ನವದೆಹಲಿ: ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್, ಲಿಪ್ ಸಿಂಕಿಂಗ್ ಕಲಾವಿದ ಕಿಲಿ ಪೌಲ್ ಅವರು ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಮ್ಮನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಪ್ರಧಾನ ಮಂತ್ರಿ ಕಚೇರಿಯ (PMO) ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ ಟ್ವೀಟ್ಗಳ ಸ್ಕ್ರೀನ್ಶಾಟ್ಗಳನ್ನು ಪೋಸ್ಟ್ ಮಾಡಿರುವ ಅವರು, “ಇದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ ಮತ್ತು ಸರ್ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಇಂತಹ ಸುಂದರ ಸುದ್ದಿಯೊಂದಿಗೆ ದಿನ ಆರಂಭಗೊಂಡಿದ್ದು ಮನಸ್ಸಿಗೆ ಮುದನೀಡಿದೆ. ಇದು ನನಗೆ ಲಕ್ಷಾಂತರ ಬಾರಿ ಸ್ಫೂರ್ತಿ ನೀಡಿದೆ” ಎಂದು ಅವರು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಅವರ ಕೆಲಸದ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ, ವಿವಿಧ ಭಾಷೆಗಳಲ್ಲಿ ಪ್ರಸಿದ್ಧ ಭಾರತೀಯ ಹಾಡುಗಳ ವೀಡಿಯೊಗಳನ್ನು ಮಾಡುವಂತೆ ಯುವಕರಿಗೆ ಕರೆ ಸಲಹೆ ನೀಡಿದ್ದಾರೆ. ಇದು ಅವರನ್ನು ಜನಪ್ರಿಯಗೊಳಿಸುವುದಲ್ಲದೆ ಹೊಸ ಪೀಳಿಗೆಗೆ ದೇಶದ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದರು.
“ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ, ಯುವಕರು ತಮ್ಮದೇ ಆದ ರೀತಿಯಲ್ಲಿ ಭಾರತೀಯ ಭಾಷೆಗಳ ಜನಪ್ರಿಯ ಹಾಡುಗಳ ವೀಡಿಯೊಗಳನ್ನು ಮಾಡಬಹುದು” ಎಂದು ಪ್ರಧಾನಿ ತಮ್ಮ ಮಾಸಿಕ ರೇಡಿಯೊ ಭಾಷಣದಲ್ಲಿ ಹೇಳಿದರು, ಒಂದು ರಾಜ್ಯದ ಜನರು ಮತ್ತೊಂದು ರಾಜ್ಯದ ಹಾಡುಗಳೊಂದಿಗೆ ವೀಡಿಯೊಗಳನ್ನು ಮಾಡುವುದರಿಂದ “ಏಕ್ ಭಾರತ್, ಶ್ರೇಷ್ಠ ಭಾರತ್” ಅನ್ನು ಪ್ರತಿಬಿಂಬಿಸಿತಂದಾಗುತ್ತದೆ” ಎಂದಿದ್ದಾರೆ.
ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ವಿವಿಧ ಭಾರತೀಯ ಸಿನಿಮಾ ಹಾಡುಗಳಿಗೆ ಲಿಪ್ ಸಿಂಕಿಂಗ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇದು ಅವರನ್ನು ಸಾಕಷ್ಟು ಪ್ರಸಿದ್ಧರಾಗುವಂತೆ ಮಾಡಿದೆ.
View this post on Instagram
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.