ಹೈದರಾಬಾದ್: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇಂದು ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಅನ್ನು ಉಡಾವಣೆಗೊಳಿಸಲಿದೆ. ಮಧ್ಯಾಹ್ನ 2.51 ರ ಸುಮಾರಿಗೆ ಆಂಧ್ರದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ.
“ಚಂದ್ರಯಾನ-2 ಸೋಮವಾರ ಅತ್ಯಂತ ಯಶಸ್ವಿಯಾಗಿ ಉಡಾವಣೆಗೊಳ್ಳಲಿದೆ” ಎಂದು ಇಸ್ರೋ ಮುಖ್ಯಸ್ಥ ಕೆ. ಸಿವನ್ ತಿಳಿಸಿದ್ದಾರೆ.
“ನಾವು ಉಡಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕಳೆದ ತಾಂತ್ರಿಕ ದೋಷ ಪತ್ತೆಯಾದ ಕಾರಣ ಮಿಷನ್ ಸ್ಥಗಿತಗೊಂಡಿತು. ಈ ಬಾರಿ ತಾಂತ್ರಿಕ ದೋಷವನ್ನು ಕಂಡುಹಿಡಿಯು ಮತ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವ ಪರೀಕ್ಷೆಗಳು ಒಂದೂವರೆ ದಿನಗಳವರೆಗೆ ನಡೆದಿದೆ. ಈ ಬಾರಿ ಅಂತಹ ತಾಂತ್ರಿಕ ವೈಫಲ್ಯ ಇರುವುದಿಲ್ಲ ಎಂಬ ಭರವಸೆಯನ್ನು ನಾನು ನೀಡಬಲ್ಲೆ ”ಎಂದು ಕೆ.ಸಿವನ್ ಹೇಳಿದ್ದಾರೆ.
“ಚಂದ್ರಯಾನ-1 ರಿಂದ ಚಂದ್ರನ ಬಗೆಗಿನ ಸಾಕಷ್ಟು ಹೊಸ ವಿಚಾರಗಳು ಪತ್ತೆಯಾದವು. ಚಂದ್ರನಲ್ಲಿ ನೀರಿನ ಕಣ ಇದೆ ಎಂದು ತಿಳಿದು ಬಂದಿತ್ತು. ಚಂದ್ರಯಾನ-2 ರಿಂದಲೂ ಸಾಕಷ್ಟು ಹೊಸ ವಿಚಾರಗಳು ಜಗತ್ತಿಗೆ ತಿಳಿಯಲಿದೆ” ಎಂದು ಇಸ್ರೋ ಹೇಳಿದೆ.
ಚಂದ್ರಯಾನ-2 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಸದಾ ಕತ್ತಲೇ ತುಂಬಿರುವ ಈ ಧ್ರುವಕ್ಕೆ ಇದುವರೆಗೆ ಯಾವ ದೇಶಗಳೂ ಸಂಶೋಧನಾ ಉಪಗ್ರಹವನ್ನು ಕಳುಹಿಸಿಕೊಟ್ಟಿಲ್ಲ. ಚಂದ್ರನ ಈ ಜಾಗವನ್ನು ತಲುಪಿದ ಮೊದಲ ದೇಶ ಎಂಬ ಖ್ಯಾತಿ ಭಾರತ ಪಾತ್ರವಾಗಲಿದೆ.
ISRO Chief, K Sivan: All preparatory work for #Chandrayaan-2 launch completed. Technical snags that developed in the first attempt have been rectified. Today evening, the countdown for the launch will begin. Chandrayaan-2 will perform 15 crucial maneuvers in days to come. pic.twitter.com/o35aT0U956
— ANI (@ANI) July 21, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.