ನವದೆಹಲಿ: ಕೇವಲ 19 ದಿನಗಳಲ್ಲಿ 5 ಅಂತಾರಾಷ್ಟ್ರೀಯ ಬಂಗಾರದ ಪದಕಗಳನ್ನು ಗೆದ್ದು ಭಾರತದ ಗೌರವವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿರುವ ಹೆಮ್ಮೆಯ ಓಟಗಾರ್ತಿ ಹಿಮಾ ದಾಸ್ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಯುರೋಪಿನಲ್ಲಿ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ಅವರು 5 ಬಂಗಾರದ ಪದಕಗಳನ್ನು ಜಯಿಸಿದ್ದಾರೆ.
“ಮೂರು ವಾರಗಳಲ್ಲಿ 5 ಚಿನ್ನದ ಪದಕಗಳು! ನೀವು ನಂಬಲಾಗದ ಸಾಧನೆಯನ್ನು ಮಾಡಿದ್ದೀರಿ ಹಿಮಾದಾಸ್. ಓಡುತ್ತಲೇ ಇರಿ, ಮಿಂಚುತ್ತಲೇ ಇರಿ. ಈ ಯಶಸ್ಸು 2020ರ ಒಲಿಂಪಿಕ್ ಗೇಮ್ಸ್ನಲ್ಲೂ ಮುಂದುವರೆಯಲಿದೆ” ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ.
Three weeks, five gold medals!
You’re incredible @HimaDas8 Keep sprinting, keep shining — and may this success set the pace for glory at the 2020 Olympic Games #PresidentKovind— President of India (@rashtrapatibhvn) July 21, 2019
ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ” ಕಳೆದ ಕೆಲವು ದಿನಗಳಲ್ಲಿ ಹಿಮಾದಾಸ್ ಅವರು ಮಾಡಿದ ಸಾಧನೆಗೆ ಭಾರತ ಹೆಮ್ಮೆಪಡುತ್ತಿದೆ. ವಿವಿಧ ಸ್ಪರ್ಧೆಗಳಲ್ಲಿ ಐದು ಚಿನ್ನದ ಪದಕವನ್ನು ಆಕೆ ತಾಯ್ನಾಡಿಗೆ ತಂದುಕೊಟ್ಟಿದ್ದಾಳೆ ಎಂಬುದು ಪುಳಕಗೊಳಿಸುವ ವಿಷಯವಾಗಿದೆ. ಆಕೆಗೆ ಅಭಿನಂದನೆಗಳು ಮತ್ತು ಆಕೆಯ ಭವಿಷ್ಯಕ್ಕೆ ಶುಭಾಶಯಗಳು” ಎಂದಿದ್ದಾರೆ.
India is very proud of @HimaDas8’s phenomenal achievements over the last few days. Everyone is absolutely delighted that she has brought home five medals in various tournaments. Congratulations to her and best wishes for her future endeavours.
— Narendra Modi (@narendramodi) July 21, 2019
ಶನಿವಾರ ಹಿಮಾದಾಸ್ ಅವರು, ಜೆಕ್ ರಿಪಬ್ಲಿಕ್ನ ನೋವೆ ಮೆಸ್ಟೊದಲ್ಲಿ ನಡೆದ 400 ಮೀಟರ್ ಓಟದಲ್ಲಿ ಅಗ್ರ ಸ್ಥಾನ ಗಳಿಸಿ ಈ ತಿಂಗಳ ಐದನೇ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಜುಲೈ 2ರಂದು ಯುರೋಪಿನಲ್ಲಿ ನಡೆದ ತನ್ನ ಮೊದಲ ಕಾಂಪಿಟಿಟಿವ್ ರೇಸ್ ಪೋಲೆಂಡ್ ಪೊಜ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ 200 ಮೀ ಓಟದಲ್ಲಿ, ಹಿಮಾ 23.65 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದುಕೊಂಡಿದ್ದಾರೆ.
ನಂತರ ಜುಲೈ 8 ರಂದು ಪೋಲೆಂಡ್ನಲ್ಲಿ ನಡೆದ ಕುಟ್ನೋ ಅಥ್ಲೆಟಿಕ್ಸ್ ಮೀಟ್ನಲ್ಲಿ ತನ್ನ ಎರಡನೇ 200 ಮೀ ಚಿನ್ನ ಗೆದ್ದಕೊಂಡಿದ್ದಾರೆ. ಅಸ್ಸಾಂನ ಈ ಓಟಗಾರ್ತಿ 23.97 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಕೇರಳ ಓಟಗಾರ್ತಿ ವಿ.ಕೆ. ವಿಸ್ಮಯಾ 24.06 ಸೆಕೆಂಡುಗಳ ಸಮಯದೊಂದಿಗೆ ಬೆಳ್ಳಿ ಪಡೆದುಕೊಂಡಿದ್ದಾರೆ.
ಜುಲೈ 13 ರಂದು, ಜೆಕ್ ರಿಪಬ್ಲಿಕ್ ನಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್ನಲ್ಲಿ 23.43 ಸೆಕೆಂಡುಗಳ ಸಮಯದೊಂದಿಗೆ ತನ್ನ ಮೂರನೇ 200 ಮೀ ಚಿನ್ನವನ್ನು ಹಿಮಾ ಗೆದ್ದುಕೊಂಡಿದ್ದಾರೆ.
ಜುಲೈ 17ರಂದು ನಡೆದ ಟ್ಯಾಬೊರ್ ಅಥ್ಲೆಟಿಕ್ಸ್ ಮೀಟ್ನ 200 ಮೀಟರ್ ಓಟದಲ್ಲಿ ನಾಲ್ಕನೇ ಚಿನ್ನವನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತವನ್ನು ಹೆಮ್ಮೆ ಪಡಿಸಿದ್ದಾರೆ.
ಇದೀಗ ಜುಲೈ 20ರಂದು ಜೆಕ್ ರಿಪಬ್ಲಿಕ್ನ ನೋವೆ ಮೆಸ್ಟೊದಲ್ಲಿ ನಡೆದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದು ಭಾರತವನ್ನು ಅತೀವ ಹೆಮ್ಮೆಪಡುವಂತೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.