ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೆಪ್ಟೆಂಬರ್ 9 ರಂದು ಭಾರತಕ್ಕೆ ಒಂದು ದಿನದ ಭೇಟಿ ನೀಡಲಿದ್ದು, ತಮ್ಮ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆಯನ್ನು ನಡೆಸಲಿದ್ದಾರೆ.
“ಇಸ್ರೇಲಿ ಪ್ರಧಾನಿ ಸೆಪ್ಟೆಂಬರ್ 9 ರಂದು ಕೆಲವೇ ಗಂಟೆಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಈ ಸಮಯದಲ್ಲಿ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವೆ ಯಾವುದೇ ಮಹತ್ವದ ಸಭೆ ನಿಗದಿಯಾಗಿಲ್ಲ, ಆದರೆ ಮುಂಬರುವ ದಿನಗಳಲ್ಲಿ ಉದ್ಯಮಿಗಳ ಸಮಾವೇಶ ಆಯೋಜನೆಗೊಳಿಸುವ ಬಗ್ಗೆ ಇಬ್ಬರು ತೀರ್ಮಾನ ತೆಗೆದುಕೊಳ್ಳಬಹುದು ”ಎಂದು ವರದಿಗಳು ತಿಳಿಸಿವೆ.
ವರದಿಯ ಪ್ರಕಾರ, ಭಾರತವು ಆಗಸ್ಟ್ 25 ಕ್ಕೆ ಆಗಮಿಸುವಂತೆ ನೆತನ್ಯಾಹು ಅವರಿಗೆ ತಿಳಿಸಿತ್ತು, ಆದರೆ ಇಸ್ರೇಲ್ ಸೆಪ್ಟೆಂಬರ್ ಆರಂಭದ ವೇಳೆಗೆ ಸಮಯವನ್ನು ನಿಗದಿಪಡಿಸಿದೆ. ಸೆಪ್ಟೆಂಬರ್ 9ರಂದು ಆಗಮಿಸುವ ದಿನಾಂಕವನ್ನು ಅಂತಿಮಗೊಳಿಸಿದೆ. ಅಂದು ಇಸ್ರೇಲಿನ ಮಾಜಿ ಪ್ರಧಾನಿ ಏರಿಯಲ್ ಶರೋನ್ ಅವರು ಭಾರತಕ್ಕೆ ಭೇಟಿ ನೀಡಿ ಸರಿಯಾಗಿ 16 ವರ್ಷ ಆಗುತ್ತದೆ. ಶರೋನ್ ಅವರು ಭಾರತಕ್ಕೆ ಭೇಟಿ ನೀಡಿದ ಯಹೂದಿ ರಾಷ್ಟ್ರದ ಮೊದಲ ಪ್ರಧಾನಿಯಾಗಿದ್ದಾರೆ.
ಇದಕ್ಕೂ ಮೊದಲು, ಇಸ್ರೇಲಿನಲ್ಲಿ ಚುನಾವಣೆ ನಡೆಯುವುದಕ್ಕೂ ಮುಂಚಿತವಾಗಿ ಪೆಬ್ರವರಿ 11ರಂದು ನೆತನ್ಯಾಹು ಮತ್ತು ಪ್ರಧಾನಿ ಮೋದಿಯವರು ಭೇಟಿಯಾಗಲು ಸಮಯ ನಿಗದಿಪಡಿಸಿದ್ದರು, ಆದರೆ ಕಾರಣಾಂತರಗಳಿಂದ ನೆತನ್ಯಾಹು ತಮ್ಮ ನವದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.