News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಮನ್‌ವೆಲ್ತ್ ಗೇಮ್ಸ್: 7ನೇ ದಿನ ಒಂದು ಚಿನ್ನ, ಒಂದು ಬೆಳ್ಳಿ ಗೆದ್ದ ಭಾರತ

ಬರ್ಮಿಂಗ್ಹ್ಯಾಮ್:  ಕಾಮನ್‌ವೆಲ್ತ್ ಗೇಮ್ಸ್ 2022 ರ 7ನೇ ದಿನ ಭಾರತ ತನ್ನ ಪದಕಪಟ್ಟಿಗೆ ಇನ್ನೂ ಎರಡು ಪದಕಗಳನ್ನು ಸೇರಿಸಿದೆ. ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಏಳನೇ ದಿನ ಭಾರತ ಗೆದ್ದುಕೊಂಡಿದೆ.

ಈ ಮೂಲಕ ಭಾರತದ ಪದಕಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಇದರಲ್ಲಿ 6 ಬಂಗಾರ, 7 ಬೆಳ್ಳಿ ಮತ್ತು 7 ಕಂಚು.

ಭಾರತದ ಸುಧೀರ್ ಪುರುಷರ ಹೆವಿವೇಯ್ಟ್ ಪ್ಯಾರಾ-ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡು ದೇಶಕ್ಕೆ ಹೆಮ್ಮೆ ತಂದಿದ್ದಾರೆ

ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಗೆದ್ದುಕೊಂಡಿದ್ದಾರೆ.

ಭಾರತದ ತಾರಾ ಷಟ್ಲರ್‌ಗಳಾದ ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಅವರು ಗುರುವಾರ ಆರಾಮದಾಯಕ ವಿಜಯಗಳನ್ನು ದಾಖಲಿಸಿದ ನಂತರ ಆಯಾ ಸಿಂಗಲ್ಸ್ ಈವೆಂಟ್‌ಗಳ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಟೇಬಲ್ ಟೆನಿಸ್ ಈವೆಂಟ್‌ನಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್ ಶ್ರೀಜಾ ಅಕುಲಾ, ಅನುಭವಿ ಮನಿಕಾ ಬಾತ್ರಾ ಮತ್ತು ರೀತ್ ರಿಶ್ಯಾ ಮಹಿಳೆಯರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top