ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಇಂದು 12 ನೇ ತರಗತಿ ಫಲಿತಾಂಶ 2020 ಎಂದು ಘೋಷಣೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ವಿವಿಧ ಅಧಿಕೃತ ವೆಬ್ಸೈಟ್ಗಳು, ಐವಿಆರ್ಎಸ್ ದೂರವಾಣಿ ಸಂಖ್ಯೆಗಳು ಮತ್ತು ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಆನ್ಲೈನ್ನಲ್ಲಿ ಪರಿಶೀಲಿಸಬಹುದು.
ಈ ವೆಬ್ಸೈಟ್ಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪ್ರವೇಶಿಸಬಹುದು. cbse.nic.in, www.results.nic.in ಮತ್ತು www.cbseresults.nic.inನಲ್ಲಿ ಫಲಿತಾಂಶ ಲಭ್ಯವಿದೆ.
ಶಾಲೆಗಳು ತಮ್ಮ ವಿದ್ಯಾರ್ಥಿಗಳ ಫಲಿತಾಂಶವನ್ನು ನೋಂದಾಯಿತ ಇಮೇಲ್ ಐಡಿಗಳಲ್ಲಿ ಪಡೆಯಬಹುದಾಗಿದೆ.
“ಆತ್ಮೀಯ ವಿದ್ಯಾರ್ಥಿಗಳೇ, ಪೋಷಕರು ಮತ್ತು ಶಿಕ್ಷಕರೇ! ಸಿಬಿಎಸ್ಇ ಹನ್ನೆರಡನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ ಮತ್ತು http://cbseresults.nic.in ನಲ್ಲಿ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ನಿಮ್ಮೆಲ್ಲರನ್ನೂ ನಾವು ಅಭಿನಂದಿಸುತ್ತೇವೆ. ನಾವು ಪುನರುಚ್ಚರಿಸುತ್ತೇನೆ, ವಿದ್ಯಾರ್ಥಿಗಳ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣ ನಮ್ಮ ಆದ್ಯತೆ “ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಟ್ವೀಟ್ ಮಾಡಿದ್ದಾರೆ.
Dear Students, Parents and Teachers!@cbseindia29 has announced the results of Class XII and can be accessed at https://t.co/kCxMPkzfEf.
We congratulate you all for making this possible. I reiterate, Student's health & quality education are our priority.
— Dr. Ramesh Pokhriyal Nishank (@DrRPNishank) July 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.