Date : Thursday, 18-06-2020
ನವದೆಹಲಿ: ಕೊರೋನಾ ಸಂಕಷ್ಟದಿಂದ ಬಳಲುತ್ತಿರುವ ರಾಜ್ಯಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆ ಐದು ರಾಜ್ಯಗಳಿಗೆ ಒಟ್ಟು 960 ಕೋವಿಡ್-19 ಕೇರ್ ಭೋಗಿಗಳನ್ನು ನಿಯೋಜನೆ ಮಾಡಿದೆ. ದೆಹಲಿ, ಉತ್ತರಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶಗಳಲ್ಲಿ ಈ ಕೋವಿಡ್-19 ಬೋಗಿಗಳನ್ನು...
Date : Thursday, 18-06-2020
ನವದೆಹಲಿ: ಒಟ್ಟು ಜಾಗತಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ 83 ಲಕ್ಷಕ್ಕೆ ತಲುಪಿದೆ, ಸಾವುಗಳ ಸಂಖ್ಯೆ 4,48,000 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. ಗುರುವಾರ ಬೆಳಿಗ್ಗೆ ವೇಳೆಗೆ, ಒಟ್ಟು ಪ್ರಕರಣಗಳ ಸಂಖ್ಯೆ 83,29,221 ಆಗಿದ್ದರೆ, ಸಾವುಗಳು 4,48,474...
Date : Thursday, 18-06-2020
ನವದೆಹಲಿ: ಭಾರತ-ಚೀನಾ ಗಡಿಯ ಗಾಲ್ವಾನ್ ಕಣಿವೆಯಲ್ಲಿ ಉಭಯ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಯೋಧರ ತ್ಯಾಗ ಮತ್ತು ಬಲಿದಾನವನ್ನು ಇಡೀ ದೇಶ ಸ್ಮರಿಸುತ್ತಿದೆ, ಶ್ರದ್ಧಾಂಜಲಿಗಳನ್ನು ಅರ್ಪಣೆ ಮಾಡುತ್ತಿದೆ. ಹುತಾತ್ಮರಾದ ಯೋಧರಿಗೆ ಬಿಜೆಪಿ ವಿಶೇಷ ರೀತಿಯಲ್ಲಿ...
Date : Thursday, 18-06-2020
ಶ್ರೀನಗರ: ಜಮ್ಮು -ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಿರಂತರವಾಗಿ ನಡೆಯುತ್ತಲೇ ಇದೆ. ಆವಂತಿಪೋರಾದ ಮೀಜ್ ಗ್ರಾಮದ ಪಂಪೋರೆ ಪ್ರದೇಶದಲ್ಲಿ ಉಗ್ರನೊಬ್ಬ ಭದ್ರತಾ ಪಡೆಗಳು ನಡೆಸಿದ ಗುಂಡೇಟಿಗೆ ಬಲಿಯಾಗಿದ್ದಾಗಿ ಕಣಿವೆ ರಾಜ್ಯದ ಪೊಲೀಸರು ಟ್ವೀಟ್ ಮೂಲಕ ಮಾಹಿತಿ...
Date : Thursday, 18-06-2020
ನವದೆಹಲಿ: ಕಲ್ಲಿದ್ದಲು ಗಣಿಗಾರಿಕೆ ವಿಚಾರದಲ್ಲಿಯೂ ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಖಾಸಗಿ ಕಂಪನಿಗಳಿಗೆ 41 ಕೋಲ್ ಬ್ಲಾಕ್ ಹರಾಜು ಪ್ರಕ್ರಿಯೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು....
Date : Thursday, 18-06-2020
ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ನಡೆದ ಘರ್ಷಣೆಯನ್ನು ಚೀನಾದ ಶತ್ರು ರಾಷ್ಟ್ರ ತೈವಾನ್‌ನ ಮಾಧ್ಯಮವೊಂದು ಅತ್ಯಂತ ವಿಶೇಷವಾಗಿ ಪ್ರತಿಬಿಂಬಿಸಿದೆ. ಭಾರತದ ಶ್ರೀರಾಮ ಚೀನಾದ ಡ್ರ್ಯಾಗನ್ ಅನ್ನು ಸಂಹರಿಸಿದ ಎಂಬ ಅರ್ಥ ನೀಡುವ ಚಿತ್ರವನ್ನು ಅದು ಪ್ರಕಟಿಸಿದೆ. ತೈವಾನ್ ಟೈಮ್ಸ್...
Date : Thursday, 18-06-2020
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಲ್ಲಿ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ 52.95 %ರಷ್ಟಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈವರೆಗೆ ಒಂದು ಲಕ್ಷದ ತೊಂಬತ್ತ ನಾಲ್ಕು ಸಾವಿರದ ಮುನ್ನೂರ ಇಪ್ಪತ್ತೈದು ಜನರಿಗೆ ಪೂರಕ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಲಾಗಿದೆ...
Date : Thursday, 18-06-2020
ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯನಾಗಿ ಭಾರತವು ಆಯ್ಕೆಯಾಗುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸದಸ್ಯತ್ವಕ್ಕೆ ಮತ ಚಲಾಯಿಸಿದ ರಾಷ್ಟ್ರಗಳ ಅಗಾಧ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಗುರುವಾರ ಬೆಳಿಗ್ಗೆ ಟ್ವೀಟ್ ಮಾಡಿದ ಮೋದಿ, “ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ...
Date : Thursday, 18-06-2020
ನವದೆಹಲಿ: ಪ್ರಧಾನಮಂತ್ರಿಯ ಸ್ವಾವಲಂಬಿ ಭಾರತದ ಕರೆಗೆ ಅನುಗುಣವಾಗಿ, ಕಲ್ಲಿದ್ದಲು ಸಚಿವಾಲಯವು ಗುರುವಾರ ವಾಣಿಜ್ಯ ಗಣಿಗಾರಿಕೆಗಾಗಿ 41 ಬ್ಲಾಕ್‌ಗಳ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ. ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಸ್ವಾವಲಂಬನೆ ಸಾಧಿಸುವ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ ಎಂದು ವರದಿಗಳು ತಿಳಿಸಿವೆ....
Date : Thursday, 18-06-2020
ನವದೆಹಲಿ: ಕೇಂದ್ರ ಟೆಲಿಕಾಂ ಸಚಿವಾಲಯವು ತನ್ನ ವ್ಯಾಪ್ತಿಯಡಿ ಬರುವ ಎಲ್ಲಾ ಟೆಲಿಕಾಂ ಘಟಕಗಳಿಗೆ ಅವುಗಳ ಖರೀದಿಗಳನ್ನು ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಸೀಮಿತಗೊಳಿಸುವಂತೆ ನಿರ್ದೇಶಿಸಿದೆ. ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಹಿಂಸಾತ್ಮಕ ಮುಖಾಮುಖಿಯಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಚೀನಾದ...