ಮಂಗಳೂರು : ರಂಗಭೂಮಿಯ ಹೆಸರಾಂತ ತಂಡವಾಗಿರುವ ಮಂಗಳೂರಿನ ಲಕುಮಿ ಕಲಾವಿದರು ಮತ್ತು ಶ್ರೀ ಲಲಿತೆ ಕಲಾವಿದರು ಇದರ ಸಂಸ್ಥಾಪಕ ಹಾಗೂ ಲೀಡ್ಸ್ ಗ್ರೂಪ್ ಆಫ್ ಕಂಪೆನೀಸ್ನ ಲಯನ್ ಕಿಶೋರ್ ಡಿ. ಶೆಟ್ಟಿ ನಿರ್ಮಾಣದಲ್ಲಿ, ಕೆ. ಸೂರಜ್ ಶೆಟ್ಟಿ ರಚಿಸಿ ನಿರ್ದೇಶನ ಮಾಡಿದ ಲಕುಮಿ ಸಿನಿ ಕ್ರಿಯೇಶನ್ಸ್ರವರ “ಎಕ್ಕಸಕ” ತುಳು ಸಿನಿಮದ ಬಿಡುಗಡೆ ಸಮಾರಂಭ ಶುಕ್ರವಾರ ಬೆಳಿಗ್ಗೆ ನಗರದ ಜ್ಯೋತಿ ಚಿತ್ರ ಮಂದಿರದಲ್ಲಿ ಜರಗಿತು.
ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಜನಪದ ವಿದ್ವಾಂಸ ಡಾ| ಬಿ.ಎ. ವಿವೇಕ್ ರೈ ಅವರು ದೀಪ ಪ್ರಜ್ವನಗೊಳಿಸುವ ಮೂಲಕ “ಎಕ್ಕಸಕ” ತುಳು ಸಿನಿಮವನ್ನು ಬಿಡುಗಡೆಗೊಳಿಸಿದರು. ತುಳು ಚಿತ್ರರಂಗದ 44 ವರ್ಷಗಳ ಇತಿಹಾಸದಲ್ಲಿ ಇತ್ತೀಚಿನ 2-3 ವರ್ಷಗಳಲ್ಲಿ ತುಳು ಚಿತ್ರಗಳ ಸಂಖ್ಯೆ ಬಹಳ ಹೆಚ್ಚಾಗಿದೆ. ತುಳು ಚಿತ್ರರಂಗದಲ್ಲಿ ಇದೊಂದು ಉತ್ತಮ ಬೆಳವಣಿಯಾಗಿದ್ದು, ತುಳು ಭಾಷೆ, ತುಳು ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗುತ್ತಿದೆ ಎಂದು ಹೇಳಿದ ಡಾ| ಬಿ.ಎ. ವಿವೇಕ್ ರೈ ಅವರು ಎಕ್ಕಸಕ ಚಿತ್ರದ ಯಶಸ್ಸಿಗೆ ಶುಭಾ ಹಾರೈಸಿದರು.
ಎಕ್ಕಸಕ ಚಿತ್ರ ಮಂಗಳೂರಿನ ಜ್ಯೋತಿ, ಬಿಗ್ ಸಿನಿಮಾಸ್, ಪಿ.ವಿ.ಆರ್., ಸಿನಿಪೊಲಿಸ್, ಉಡುಪಿಯ ಕಲ್ಪನ, ಮಣಿಪಾಲದ ಐನೋಕ್ಸ್, ಮೂಡಬಿದ್ರೆಯ ಅಮರಶ್ರೀ, ಕಾರ್ಕಳದ ರಾಧಿಕಾ, ಬಿ.ಸಿ.ರೋಡ್ ನಕ್ಷತ್ರ, ಪುತ್ತೂರಿನ ಅರುಣಾ, ಬೆಳ್ತಂಗಡಿಯ ಭಾರತ್ ಈ ಎಲ್ಲಾ ಚಿತ್ರಮಂದಿರಗಳಲ್ಲಿ ಇಂದು ಏಕಕಾಲದಲ್ಲಿ ಬಿಡುಗಡೆಗೊಳ್ಳುತ್ತಿದೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದ್ದು, ಎಲ್ಲರೂ ಸಿನಿಮಾವನ್ನು ನೋಡಿ ಆಶೀರ್ವದಿಸಬೇಕೆಂದು ಚಿತ್ರದ ನಿರ್ಮಾಪಕರಾದ ಲಯನ್ ಕಿಶೋರ್ ಡಿ.ಶೆಟ್ಟಿ ಹೇಳಿದರು.
ಸಾಹಿತಿ ಸೀತಾರಾಮ್ ರೈ, ಚಲನಚಿತ್ರ ನಿರ್ಮಾಪಕ ಸಂಜೀವ ದಂಡಕೇರಿ, ದ.ಕ.ಜಿಲ್ಲಾ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮನಾಥ ಕೋಟ್ಯಾನ್, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಆಶೋಕ್ ಡಿ.ಕೆ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಷ ಜಗನಾಥ ಶೆಟ್ಟಿ ಬಾಳ,ಚಾಲಿಪೊಲಿಲು ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಕಲಾಪೋಷಕ ಮೋಹನ್ ರೈ ಕರ್ನೂರು, ಶ್ರೀಮತಿ ಕವಿತಾ ಶಾಸ್ತ್ರಿ ಮೊದಲಾದವರು ಅತಿಥಿಗಳಾಗಿದ್ದರು.
ನಿರ್ಮಾಪಕರಾದ ಲಯನ್ ಚಂದ್ರಹಾಸ್ ಶೆಟ್ಟಿ, ಲಯನ್ ಗಿರೀಶ್ ಶೆಟ್ಟಿ, ಚಿತ್ರದ ನಿರ್ದೇಶಕರಾದ ಕೆ. ಸೂರಜ್ ಶೆಟ್ಟಿ, ಹಾಡುಗಳಿಗೆ ಸಾಹಿತ್ಯ ಬರೆದಿರುವ ಮಯೂರ್ ಆರ್. ಶೆಟ್ಟಿ, ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಲಾವಿದರಾದ ಹಿತೇಶ್ ನಾಯ್ಕ್ ಮತ್ತು ಸೋನಲ್ ಮೊಂತೆರೋ, ಸಹನಟರಾದ ಅರವಿಂದ್ ಬೋಳಾರ್, ಶೋಭಾರಾಜ್ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.