ನವದೆಹಲಿ: ಕೊರೋನಾ ಸಂಕಷ್ಟದಿಂದ ಬಳಲುತ್ತಿರುವ ರಾಜ್ಯಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆ ಐದು ರಾಜ್ಯಗಳಿಗೆ ಒಟ್ಟು 960 ಕೋವಿಡ್-19 ಕೇರ್ ಭೋಗಿಗಳನ್ನು ನಿಯೋಜನೆ ಮಾಡಿದೆ. ದೆಹಲಿ, ಉತ್ತರಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶಗಳಲ್ಲಿ ಈ ಕೋವಿಡ್-19 ಬೋಗಿಗಳನ್ನು ರೈಲ್ವೆ ಇಲಾಖೆ ನಿಯೋಜಿಸಲು ಮುಂದಾಗಿದೆ.
ದೆಹಲಿಯಲ್ಲಿ 503 ಬೋಗಿಗಳು, ಉತ್ತರಪ್ರದೇಶದಲ್ಲಿ 372, ತೆಲಂಗಾಣ 60, ಆಂಧ್ರಪ್ರದೇಶ 20 ಮತ್ತು ಮಧ್ಯಪ್ರದೇಶದಲ್ಲಿ ಐದು ಕೊರೋನಾ ನಿಯಂತ್ರಣಕ್ಕಾಗಿ ಚಿಕಿತ್ಸೆ ನೀಡಲು ರೈಲ್ವೆ ಬೋಗಿಗಳನ್ನು ನಿಯೋಜನೆ ಮಾಡಲಾಗಿದೆ. ಈ ಬಗ್ಗೆ ಕೇಂದ್ರಾಡಳಿತ ಮತ್ತು ಸಂಬಂಧಿಸಿದ ರಾಜ್ಯಗಳಿಗೆ ಮನವಿಯನ್ನು ಕಳುಹಿಸಲಾಗಿದೆ ಎಂದೂ ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಕೊರೋನಾ ವಿರುದ್ಧ ಹೋರಾಟದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೊತೆಗೆ ರೈಲ್ವೆ ಇಲಾಖೆಯೂ ಸಹಕರಿಸುತ್ತಿದ್ದು, ಇದಕ್ಕಾಗಿ 5,231 ರೈಲ್ವೆ ಬೋಗಿಗಳನ್ನು ಕೋವಿಡ್ ಚಿಕಿತ್ಸೆಗಾಗಿ ನೀಡಲು ಯೋಜನೆಗಳನ್ನು ರೂಪಿಸಲಾಗಿದೆ ಎಂದೂ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ ಜನರ ಆರೋಗ್ಯ ರಕ್ಷಣೆಗೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನು ರೈಲ್ವೆ ಇಲಾಖೆಯೂ ಮುಂಚೂಣಿಯಲ್ಲಿ ಮಾಡುತ್ತಿದೆ ಎಂಬ ಭರವಸೆಯನ್ನೂ ಇಲಾಖೆ ನೀಡಿದೆ. ಇದೀಗ ರಾಷ್ಟ್ರದ ಆರೋಗ್ಯ ಭದ್ರತೆಯ ಕಾರಣಕ್ಕಾಗಿ ಕೋವಿಡ್ ಕೇರ್ ಬೋಗಿಗಳನ್ನು ಇಲಾಖೆಯ ವತಿಯಿಂದ ಒದಗಿಸಲಾಗಿದ್ದು, ಇಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ರಾಜ್ಯಗಳು ಕೊರೋನಾ ಚಿಕಿತ್ಸೆ ನೀಡಲು ವೈದ್ಯರು, ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಕೊರೋನಾ ವಿರುದ್ಧ ಯಶಸ್ವಿಯಾಗಿ ಹೋರಾಟ ನಡೆಸಲಿದ್ದಾರೆ ಎಂದೂ ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಇವರಿಗೆ ಸಹಾಯವನ್ನು ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯಿಂದಲೂ ಇಬ್ಬರು ಸಹಾಯಕರನ್ನು ಒದಗಿಸಲಾಗುತ್ತದೆ ಎಂದೂ ಇಲಾಖೆ ಮಾಹಿತಿ ನೀಡಿದೆ.
ಇನ್ನು ಕೊರೋನಾ ಐಸೋಲೇಷನ್ ವಾರ್ಡ್ಗಳಾಗಿ ಬಳಕೆ ಮಾಡುವ ಬೋಗಿಗಳನ್ನು ರಾಜ್ಯದ ಯಾವ ಪ್ರದೇಶದಲ್ಲಿ ಬೇಕಾದರೂ ಬಳಕೆ ಮಾಡಬಹುದಾಗಿದ್ದು, ಅಲ್ಲಿ ಸೋಂಕಿತರು ಮತ್ತು ಶಂಕಿತ ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿರುವುದಾಗಿಯೂ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.