News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನ್ಯಾಯದಾನ ಮಾಡಬೇಕಾದವರೇ ಕಟಕಟೆಯಲ್ಲಿ !

ಬೇರೆ ಯಾರೇ ಆಗಿದ್ದರೂ ಈ ವೇಳೆಗೆ ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ಎಸೆದು ಮನೆಗೆ ಹೋಗುತ್ತಿದ್ದರು. ಜನಪರ ಸಂಘಟನೆಗಳ ಪ್ರತಿಭಟನೆ, ರಾಜ್ಯ ವಕೀಲರ ಪರಿಷತ್‌ನ ತೀವ್ರ ಆಂದೋಲನ, ಅತ್ತ ವಿಧಾನಸಭೆಯ ಉಭಯ ಸದನಗಳಲ್ಲೂ ಸದಸ್ಯರಿಂದ ರಾಜೀನಾಮೆಗೆ ಆಗ್ರಹ, ವಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ಗಳಿಂದ...

Read More

ಅನ್ನದಾತನಿಗೆ ಇದಕ್ಕಿಂತ ಘೋರ ಅವಮಾನ ಯಾವುದು?

ರಾಜ್ಯದಲ್ಲಿ ರೈತರು ಸಾಲುಸಾಲಾಗಿ ಈಗ ಆತ್ಮಹತ್ಯೆಗೆ ಶರಣಾಗುತ್ತಿರುವ ವಿದ್ಯಮಾನ ಅತ್ಯಂತ ಹೃದಯವಿದ್ರಾವಕ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿಯ ರೈತ ರತನ್ ಚಂದ್ ಕಿಶನ್ ಸಿಂಗ್ ಪಾಗಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಜೇವರ್ಗಿಯ ಇನ್ನೊಬ್ಬ ರೈತ ಮಹಿಳೆ ಸಾಲದ ಬವಣೆಯಿಂದ...

Read More

ಆ ಕರಾಳ ದಿನಗಳಿಗೀಗ ನಲವತ್ತು ವರ್ಷ

ದಾನಪ್ಪ ಒಣರೊಟ್ಟಿ, ಅಯ್ಯಪ್ಪ ಅರಕಾಲಚೆಟ್ಟಿ, ನಾರಾಯಣಪ್ಪ ಉಣಚಗಿ, ಶಂಕರ ರೂಡಗಿ, ಬಸೆಟ್ಟೆಪ್ಪಾ ಮುರನಾಳ, ಡೀಕಣ್ಣ ಕಂಠಿ, ರಂಗಪ್ಪ ಶೇಬಿನಕಟ್ಟಿ , ಹನಮಂತ ಕಂದಗಲ್ಲ… ಇವರೆಲ್ಲ ಯಾರೋ ಶ್ರೀಸಾಮಾನ್ಯರಿರಬಹುದೆಂದು ನಿಮಗನಿಸಬಹುದು. ಆದರೆ ಇವರೆಲ್ಲ 1975 ರ ತುರ್ತುಪರಿಸ್ಥಿತಿಯಲ್ಲಿ ಪ್ರಜಾತಂತ್ರದ ರಕ್ಷಣೆಗಾಗಿ ಹೋರಾಡಿ ಜೈಲು ಸೇರಿದವರು...

Read More

ಯೋಗಕ್ಕೀಗ ಯೋಗ, ಎಲ್ಲವೂ ಯೋಗಾಯೋಗ !

ಹಿಂದು ಸಂಸ್ಕೃತಿಯ ಕೊಡುಗೆಯಾಗಿರುವ ಭಾರತೀಯ ಮೂಲದ ಯೋಗಕ್ಕೆ ಈಗ ಶುಕ್ರದೆಸೆ. ಜೂ. 21ರಂದು `ಅಂತಾರಾಷ್ಟ್ರೀಯ ಯೋಗ ದಿನ’ ಎಂದು ವಿಶ್ವಸಂಸ್ಥೆ ಘೋಷಿಸಿರುವುದೇ ಇದಕ್ಕೆ ಹಿನ್ನೆಲೆ. ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡಲು ಶ್ರಮಿಸಿದವರು ಸಾಕಷ್ಟು ಮಂದಿ. ಈ ಹಿಂದೆ ಕೂಡ ಯೋಗದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ...

Read More

ಅಹಿಂದ ಅಂಧಪ್ರೇಮದ ಪರಾಕಾಷ್ಠೆ ದೇಶದ್ರೋಹಿಗಳಿಗೆ ಬಿಡುಗಡೆಯ ಭಾಗ್ಯ!

ಅಹಿಂದ ಪ್ರೇಮದ ಹಿಡನ್ ಅಜೆಂಡಾ ಇಟ್ಟುಕೊಂಡೇ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗ ಅಹಿಂದ ಅಂಧಪ್ರೇಮದ ಪರಾಕಾಷ್ಠೆಗೆ ತಲುಪಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಕಡುಬಡವರಿಗೆ ತಿಂಗಳಿಗೆ 30 ಕೆ.ಜಿ. ಅಕ್ಕಿಯನ್ನು ಒಂದು ರೂ. ದರದಲ್ಲಿ ಹಂಚಿದರು. ತನ್ಮೂಲಕ ದುಡಿದು ತಿನ್ನುವ ಮಂದಿಯನ್ನು ಶುದ್ಧ...

Read More

ಬಿಜೆಪಿಗೂ ಬೇಡವಾದ ತಬ್ಬಲಿ ಗೋಮಾತೆ!

ನಮ್ಮ ನಂಬಿಕೆಗಳೇ ತಲೆಕೆಳಗಾದರೆ, ನಾವು ನಂಬಿದವರೇ ನಮಗೆ ಕೈಕೊಟ್ಟರೆ ಏನಾಗಬಹುದು? ಈಗ ಆಗಿರುವುದು ಅದೇ. ಈಚೆಗೆ ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೆಕರ್ ಒಂದು ಹೇಳಿಕೆ ನೀಡಿದ್ದರು: `ಗೋವಾದಲ್ಲಿ ಗೋಹತ್ಯೆ ನಿಷೇಧವನ್ನು ಜಾರಿಗೊಳಿಸುವುದಿಲ್ಲ. ಏಕೆಂದರೆ ಈ ರಾಜ್ಯದಲ್ಲಿ ಶೇ. 40 ಮಂದಿಯ ಆಹಾರ ಗೋಮಾಂಸ....

Read More

ಮಾಧ್ಯಮಗಳ ಕಾಮಾಲೆ ಕಣ್ಣಿಗೆ ಕಾಣುವುದೇ ಇಲ್ಲ!

ಇತ್ತೀಚೆಗೆ ಹುಬ್ಬಳ್ಳಿ ನ್ಯಾಯಾಲಯವು ದಕ್ಷಿಣ ಭಾರತದ ನಾನಾ ಕಡೆ ಬಾಂಬ್ ಸ್ಫೋಟಿಸುವ ಸಂಚು ರೂಪಿಸಿದ ಆರೋಪದಡಿ ಸಿನಿ ಉಗ್ರರೆಂದು ಶಂಕಿಸಿ 2008 ರಲ್ಲಿ ಬಂಧಿತರಾಗಿದ್ದ 17 ಮಂದಿ ಮುಸ್ಲಿಂ ಯುವಕರನ್ನು ದೋಷಮುಕ್ತಿಗೊಳಿಸಿ ಬಿಡುಗಡೆ ಮಾಡಿತ್ತು. ಕೆಲವು ಮುಸ್ಲಿಂ ಒಡೆತನದ ಪತ್ರಿಕೆಗಳು ಅದನ್ನೇ ತಮ್ಮ...

Read More

ಹಾಗಿದ್ದರೆ ಸಲ್ಮಾನ್‌ಖಾನ್ ಕಾನೂನಿಗೆ ಅತೀತನೆ?

ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಗಾದೆ ಈಗ ಸಾಕಷ್ಟು ಸವಕಲಾಗಿ ಹೋಗಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಎಂಬ ಮಾತು ಕೂಡ ಅಷ್ಟೇ ಕ್ಲೀಷೆಯಾಗಿದೆ. ಈ ಗಾದೆಯ ಜಾಗದಲ್ಲಿ ಹೊಸ ಗಾದೆ ಸೃಷ್ಟಿಸಬೇಕಾಗಿದೆ. ಉಪ್ಪು ತಿಂದವರು ನೀರು...

Read More

ಭಾರತ ವಿಶ್ವ ಗುರುವಾಗುವ ಪರಿ ಹೀಗೆ!

ಆಪರೇಷನ್ ರಾಹತ್ ಅದೊಂದು ಅತೀ ಕ್ಲಿಷ್ಟಕರ ಸವಾಲಾಗಿತ್ತು. ಯುದ್ಧಪೀಡಿತ ಯೆಮೆನ್ ದೇಶದಿಂದ ಸಾವಿರಾರು ಜನ ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕರೆತರಬೇಕಾಗಿತ್ತು. ಯೆಮೆನ್‌ನಲ್ಲಾದರೋ ಹಿಂಸಾಚಾರದ ರುದ್ರನರ್ತನ. ಇರಾನ್ ಬೆಂಬಲಿತ ಶಿಯಾ ಬಂಡುಕೋರರು ಹಾಗೂ ಸೌದಿ ಅರೇಬಿಯಾ ನೇತೃತ್ವದ ಮಿತ್ರಪಡೆಗಳ ನಡುವಣ ಭಾರೀ ಯುದ್ಧ...

Read More

ಒತ್ತುವರಿ ತೆರವು ಓಕೆ, ಆದರೆ ಯಾರಿಗೋ ಶಿಕ್ಷೆ ಏಕೆ?

ಬೆಂಗಳೂರಿನ ಸಾರಕ್ಕಿ ಕೆರೆಯ ಹೆಸರನ್ನು ಬೆಂಗಳೂರಿನ ನಿವಾಸಿಗಳೇ ನೆಟ್ಟಗೆ ಕೇಳಿರಲಿಲ್ಲ. ಆದರೆ ಈಗ ಅವರಷ್ಟೇ ಅಲ್ಲ, ಇಡೀ ರಾಜ್ಯದ ಜನತೆಯ ಕಿವಿಗಳಿಗೆ ಆ ಹೆಸರು ತಲುಪಿದೆ. ಸಾರಕ್ಕಿ ಕೆರೆಯ ಹೆಸರು ಮಾತ್ರವಲ್ಲ, ಸಾರಕ್ಕಿ ಕೆರೆ ಒತ್ತುವರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಈಗ...

Read More

Recent News

Back To Top