ಸಾಹಸ ಮತ್ತು ಶೌರ್ಯವನ್ನು ಸ್ಮರಿಸುವ ಸಲುವಾಗಿ ಭಾರತೀಯ ಸೇನೆಯು ಭಾನುವಾರ (ಜುಲೈ21)ರಂದು ‘ಕಾರ್ಗಿಲ್ ವಿಜಯದ ಓಟ (ಕಾರ್ಗಿಲ್ ವಿಕ್ಟರಿ ರನ್)’ ಅನ್ನು ಆಯೋಜನೆಗೊಳಿಸುತ್ತಿದೆ. ‘ಕಾರ್ಗಿಲ್ ವೀರರ ಧೈರ್ಯ, ಶೌರ್ಯ...