Date : Monday, 13-07-2020
ನವದೆಹಲಿ: ಸುದ್ದಿ ಸಂಸ್ಥೆ ಪಿಟಿಐ ತನ್ನ ಕಛೇರಿಯ ಕಟ್ಟಡದ ಪ್ಲಾನ್ ಅನ್ನು ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿರುವ ಆರೋಪವನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪಿಟಿಐಗೆ ಭಾರೀ ಮೊತ್ತದ ದಂಡ ವಿಧಿಸಿದೆ. ಈ...
Date : Monday, 13-07-2020
ಬಂಡಿಪೋರಾ: ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಬಂಡಿಪೋರಾದ ಹಾಜಿನ್‌ನ ಚಂದರ್‌ಗೀರ್ ಮತ್ತು ಸಾಧುನಾರಾ ಪ್ರದೇಶಗಳಲ್ಲಿ 4 ಭಯೋತ್ಪಾದಕ ಸಹಚರರನ್ನು ಭದ್ರತಾ ಪಡೆಗಳು ಮತ್ತು ಬಂಡೀಪೋರಾ ಪೊಲೀಸರು ಬಂಧಿಸಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಬಂಧಿತ ಭಯೋತ್ಪಾದಕರಿಂದ ಎರಡು...
Date : Monday, 13-07-2020
ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಮತ್ತೆ ಐದು ತಿಂಗಳುಗಳ ಕಾಲ ಕೇಂದ್ರ ಸರ್ಕಾರ ಉಚಿತ ಆಹಾರ ಧಾನ್ಯಗಳನ್ನು ಬಡವರಿಗೆ ಹಂಚಿಕೆ ಮಾಡಲಿದೆ. ಜುಲೈನಿಂದ ನವೆಂಬರ್‌ವರೆಗೆ ದಿನಸಿ ವಿತರಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ 203 ಲಕ್ಷ ಮೆಟ್ರಿಕ್...
Date : Monday, 13-07-2020
ತಿರುವನಂತಪುರಂ: ಕೇರಳದ ಸುಪ್ರಸಿದ್ಧ ದೇಗುಲ ಅನಂತ ಪದ್ಮನಾಭದ ಆಡಳಿತವನ್ನು ರಾಜಮನೆತನಕ್ಕೆ ನೀಡುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ತಿರುವನಂತಪುರಂ ರಾಜಮನೆತನ ಸ್ವಾಗತಿಸಿದೆ. ವರದಿಗಳ ಪ್ರಕಾರ, “ಶ್ರೀ ಪದ್ಮನಾಭ ಸ್ವಾಮಿ ದೇಗುಲದ ವ್ಯವಹಾರಗಳ ಮೇಲಿನ ರಾಜಮನೆತನದ ಹಕ್ಕನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್ ತೀರ್ಪು ನಮಗೆ ಸಂತೋಷವನ್ನು ತಂದಿದೆ” ಎಂದು...
Date : Monday, 13-07-2020
ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೊರೋನವೈರಸ್‌ಗಾಗಿ ಒಟ್ಟು 2,19,103 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೋಮವಾರ ತಿಳಿಸಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಪರೀಕ್ಷೆಗಳ ಸಂಖ್ಯೆ 1,18,06,265 ತಲುಪಿದೆ. ಈ ನಡುವೆ, ಐಸಿಎಂಆರ್ ಸರ್ಕಾರಿ ಮತ್ತು ಖಾಸಗಿ...
Date : Monday, 13-07-2020
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಇಂದು 12 ನೇ ತರಗತಿ ಫಲಿತಾಂಶ 2020 ಎಂದು ಘೋಷಣೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ವಿವಿಧ ಅಧಿಕೃತ ವೆಬ್‌ಸೈಟ್‌ಗಳು, ಐವಿಆರ್‌ಎಸ್ ದೂರವಾಣಿ ಸಂಖ್ಯೆಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಈ ವೆಬ್‌ಸೈಟ್‌ಗಳ ಮೂಲಕ...
Date : Monday, 13-07-2020
ಶಿಮ್ಲಾ: ಬೃಹತ್ ಸಸ್ಯ ನೆಡುವ ಅಭಿಯಾನದ ಭಾಗವಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯೋಧರು ಹಿಮಾಚಲ ಪ್ರದೇಶದಲ್ಲಿ ಸುಮಾರು 7,000 ಸಸಿಗಳನ್ನು ನೆಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಚೀನಾದೊಂದಿಗಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ರಾಜ್ಯದ ಗಡಿ ಪ್ರದೇಶಗಳು ಸೇರಿದಂತೆ ಶಿಮ್ಲಾ, ಕಿನ್ನೌರ್, ಸಾಂಗ್ಲಾ ಕಣಿವೆ,...
Date : Monday, 13-07-2020
ನವದೆಹಲಿ: ಭಾರತವು ಕೊರೋನಾ ಸೊಂಕಿನ ವಿರುದ್ಧ ಯಶಸ್ವಿಯಾಗಿ ಹೋರಾಟ ನಡೆಸುತ್ತಿದೆ. ಈ ಹೋರಾಟದಲ್ಲಿ ಭದ್ರತಾ ಪಡೆಗಳ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಆಯೋಜಿಸಿದ್ದ ಅಖಿಲ ಭಾರತ...
Date : Monday, 13-07-2020
ನವದೆಹಲಿ: ಕೇರಳದ ಸುಪ್ರಸಿದ್ಧ ಅನಂತ ಪದ್ಮನಾಭ ದೇಗುಲದ ಆಡಳಿತವನ್ನು ರಾಜಮನೆತನಕ್ಕೆ ವಹಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ತೀರ್ಪನ್ನು ನೀಡಿದೆ. ಜಗತ್ತಿನ ಅತ್ಯಂತ ಸಿರಿವಂತ ದೇಗುಲ ಎಂಬ ಕೀರ್ತಿಗೆ ಇದು ಪಾತ್ರವಾಗಿದೆ. ಕೇರಳದ ಪದ್ಮನಾಭಸ್ವಾಮಿ ದೇವಾಲಯದ ನಿರ್ವಹಣೆಯಲ್ಲಿ ತಿರುವನಂತಪುರಂ ರಾಜಮನೆತನದ ಅಧಿಕಾರವನ್ನು ಗುರುತಿಸಿದ...
Date : Monday, 13-07-2020
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಹೆಮತಾಬಾದ್‌ನ ಬಿಜೆಪಿ ಶಾಸಕ ದೇಬೇಂದ್ರ ನಾಥ್ ರಾಯ್ ಅವರು ಸೋಮವಾರ ಬೆಳಿಗ್ಗೆ ತಮ್ಮ ಹಳ್ಳಿ ಮನೆಯ ಸಮೀಪವಿರುವ ಬಿಂದಾಲ್ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ಕೊಂದು ನಂತರ ನೇಣಿಗೆ ಹಾಕಲಾಯಿತು ಎಂದು ಶಾಸಕರ ಕುಟುಂಬಸ್ಥರು ಆರೋಪಿಸಿದ್ದಾರೆ....