ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಜಯವನ್ನು ಪ್ರಾಪ್ತಿಸಿದ ವೀರ ಯೋಧರ ಸಾಹಸ ಮತ್ತು ಶೌರ್ಯವನ್ನು ಸ್ಮರಿಸುವ ಸಲುವಾಗಿ ಭಾರತೀಯ ಸೇನೆಯು ಭಾನುವಾರ (ಜುಲೈ21)ರಂದು ‘ಕಾರ್ಗಿಲ್ ವಿಜಯದ ಓಟ (ಕಾರ್ಗಿಲ್ ವಿಕ್ಟರಿ ರನ್)’ ಅನ್ನು ಆಯೋಜನೆಗೊಳಿಸುತ್ತಿದೆ.
‘ಕಾರ್ಗಿಲ್ ವೀರರ ಧೈರ್ಯ, ಶೌರ್ಯ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುವ ಸಲುವಾಗಿ ದೆಹಲಿಯ ವಿಜಯ್ ಚೌಕ್ ನಿಂದ ಇಂಡಿಯಾ ಗೇಟ್ ವರೆಗೆ ಓಟವನ್ನು ಆಯೋಜಿಸಲಾಗುತ್ತಿದೆ ಎಂದು ಭಾರತೀಯ ಸೇನೆಯ ಎಡಿಜಿ ಪಿಐ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಓಟ ಭಾನುವಾರ ಬೆಳಿಗ್ಗೆ 6 ಗಂಟೆಗೆ ನಡೆಯಲಿದ್ದು, ಬೆಳಿಗ್ಗೆ 7: 30 ಕ್ಕೆ ಮುಕ್ತಾಯಗೊಳ್ಳಲಿದೆ. ” ಬನ್ನಿ, ಸೇನೆಯ ವೀರ ಯೋಧರೊಂದಿಗೆ ಓಡಿ” ಎಂದು ಸೇನೆಯು ಜನರಿಗೆ ಕರೆ ನೀಡಿದೆ.
ಈ ವರ್ಷ ಕಾರ್ಗಿಲ್ ಯುದ್ಧದ 20 ನೇ ವಾರ್ಷಿಕೋತ್ಸವವನ್ನು ‘Remember, Rejoice and Renew’ ಎಂಬ ಥೀಮ್ನೊಂದಿಗೆ ನಮ್ಮ ರಾಷ್ಟ್ರ ಆಚರಿಸುತ್ತದೆ ಎಂದು ರಕ್ಷಣಾ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ. “ನಾವು ನಮ್ಮ ಹುತಾತ್ಮರನ್ನು ನೆನಪಿಸಿಕೊಳ್ಳುತ್ತೇವೆ, ಅವರ ತ್ಯಾಗಗಳನ್ನು ಮೆಲುಕು ಹಾಕುತ್ತೇವೆ ಮತ್ತು ಅವರ ಬಗ್ಗೆ ಹೆಮ್ಮೆ ಮತ್ತು ಗೌರವವನ್ನು ಹುಟ್ಟುಹಾಕುತ್ತೇವೆ, ಈ ಮೂಲಕ ಕಾರ್ಗಿಲ್ ಯುದ್ಧದ ವಿಜಯವನ್ನು ಆಚರಿಸುತ್ತೇವೆ, ಸಂತೋಷಪಡುತ್ತೇವೆ ಮತ್ತು ತ್ರಿವರ್ಣ ಧ್ವಜದ ಗೌರವವನ್ನು ಕಾಪಾಡುವ ಸಂಕಲ್ಪವನ್ನು ನವೀಕರಿಸುತ್ತೇವೆ ” ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಆಚರಣೆಗಳು ಜುಲೈ 25 ರಿಂದ 27 ರವರೆಗೆ ದ್ರಾಸ್ ಮತ್ತು ನವದೆಹಲಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಡೆಯಲಿವೆ. ಆದರೂ, ಪ್ರಮುಖ ಕಾರ್ಯಕ್ರಮಕ್ಕೆ ಹಿನ್ನಲೆಯಾಗಿ ಜುಲೈ ಮೊದಲ ವಾರದಿಂದಲೇ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ.
ಜುಲೈ 14 ರಂದು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ವಿಜಯ ಜ್ಯೋತಿಯನ್ನು ಬೆಳಗಿಸಲಾಗಿದ್ದು, ಇದು 11 ನಗರಗಳ ಮೂಲಕ ಪ್ರಯಾಣಿಸಿ ಅಂತಿಮವಾಗಿ ದ್ರಾಸ್ನ ‘ಕಾರ್ಗಿಲ್ ಯುದ್ಧ ಸ್ಮಾರಕ’ ದಲ್ಲಿರುವ ಶಾಶ್ವತ ಜ್ವಾಲೆಯೊಂದಿಗೆ ವಿಲೀನವಾಗಲಿದೆ.
‘एक दौड़ शहीदों के नाम’
To pay tribute to the courage, valour and sacrifice of the Heroes of Kargil, Kargil Victory Run is being organised #NewDelhi at #VijayChowk 0600Hrs 21 July 2019. Come run with the Army Bravehearts#Sacrifice #Bravehearts #VijayChowk pic.twitter.com/BACBdsDvvq
— ADG PI – INDIAN ARMY (@adgpi) July 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.