ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪುಣೆ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ್ದಾರೆ. “ಈ ಯೋಜನೆಯು ಪುಣೆಯಲ್ಲಿ ನಗರ ಸಾರಿಗೆಗೆ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಒದಗಿಸುವ ಪ್ರಯತ್ನವಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನನ್ನ ಯುವ ಸ್ನೇಹಿತರೊಂದಿಗೆ ಪುಣೆ ಮೆಟ್ರೋದಲ್ಲಿ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿಯವರು ಬೆಳಗ್ಗೆ 11:30 ರ ಸುಮಾರಿಗೆ ಪುಣೆ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿದರು.
ಡಿಸೆಂಬರ್ 24, 2016 ರಂದು ಪ್ರಧಾನಿಯವರು ಈ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಒಟ್ಟು 32.2 ಕಿಮೀ ಪುಣೆ ಮೆಟ್ರೋ ರೈಲು ಯೋಜನೆಯಲ್ಲಿ 12 ಕಿಮೀ ವ್ಯಾಪ್ತಿಯನ್ನು ಪ್ರಧಾನಿ ಉದ್ಘಾಟಿಸಿದ್ದಾರೆ. ಸಂಪೂರ್ಣ ಯೋಜನೆಯನ್ನು ಒಟ್ಟು 11,400 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ” ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡಿಸೆಂಬರ್ ಅಂತ್ಯದ ವೇಳೆಗೆ ಪುಣೆ ನಗರದಲ್ಲಿ 33.29 ಕಿಮೀ ಜಾಲವನ್ನು ವಿಸ್ತರಿಸುವ ಗುರಿಯನ್ನು ಮಹಾಮೆಟ್ರೋ ಹೊಂದೆ. ಈವರೆಗೆ 11.97 ಕಿ.ಮೀ.ವರೆಗಿನ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಹತ್ತು ತಿಂಗಳಲ್ಲಿ ಉಳಿದ 21.32 ಕಿ.ಮೀ ಕಾಮಗಾರಿ ಪೂರ್ಣಗೊಳ್ಳಬೇಕಿದೆ.
On board the Pune Metro with my young friends. pic.twitter.com/QZi0AL0Uv2
— Narendra Modi (@narendramodi) March 6, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.