
ಅದು 2023ರ ಫೆಬ್ರವರಿ. ಕೇರಳಾದಾದ್ಯಂತ ದೊಡ್ಡ ಸುದ್ದಿಯೊಂದು ಸ್ಪೋಟಗೊಂಡಿತ್ತು. ಎರ್ನಾಕುಲಂ ಜಿಲ್ಲೆಯ ಪ್ರಭಾವಿ ಚರ್ಚ್ವೊಂದರ ಪಾದ್ರಿಯನ್ನು ಪೊಲೀಸರು ಠಾಣೆಗೆ ಧರ ಧರನೆ ಎಳೆದೊಯ್ದಿದ್ದರು. ಮಹಿಳೆಯೊಬ್ಬಳಿಗೆ ಆಧ್ಯಾತ್ಮ ಕಲಿಸುವ ನೆವಪೊಡ್ಡಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಖಾಸಗಿ ವಿಡಿಯೋಗಳನ್ನು ಎಲ್ಲೆಡೆ ಪಸರಿಸಿದ ಆರೋಪದ ಮೇರೆಗೆ ಈ ಬಂಧನ ನಡೆದಿತ್ತು. ಮೇಲ್ನೋಟಕ್ಕೆ ಇದು ಪಾದ್ರಿಯೊಬ್ಬ ಮಾಡಿದ ನೀಚ ಕೃತ್ಯ. ಆದರೆ ಆ ಪಾದ್ರಿ ಎಷ್ಟು ಪ್ರಭಾವಿ ಚರ್ಚ್ಗೆ ಸೇರಿದ್ದ ಎಂಬ ಅಂಶ ಮಾತ್ರ ಎಲ್ಲರನ್ನೂ ದಂಗು ಬಡಿಸುತ್ತದೆ. ಕೇರಳದ ಮಲಂಕರ ಮಾರ್ ಥೋಮ ಸಿರಿಯನ್ ಚರ್ಚ್ ಬಗ್ಗೆ ಕೇಳಿದ್ದೀರಾ, ವರ್ಷಕ್ಕೊಮ್ಮೆ ಕೇರಳದ ಪತನಂತಿಟ್ಟದ ಮಾರಮನ್ನಲ್ಲಿ ನಡೆಯುವ ಆಧ್ಯಾತ್ಮಿಕ ಸಮಾವೇಶದ ಹೆಸರಿನಲ್ಲಿ ʼಮಾರ್ಮೋನ್ ಕನ್ವನ್ಷನ್ʼ ಆಯೋಜಿಸುವ ಈ ಚರ್ಚ್ ಜಾಗತಿಕ ಮಟ್ಟದಲ್ಲಿ ಸದಸ್ಯರನ್ನು ಹೊಂದಿದೆ. ಅಂತಹ ಚರ್ಚ್ಗೆ ಸೇರಿದ ಒಬ್ಬ ಪಾದ್ರಿ ಇಷ್ಟೊಂದು ನೀಚ ಕೃತ್ಯ ಎಸಗಿ ಜೈಲುಪಾಲಾದರೂ ಚರ್ಚ್ ಆತನನ್ನು ಪರೋಕ್ಷವಾಗಿ ರಕ್ಷಿಸಲು ಮುಂದಾಗಿತ್ತೇ ಹೊರತು ಆತನ ದುರ್ವತನೆಗೆ ಶಿಕ್ಷೆ ನೀಡಲಿಲ್ಲ.
ಧರ್ಮ ಬೋಧನೆಯ ಹೆಸರಿನಲ್ಲಿ ಅನೈತಿಕ ಕೃತ್ಯ
ಹಲವು ವರ್ಷಗಳ ಹಿಂದೆಯೇ ಸ್ಥಳೀಯ ಆನ್ಲೈನ್ ಚಾನಲ್ ಒಂದು ಪನವಿಲ ಪುತನ್ವೀಡ್ ಸಾಜಿ ಥೋಮಸ್ನ ಅನೈತಿಕ ಸಂಬಂಧಗಳ ಬಗ್ಗೆ ವರದಿ ಮಾಡಿತ್ತು. ಆತ ಹೋದ ಕಡೆಯೆಲ್ಲಾ ಲೈಂಗಿಕ ವಿವಾದಗಳು ಆತನನ್ನು ಹಿಂಬಾಲಿಸುತ್ತಿದ್ದವು. ಈ ವಿಷಯ ಚರ್ಚ್ಗೂ ಗೊತ್ತಿತ್ತು. ಆದರೂ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲು ಚರ್ಚ್ ಯಾವತ್ತು ಕೂಡ ಮುಂದಾಗಲಿಲ್ಲ. ಹೀಗಿರುವಾಗಲೇ ಗಂಡನಿಂದ ಬೇರ್ಪಟ್ಟಿದ್ದ ಮಹಿಳೆಯೊಬ್ಬಳು ಆತನ ಸಂಪರ್ಕಕ್ಕೆ ಬರುತ್ತಾಳೆ. ಆಕೆಯ ಕುಟುಂಬದ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಮತ್ತು ‘ಆಧ್ಯಾತ್ಮಿಕ ಪ್ರಗತಿ’ಗೆ ಸಹಾಯ ಮಾಡುತ್ತೇನೆ ಎಂದು ಈತ ಆಕೆಯ ಮನವೊಲಿಸಿದ್ದಾನೆ. ಆದರೆ ಆಕೆಯ ಸಮಸ್ಯೆಯನ್ನು ದೂರ ಮಾಡುವ ಬದಲು ಈತ ಆಕೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಅವಳ ಗಮನಕ್ಕೆ ತಾರದೆಯೇ ಮೊಬೈಲ್ನಲ್ಲಿ ಕೃತ್ಯವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ ಆಕೆಗೆ ಬ್ಲ್ಯಾಕ್ಮೇಲ್ ಮಾಡಲಾರಂಭಿಸಿದ್ದಾನೆ. ಮಹಿಳೆ ಅನೈತಿಕ ಸಂಬಂಧಕ್ಕೆ ನಿರಾಕರಿಸಿದಾಗ ಆಕೆಯ ಚಿತ್ರಗಳನ್ನು ಬಹಿರಂಗಗೊಳಿಸುವ ಬೆದರಿಕೆ ಹಾಕಿದ್ದಾನೆ. ಆಕೆ ಕೆಲಸ ಮಾಡುತ್ತಿದ್ದ ಕಂಪನಿಯ ವಾಟ್ಸಾಪ್ ಗ್ರೂಪ್ಗೆ ಅವಳ ವೈಯಕ್ತಿಕ ಚಿತ್ರಗಳನ್ನು ಶೇರ್ ಮಾಡಿದ್ದಾನೆ ಎಂದು ಆರೋಪವೂ ಇದೆ. ಕೊನೆಗೆ ಸಹಿಸಲಾರದೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಮಹಿಳೆಯ ದೂರು ನೀಡುತ್ತಿದ್ದಂತೆ ಎಸ್ಕೇಪ್ ಆಗಲು ಮುಂದಾಗಿದ್ದ ಸಾಜಿ ಥೋಮಸ್ನನ್ನು ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಇನ್ಸ್ಪೆಕ್ಟರ್ ಎಸ್ ವಿಜಯಶಂಕರ್ ನೇತೃತ್ವದ ತಂಡ ನಾರ್ಥ್ ರೈಲ್ವೇ ಸ್ಟೇಷನ್ ಪ್ರಾಂಗಣದಿಂದ ವಶಕ್ಕೆ ಪಡೆದಿತ್ತು. ಬಳಿಕ ಕಾಕ್ಕನಾಡ್ ಜಿಲ್ಲಾ ಜೈಲಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.
ಪಾದ್ರಿಯ ವಿಕೃತಿಯನ್ನು ಶಿಕ್ಷಿಸುವ ಬದಲು ರಕ್ಷಿಸಿತ್ತು ಚರ್ಚ್
ಅನೈತಿಕ ಸ್ವಭಾವದ ಕಾರಣದಿಂದ ಚರ್ಚ್ 2021ರಲ್ಲಿ ಈ ವಿಕೃತ ಪಾದ್ರಿಯನ್ನು ಅಮಾನತ್ತು ಮಾಡಿತ್ತು. ಈ ಅಮಾನತ್ತಿನ ಅವಧಿಯಲ್ಲೇ ಆತ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದ. ಕ್ರಿಶ್ಚಿಯನ್ ಚರ್ಚ್ಗಳು ಇಂತಹ ರೇಪಿಸ್ಟ್ ಪಾದ್ರಿಗಳನ್ನು ರಕ್ಷಿಸುವ ವಿಚಿತ್ರ ಅಭ್ಯಾಸವನ್ನು ಹೊಂದಿವೆ. ಸಾಜಿ ಥೋಮಸ್ ವಿಷಯದಲ್ಲೂ ಆಗಿದ್ದು ಇದೆ. ಆತ ತಪ್ಪು ಮಾಡಿದ್ದರೂ ಅಮಾನತ್ತು ವಾಪಾಸ್ ಪಡೆದು ಚರ್ಚ್ ಸೆಮಿನರಿಯಲ್ಲಿ ಆತನನ್ನು ಮುಂದುವರೆಸಲಾಗಿತ್ತು. ಚರ್ಚ್ ಪಾದ್ರಿಗಳ ತಪ್ಪುಗಳನ್ನು ಎಲ್ಲಾ ತಂತ್ರಗಾರಿಕೆ ಬಳಸಿ ಮುಚ್ಚಿಹಾಕುತ್ತದೆ ಎಂದು ಆರೋಪವಿದೆ. ‘ಸಸ್ಪೆನ್ಷನ್’ ಅವಧಿಯಲ್ಲಿ ಥೋಮಸ್ ತಪ್ಪಿ ಮಾಡಿದ್ದರೂ ಮಾರ್ ಥೋಮಾ ಚರ್ಚ್ ರಹಸ್ಯಮಯವಾಗಿ ಅವನನ್ನು ಮರು ನಿಯೋಜಿಸಿತ್ತು. ಈ ಮೂಲಕ ಅಪರಾಧಿಯೊಬ್ಬನಿಗೆ ಇನ್ನಷ್ಟು ಅಪರಾಧ ಮಾಡಲು ಅನುವು ಮಾಡಿಕೊಟ್ಟಿತ್ತು.
ಮಾರ್ ಥೋಮ ಸಿರಿಯನ್ ಚರ್ಚ್, ಮಾರ್ಮೋನ್ ಕನ್ವನ್ಷನ್ ಮತ್ತು ಪಾದ್ರಿ ಸಾಜಿ
10 ಲಕ್ಷ ಅನುಯಾಯಿಗಳನ್ನು ಹೊಂದಿರುವ ಮಾರ್ ಥೋಮ ಸಿರಿಯನ್ ಚರ್ಚ್ನ ಮಿಷನರಿ ವಿಭಾಗವಾದ ಮಾರ್ಥೋಮ ಇವಾಂಜೆಲಿಸ್ಟಿಕ್ ಅಸೋಸಿಯೇಷನ್, ಪ್ರತಿ ವರ್ಷ ಪತ್ತನಂತಿಟ್ಟ ಜಿಲ್ಲೆಯ ಕೊಝೆಂಚೆರ್ರಿ ಬಳಿಯ ಪಂಬಾ ನದಿಯ ತಳದಲ್ಲಿ ಮಾರಮೋನ್ ಸಮಾವೇಶವನ್ನು ಆಯೋಜಿಸುತ್ತದೆ. ಬೃಹತ್ ಡೇರೆಗಳನ್ನು ಸ್ಥಾಪಿಸಿ ಅಲ್ಲಿ ಜನರಿಗೆ ಆಧ್ಯಾತ್ಮದ ಹೆಸರಿನಲ್ಲಿ ಏನೇನೋ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಸಾಮೂಹಿಕ ಮತಾಂತರಗಳು ನಡೆಯುವ ಆರೋಪಗಳೂ ಇವೆ. ಈ ವರ್ಷ, ವಿವಾದಾತ್ಮಕ ಸಮಾವೇಶವು ಫೆಬ್ರವರಿ 13 ರಿಂದ 20 ರ ನಡುವೆ ನಡೆಯಲಿದೆ. ಅಸಲಿಗೆ ಪಾದ್ರಿ ಸಾಜಿ ಥೋಮಸ್ ಮಾರ್ಮೋನ್ ಸಮಾವೇಶದಲ್ಲೇ ಮಹಿಳೆಯನ್ನು ಪರಿಚಯ ಮಾಡಿಕೊಂಡು ಆಧ್ಯಾತ್ಮ ಹೆಸರಿನಲ್ಲಿ ಆಕೆಯನ್ನು ಬಲೆಗೆ ಬೀಳಿಸಿದ್ದ ಎನ್ನಲಾಗಿದೆ.
ಸಾಜಿ ಥೋಮಸ್ ಪ್ರಕರಣ ಕೇವಲ ಒಂದು ಅಪರಾಧಿ ಕೃತ್ಯವಲ್ಲ ಅದು ಆಧ್ಯಾತ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳ ಅನಾವರಣವೂ ಆಗಿದೆ. ಒಂದು ಕಡೆ ಸಮಾಜಸೇವೆ, ಧಾರ್ಮಿಕ ಬೋಧನೆ ಎನ್ನುತ್ತಾ ಸಮಾವೇಶಗಳನ್ನು ನಡೆಸಿ ಜನರನ್ನು ಮತಾಂತರ ಮಾಡುವುದು ಇನ್ನೊಂದು ಕಡೆ ಲೈಂಗಿಕ ದೌರ್ಜನ್ಯದಂತಹ ಅನಾಚಾರಗಳ ಮೂಲಕ ಸಮಾಜವನ್ನು ಶೋಷಣೆಗೊಳಪಡಿಸುವ ಕೃತ್ಯಗಳು ಚರ್ಚ್ಗಳ ಗೋಡೆಗಳ ಒಳಗೆ ಅನಾಯಾಸವಾಗಿ ನಡೆದುಕೊಂಡು ಬರುತ್ತಿವೆ ಎಂಬುದು ಈ ಘಟನೆಯಿಂದ ತಿಳಿದು ಬರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


